Agripedia

ಮಾವು ಬೆಳೆ ಸಂರಕ್ಷಣೆಗೆ ಇಲ್ಲಿದೆ ಸುಲಭ ಉಪಯೋಗಗಳು…

22 December, 2022 4:32 PM IST By: Hitesh
Here are easy uses for mango crop preservation…

ಮಾವು ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯು ಕೆಲವು ಉಪಯುಕ್ತ ಮಾಹಿತಿಗಳನ್ನು ನೀಡಿದೆ.

ವಧು ಹುಡುಕಿಕೊಡಿ ಎಂದು ಕುದುರೆಯಲ್ಲಿ ಬಂದರು!

ಮಾವು ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಇವು ಪೂರಕವಾಗಿದ್ದು, ವಿವರ ಈ ರೀತಿ ಇದೆ.

ಹೂ ಬಿಡುವ ನಿಕಟ ಪೂರ್ವ ಸಸ್ಯ ಸಂರಕ್ಷಣಾ ಕ್ರಮಗಳು 

ಕೀಟ ಹಾಗೂ ರೋಗ: ಜಿಗಿಹುಳು, ಹೂತೆನೆ ಬುಡ ಕೊರಕ, ಥ್ರಿಪ್ಸ, ನುಸಿ, ಬೂದಿ ರೋಗ, ಕಾಡಿಗೆ ರೋಗದ ಶೇಷ, ಚಿಬ್ಬು ರೋಗ, ಹಿಟ್ಟು ತಿಗಣೆ ಒಟೆ ಕೊರಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಈ ಸಿಂಪರಣಾ ಔಷಧಿ ಬಳಸಿ.

ಚೀನಾವನ್ನು ಕಾಡುತ್ತಿರುವ ಬಿಎಫ್‌7 ವೈರಸ್‌ ಭಾರತಕ್ಕೂ ಎಂಟ್ರಿ!   

ಸಿಂಪಡಣಾ ಔಷಧಿ: ಥೈಯೋಮೆಥೋಕ್ಸಾಮ್  25% WG-0.25 ಗ್ರಾಂ/ಲೀ ನೀರಲ್ಲಿ ಕರಗುವ ಗಂಧಕ 80WP-3.0 ಗ್ರಾಂ/ಲೀ. ಅಥವಾ ಇಮಿಡಾಕ್ಲೋಪ್ರಿಡ್ 17.8% SL-0.3 ಮಿ.ಲಿ/ಲೀ + ನೀರಲ್ಲಿ ಕರಗುವ ಗಂಧಕ   80WP-3.0 ಗ್ರಾಂ/ಲೀ. ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ 5.0 ಇಅ- 1.0ಮಿ.ಲಿ/ಲೀ ನೀರಲ್ಲಿ ಕರಗುವ ಗಂಧಕ  80WP-3.0 ಗ್ರಾಂ/ಲೀ. ಅಥವಾ ಅಸಿಪೇಟ್   75  SP-1.0  ಗ್ರಾಂ/ಲೀ ನೀರಲ್ಲಿ ಕರಗುವ ಗಂಧಕ   80WP-3.0 ಗ್ರಾಂ/ಲೀ. ಸಿಂಪಡಿಸಬೇಕು.

PM Kisan| ಪಿ.ಎಂ ಕಿಸಾನ್‌ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ  

ಈ ಹಂತದಲ್ಲಿ ಔಷಧಿಗಳ ಸಿಂಪಡಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಸುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.

ಮುಖ್ಯ ಹೂ ಬಿಟ್ಟ ಅವಧಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಸ್ಯ ಸಂರಕ್ಷಣಾ  ಕ್ರಮಗಳು 

ಸಿಂಪರಣಾ ಔಷಧಿ: ಥೈಯೋಮೆಥೋಕ್ಸಾಮ್  25%  WG-0.25 ಗ್ರಾಂ/ಲೀ +ಹೆಕ್ಸಕೊನಜೋಲ್ 5% ಇಅ-1.0ಮಿ.ಲಿ/ಲೀ. ಅಥವಾ ಇಮಿಡಾಕ್ಲೋಪ್ರಿಡ್ 17.8% SL-0.3 ಮಿ.ಲಿ/ಲೀ +ಥೈಯೋಪನ್ಶೆಟ್ ಮಿಥೈಲ್ (Thiophenate Methyl)70% WP- 1.0 ಗ್ರಾಂ/ಲೀ. ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್  5.0 EC- 1.0ಮಿ.ಲಿ/ಲೀ +ಡೈಫೆಂಕೊನಜಾಲ್  25 EC- 1.0 ಮಿ.ಲಿ/ಲೀ. ಅಥವಾ ಅಸಿಪೇಟ್   75  SP-1.0  ಗ್ರಾಂ/ಲೀ +ಟೆಬೂಕೋನಜಾಲ್  25EC-0.5 ಮಿ.ಲಿ/ಲೀ. ಸಿಂಪಡಿಸಬೇಕು. ಈ ಅವಧಿಯಲ್ಲಿ ಮುಖ್ಯವಾಗಿ ಭಾದಿಸುವ ಕೀಟಗಳಲ್ಲಿ ಜಿಗಿಹುಳು, ಥ್ರಿಪ್ಸ್. ಮೈಟ್ಸ್, ಹೂತೆನೆ ಕ್ಯಾಟರ್ ಪಿಲ್ಲರ್, ಇತ್ಯಾದಿಗಳು ಮತ್ತು ರೋಗಗಳಲ್ಲಿ ಪ್ರಮುಖವಾದವುಗಳು, ಹೂತೆನೆ ಕಪ್ಪಾಗುವ ರೋಗ, ಎಲೆ ಚುಕ್ಕೆ ರೋಗ, ಬೂದಿ ರೋಗ, ಕಾಡಿಗೆ ರೋಗ ಇತ್ಯಾದಿಗಳು  ಹೂತೆನೆ ಮತ್ತು ಹೂಗಳನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಂಡರೆ ಕಾಯಿ ಕಚ್ಚುವ ಪ್ರಮಾಣ ಮತ್ತು ನಂತರದ ಇಳುವರಿ ಹೆಚ್ಚಾಗುತ್ತದೆ.

ಆದ್ದರಿಂದ ಈ ಹಂತದಲ್ಲಿ   ಸಿಂಪರಣಾ ಕ್ರಮಗಳನ್ನು ಪಾಲಿಸಬೇಕು.

ವಿಶೇಷ ಸೂಚನೆ: ಮೇಲ್ಕಂಡ ಮೂರು ಹಂತದ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ. ಶಾಂಪೋ ಅಥವಾ ಅಂಟನ್ನು  ಬೆರೆಸಿ ಸಿಂಪರಿಸಬೇಕು, ಇದರಿಂದ ಸಿಂಪಡಿಸಿದ ದ್ರಾವಣ ಎಲೆ, ಹೂ ಗಳಿಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ. 

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲ್ಲೂಕು, ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Heavy Rain| ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ!