Agripedia

ಕಾರ್ಮಿಕರ ಕೊರತೆ ನಿವಾರಣೆಗೆ ರೈತರ ಉಪಾಯ: ಕೀಟನಾಶಕ ಸಿಂಪಡಣೆಗೆ ಯಂತ್ರಗಳ ಬಳಕೆ!

25 December, 2022 12:59 PM IST By: Farmer The Journalist

ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ನವಲಗುಂದ ಭಾಗದ ರೈತರು ಟ್ರ್ಯಾಕ್ಟರ್‌ ಯಂತ್ರ ಅಳವಡಿಸಿಕೊಂಡಿದ್ದಾರೆ. ಇದರಿಂದ ಕಡಲೆ ಸೇರಿ ಇತರ ಬೆಳೆಗೆ ಕೀಟನಾಶಕ ಸಿಂಪಡಿಸುವ ಹಾಗೂ ನಾಲ್ಕೈದು ಜನ ಮಾಡುವ ಕೆಲಸವನ್ನು ಪೈಪ್ ಉಪಯೋಗಿಸಿ ಇಬ್ಬರೇ ಮಾಡುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ

ಆಧುನೀಕತೆ ಹೆಚ್ಚಿದಂತೆಲ್ಲ ಹಳ್ಳಿಗಳನ್ನು ತೊರೆದು ಜನ ಶಹರಗಳತ್ತ ಮುಖ ಮಾಡುತ್ತಿದ್ದಾರೆ. ಇದರಲ್ಲಿ ಶಿಕ್ಷಣಕ್ಕಾಗಿ ಹೊರ ಹೋಗುವ ಯುವಕರ ಸಂಖ್ಯೆ ಒಂದೆಡೆಯಾದರೆ, ಇನ್ನೂ ಸೂಕ್ತ ಉದ್ಯೋಗ ಮತ್ತು ಸಂಬಳದ ಕೊರತೆಯಿಂದ ಉತ್ತಮ ಕೂಲಿ ಅಥವಾ ಸಂಬಳದ ಕೆಲಸ ಹುಡುಕಿ ನಗರಗಳತ್ತ ಹೊರಟ ಜನರೆ ಬಹುಪಾಲು ಸಂಖ್ಯೆಯಲ್ಲಿದ್ದಾರೆ.

ಇದು ಕೇವಲ ಹಳ್ಳಿಗಳನ್ನು ವೃದ್ಧಾಶ್ರಮಗಳಂತೆ ಮಾಡುವುದಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಚಟುವಟಿಕೆಗೆಳಿಗೆ ಕೃಷಿ ಕೂಲಿ ಆಳುಗಳು ಇಲ್ಲದಂತೆ ಮಾಡಿದೆ. 

ನಗರಗಳಲ್ಲಿ ಕೃಷಿ ಕೂಲಿಗಿಂತ ಹೆಚ್ಚು ಕೂಲಿ ಸಿಗುವ ಕಾರಣ ಜನ ನಗರಗಳತ್ತ ಮುಖ ಮಾಡಿದ್ದಾರೆ. ಆದರೂ ರೈತರು ತಮ್ಮ ಕೆಲಸ ನಿಲ್ಲಿಸಲು ಆಗುವುದಿಲ್ಲ. ರೈತರ ಕೆಲಸ ಬಿಟ್ಟರೆ ನಾವೆಲ್ಲ ಉಪವಾಸ ಮಾಡುವ ಸ್ಥಿತಿ ನಿರ್ಮಾಣವಾದೀತು.

ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಬಿಳಿಜೋಳ ಖರೀದಿ ಕೇಂದ್ರ ಆರಂಭ | ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಹೀಗಿರುವಾಗ ನೂತನ ಪದ್ದತಿಗಳನ್ನು ಕೃಷಿಯಲ್ಲಿ ಬಳಸುವ ಮೂಲಕ ರೈತರು ಕೂಡ ಕಡಿಮೆ ಅವಧಿಯಲ್ಲಿ, ಕಡಿಮೆ ಜನರಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳುವ ಸುಲಭ ಮಾರ್ಗಗಳನ್ನು ಅನುಸರಿಸಲು ಕ್ರಮೇಣ ಮುಂದೆ ಬರುತ್ತಿದ್ದಾರೆ.

