Agripedia

“ಅರ್ಕಾ ನಿಂಬೆ” ಸ್ಪೆಷಲ್ ಬಳಸಿ ನಿಂಬೆಯಲ್ಲಿ ಅಧಿಕ ಇಳುವರಿ ಪಡೆಯಿರಿ!

26 October, 2022 5:39 PM IST By: Kalmesh T
Get high yields in lemons with “Arca Lemon” Special!

ನಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ನಿಂಬೆಯಲ್ಲಿ ಉತ್ತಮ ಇಳುವರಿ ಪಡೆಯಲು “ಅರ್ಕಾ ನಿಂಬೆ” ಬಳಸಲು ಸೂಚಿಸಿ ಬರೆದ ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀಮತಿ. ಹೀನಾ. ಎಮ್.ಎಸ್., ಡಾ. ಸವಿತಾ, ಬಿ. ಮತ್ತು ಡಾ. ಪ್ರೇಮ ಪಾಟೀಲ ಅವರ ಲೇಖನ ಇಲ್ಲಿದೆ.

ಇದನ್ನೂ ಓದಿರಿ: ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಹಸಿರೆಲೆ ಗೊಬ್ಬರದ ಪಾತ್ರ

ನಿಂಬೆಯು (ಸಿಟ್ರಸ್ ಆರಂಟಿಫೋಲಿಯಾ) ಆಮ್ಲಯುಕ್ತ ನಿಂಬೆ ಜಾತಿ ಹಣ್ಣುಗಳ ಒಂದು ಪ್ರಮುಖ ಹಣ್ಣಾಗಿದೆ. ಈ ಗುಂಪಿನಲ್ಲಿಯ ಇತರೆ ಪ್ರಮುಖ ಹಣ್ಣುಗಳೆಂದರೆ, ಮೋಸಂಬಿ ಮತ್ತು ಕಿತ್ತಲೆ ಹಣ್ಣುಗಳು.

ನಿಂಬೆ ಹಣ್ಣು ‘ಸಿʼ ಜೀವಸತ್ವದ ಆಗರವಾಗಿದೆಯಲ್ಲದೆ, ಆಕರ್ಷಕ ಹಳದಿ ಬಣ್ಣ ಮತ್ತು ಆಕಾರವನ್ನು ಹೊಂದಿದ್ದು, ಬೇಸಿಗೆ ಕಾಲದಲ್ಲಿ ಯಥೇಚ್ಛವಾಗಿ ತಂಪು ಪಾನೀಯ ತಯಾರಿಸಲು ಉಪಯೋಗಿಸುತ್ತಾರೆ.

ಅಲ್ಲದೇ, ಈ ಹಣ್ಣನ್ನು ಉಪ್ಪಿನಕಾಯಿ, ಕ್ಯಾಂಡೀಸ್, ಜಾಮ್, ಜೆಲ್ಲಿ ತಯಾರಿಕೆಯಲ್ಲಿ, ಔಷಧಿ ತಯಾರಿಕೆಯಲ್ಲಿ ಮತ್ತು ನಿಂಬೆಯ ಸಿಪ್ಪೆಯಿಂದ ಎಣ್ಣೆಯನ್ನು ತೆಗೆದು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ, ಕೂದಲಿನ ಎಣ್ಣೆ, ಸೋಪ್, ಟೂತ್ ಪೇಸ್ಟ್, ಮೌತ್ ವಾಷ್, ಸ್ಯಾನಿಟೈಝರ್ ತಯಾರಿಕೆಯಲ್ಲಿ ಕೂಡ ಉಪಯೋಗಿಸಲಾಗುತ್ತದೆ.

ನಿಂಬೆಯ ಸಿಪ್ಪೆಯನ್ನು ಪಶು ಆಹಾರವಾಗಿ ಬಳಕೆ ಮಾಡಲಾಗುತ್ತದೆ.

ರಾಗಿ ಬೆಳೆಯ ವೈಜ್ಞಾನಿಕ ಉತ್ಪಾದನಾ ತಾಂತ್ರಿಕತೆಗಳು

ಭಾರತ ಈ ಹಣ್ಣಿನ ತವರುರಾಗಿದ್ದು, ನಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ.