ಹೌದು ಈಗಾಗಲೇ ಕೃಷಿಯಲ್ಲಿ ಡ್ರೋಣ್‌ಗಳನ್ನು ಬಳಸಿದ್ದನ್ನು ನಾವು ನಿಮಗೆ ತಿಳಿಸಿದ್ದೇವು. ಈಗ ಕೀಟನಾಶಕ ಸಿಂಪರಣೆಗೂ ಯಂತ್ರಗಳನ್ನು ಬಳಸುವ ಮೂಲಕ ಕಡಿಮೆ ಕೆಲಸಗಾರರಿಂದ ಹೆಚ್ಚಿನ ಕೆಲಸ ಮಾಡಲು ರೈತರು ಮುಂದಾಗಿದ್ದಾರೆ.

ರೈತ ದೇಶದ ಬೆನ್ನೆಲುಬು ಎನ್ನುವ ಮಾತು ಕೇಳೇ ಇರ್ತೀವಿ, ಆದರೆ ರೈತನಿಗೆ ಆಧುನಿಕ ಕಾಲದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಯಾರು ಸಹ ಗಮನಹರಿಸುವುದಿಲ್ಲ. ಆದರೆ ತಮಗಿರುವ ಸಮಸ್ಯೆಗಳಿಗೆ ರೈತರು ತಾವೇ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ ಎಂಬುದನ್ನು ಈ ದೃಶ್ಯಗಳು ಖಚಿತ ಪಡಿಸುತ್ತವೆ.

ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ನವಲಗುಂದ ಭಾಗದ ರೈತರು ಟ್ರ್ಯಾಕ್ಟರ್‌ ಯಂತ್ರ ಅಳವಡಿಸಿಕೊಂಡಿದ್ದಾರೆ.

ಕಬ್ಬಿನ ಹೊಲಕ್ಕೆ ಬೆಂಕಿ..50 ಎಕರೆ ಕಬ್ಬು ಭಸ್ಮ 

ಇದರಿಂದ ಕಡಲೆ ಸೇರಿ ಇತರ ಬೆಳೆಗೆ ಕೀಟನಾಶಕ ಸಿಂಪಡಿಸುವ ಹಾಗೂ ನಾಲ್ಕೈದು ಜನ ಮಾಡುವ ಕೆಲಸವನ್ನು ಪೈಪ್ ಉಪಯೋಗಿಸಿ ಇಬ್ಬರೇ ಮಾಡುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.

ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಡಲೆ ಬಿತ್ತನೆ ಕ್ಷೇತ್ರ ಹೆಚ್ಚಿದೆ. ಈಚೆಗೆ ಸುರಿದ ಮಳೆಗೆ ಬೆಳೆ ನಳನಳಿಸುತ್ತಿದೆ. ಕೃಷಿ ಚಟುವಟಿಕೆ ಚುರುಕು ಪಡೆದಿರುವುದರಿಂದ ಔಷಧ ಸಿಂಪಡಿಸಲು ಕೂಲಿ ಕಾರ್ಮಿಕರು ಕೈಗೆ ಸಿಗುತ್ತಿಲ್ಲ. ಮನೆಗೆ ಹೋಗಿ ಕರೆದರೂ ಬರುತ್ತಿಲ್ಲ.

ಅಷ್ಟರ ಮಟ್ಟಿಗೆ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಹೀಗಾಗಿ ರೈತರು ಜಮೀನಿನಲ್ಲಿ ಬೆಳೆದ ಕಡಲೆ ಸೇರಿದಂತೆ ಮುಂತಾದ ಬೆಳೆಗಳಿಗೆ ಟ್ರ್ಯಾಕ್ಟರ್-ಯಂತ್ರದ ಮೂಲಕ ಕೀಟನಾಶಕ ಸಿಂಪಡಿಸಲು ಮುಂದಾಗಿದ್ದು, ಆಳುಗಳ ಕೊರತೆ ನೀಗಿದಂತಾಗಿದೆ. ಸಕಾಲಕ್ಕೆ ಬೆಳೆಗಳಿಗೂ ಔಷಧ ಸಿಂಪಡಿಸಲು ಸಾಧ್ಯವಾಗಿದೆ.

ಸುದ್ದಿ ಮತ್ತು ವಿಡಿಯೋ: ವಿನೋದ್‌ ಇ.

ರೈತ ಪತ್ರಕರ್ತ (FTJ), ಕೃಷಿ ಜಾಗರಣ