ಭಾರತದಲ್ಲಿ 296 ಸಾವಿರ ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 3397 ಸಾವಿರ ಮೆಟ್ರಿಕ್ ಟನ್‌ನಷ್ಟು ಉತ್ಪಾದಿಸಲಾಗುತ್ತಿದೆ (2018-19).

ಮುಖ್ಯವಾಗಿ ಆಂಧ್ರಪ್ರದೇಶ, ಮಹಾರಾಷ್ಟç, ಗುಜರಾತ್, ಕರ್ನಾಟಕ, ಉತ್ತರಖಂಡ, ಬಿಹಾರ, ಆಸ್ಸಾಂ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ.

ಕರ್ನಾಟಕದಲ್ಲಿ ಇದೊಂದು ಉತ್ತಮ ಆದಾಯ ತರುವ ಹಣ್ಣಿನ ಬೆಳೆಗಳಲ್ಲೊಂದಾಗಿದ್ದು, 14,140.76 ಹೆ. ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಸಾಸಿವೆ ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ಇಲ್ಲಿದೆ ಸರಳ ಮಾರ್ಗಗಳು

ಪ್ರಮುಖವಾಗಿ, ವಿಜಯಪುರ, ಗುಲ್ಬರ್ಗಾ, ತುಮಕೂರು, ಚಿತ್ರದುರ್ಗಾ, ಬೀದರ, ರಾಯಚೂರು, ಕೊಪ್ಪಳ ಮತ್ತು ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಈ ಹಣ್ಣಿನ ಬೇಸಾಯವನ್ನು ಕಾಣಬಹುದು.

ವಿಜಾಪುರ ಜಿಲ್ಲೆಯಲ್ಲಿ 12,293.23 ಹೆ. ಪ್ರದೇಶದಲ್ಲಿ 2,90,550 ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯೊಂದಿಗೆ ಬೆಳೆಯಲಾಗುತ್ತಿದೆ.

ಅರ್ಕಾ ನಿಂಬೆ ಸ್ಪೇಷಲ್

ನಿಂಬೆ ಜಾತಿಯ ಹಣ್ಣುಗಳನ್ನು ಚೆನ್ನಾಗಿ ನೀರು ಬಸಿದುಹೋಗುವ ಆಳವಾದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ.

ಅಧಿಕ ಮತ್ತು ಉತ್ತಮ ಗುಣಮಟ್ಟ ಇಳುವರಿಗಾಗಿ ಪ್ರಮುಖ ಲಘು ಪೋಷಕಾಂಶಗಳಾದ ಬೋರಾನ್, ಮ್ಯಾಂಗನೀಸ್, ಸತು, ಕಬ್ಬಿಣ ಮತ್ತು ತಾಮ್ರಗಳ ಬಳಕೆ ಬಹು ಉಪಯುಕ್ತ. ಮಣ್ಣಿನಲ್ಲಿ ಸಾವಾಯವ ಅಂಶದ ಕೊರತೆ, ರಸಗೊಬ್ಬರಗಳ ಹೆಚ್ಚಿನ ಬಳಕೆ ಮತ್ತು ಹೈಬ್ರೀಡ್ ತಳಿಗಳನ್ನು ಬೆಳೆಯುವುದರಿಂದ ಮಣ್ಣಿಗೆ ಲಘುಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗುತ್ತಿದೆ.

ಜಾನುವಾರುಗಳಲ್ಲಿ ಲಂಪಿ ಚರ್ಮ ರೋಗ; ಹತೋಟಿ ಕ್ರಮಗಳು

ಈ ಲಘು ಪೋಷಕಾಂಶಗಳನ್ನು ನಿಂಬೆ ಬೆಳೆಗೆ ಒದಗಿಸಲು, ಅರ್ಕಾ ನಿಂಬೆ ಸ್ಪೆಷಲ್ ಎಂಬ ಲಘು ಪೋಷಕಾಂಶಗಳ ಮಿಶ್ರಣವನ್ನು ಭಾರತೀಯಾ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರುಗಳು ಅಭಿವೃದ್ಧಿ ಪಡಿಸಿದ್ದಾರೆ. ಅರ್ಕಾ ನಿಂಬೆ ಸ್ಪೆಷಲ್ ಪೋಷಕಾಂಶಗಳ ಮಿಶ್ರಣ ದ್ರಾವಣವನ್ನು ಎಲೆಗಳ ಮೇಲೆ ಸಿಂಪರಣೆ ಮಾಡಿ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದು.

ಸಿಂಪಡಿಸುವ ವಿಧಾನ:

ಈ ಲಘು ಪೋಷಕಾಂಶಗಳ ಮಿಶ್ರಣವು ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ಸಿಂಪರಣೆ ಮಾಡುವುದು ಸರಳ ಹಾಗೂ ಲಾಭದಾಯಕ.
• ಪ್ರತಿ 15 ಲೀಟರ್ ನೀರಿಗೆ 75 ಗ್ರಾಂ ಅರ್ಕಾ ಲಿಂಬೆ ಸ್ಪೇಷಲ್ ಮತ್ತು ಎರಡು ಲಿಂಬೆ ಹಣ್ಣಿನ ರಸ ಹಾಗೂ ಒಂದು ರೂಪಾಯಿ ಮೌಲ್ಯದ ಒಂದು ಶ್ಯಾಂಪೂವನ್ನು ಚೆನ್ನಾಗಿ ಮಿಶ್ರಣ ಮಾಡಿ ತಯಾರಿಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು.

• ಹೂ ಬಿಡುವ ಒಂದು ತಿಂಗಳ ಮುಂಚಿತವಾಗಿ, ಹಣ್ಣು ಕೊಯ್ಲು ಮಾಡುವವರೆಗೂ ಪ್ರತಿ ತಿಂಗಳು ಸಿಂಪರಣೆ ಮಾಡಬೇಕು.

• ಒಂದು ಎಕರೆಗೆ ಸರಿಸುಮಾರು 6 ರಿಂದ 8 ಕೆ.ಜಿ. ಲಿಂಬೆ ಸ್ಪೇಷಲ್ ಬೇಕಾಗುತ್ತದೆ.

• ಈ ಸಿಂಪರಣೆಯನ್ನು ಬೆಳಿಗ್ಗೆ ಸೂರ್ಯ ಪ್ರಖರವಾಗುವ ಮೊದಲು ಎಲೆಗಳ ಕೆಳ ಮತ್ತು ಮೇಲ್ಬಾಗ ಹಾಗೂ ಹಣ್ಣುಗಳಿಗೆ ಸಿಂಪಡಿಸಿದಲ್ಲಿ ಹೆಚ್ಚು ಲಾಭದಾಯಕ.

ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!

* ಮ್ಯಾಂಗನೀಸ್ ಕೊರತೆ * ಬೊರಾನ್ ಕೊರತೆ * ಕಬ್ಬಿಣದ ಕೊರತೆ

ಸಿಂಪರಣೆಯ ಲಾಭಗಳು:

• ಅರ್ಕಾ ನಿಂಬೆ ಸ್ಪೆಷಲ್ ಅನ್ನು ಎಲೆಗಳಿಗೆ ಸಿಂಪರಣೆ ಮೂಲಕ ದೊರಕಿಸಿ ಕೊಡುವುದರಿಂದ ಪೋಷಕಾಂಶಗಳ ಕೊರತೆಗಳಿಂದ ಉಂಟಾಗುವ ನ್ಯೂನ್ಯತೆಗಳನ್ನು ಸರಿಪಡಿಸಬಹುದು.

• ಕಡಿಮೆ ರಸಗೊಬ್ಬರಗಳ ಬಳಕೆ.

• ಅಧಿಕ ಹಣ್ಣುಗಳ ಸಂಖ್ಯೆ, ಉತ್ತಮ ಗಾತ್ರ, ಆಕರ್ಷಕ ಬಣ್ಣ, ರುಚಿ ಮತ್ತು ಉತ್ತಮ ಗುಣಮಟ್ಟದ ಫಸಲಿನೊಂದಿಗೆ ಶೇ. 15-20ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

• ಅರ್ಕಾ ನಿಂಬೆ ಸ್ಪೆಷಲ್ ಕೃಷಿ ವಿಜ್ಞಾನ ಕೇಂದ್ರ, ಇಂಡಿಯಲ್ಲಿ ಲಭ್ಯವಿದ್ದು ಆಸಕ್ತರು ಸದುಪಯೋಗ ಪಡೆದು ಕೊಳ್ಳಬಹುದು.

• ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08539-200010/ 9731392506