Success stories

Tree Man : 3 ಎಕರೆ ಜಮೀನು ಮಾರಿ, 1 ಕೋಟಿ ಸಸಿ ನೆಟ್ಟ ‘ಟ್ರೀ ಮ್ಯಾನ್ʼ ! ಯಾರಿದು ಗೊತ್ತೆ?

08 August, 2023 2:45 PM IST By: Kalmesh T
Telangana's 'Tree Man' Chetla Ramaiah who planted more than 1 crore saplings!

ವ್ಯಕ್ತಿಯೊಬ್ಬರು ತಮ್ಮ 3 ಎಕರೆ ಜಮೀನನ್ನು ಮಾರಿ ಬರೋಬ್ಬರಿ 1 ಕೋಟಿಗಿಂತಲೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಇದೀಗ ಎಲ್ಲೆಡೆ ಅವರನ್ನು ‘ಟ್ರೀ ಮ್ಯಾನ್’ (Tree Man) ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಅವರು ಮನೆಯಿಂದ ಹೊರಗೆ ಹೋದಾಗ, ತಮ್ಮೊಂದಿಗೆ ಸಸ್ಯ ಮತ್ತು ಬೀಜಗಳನ್ನು ಕೊಂಡೊಯ್ಯುತ್ತಾರೆ.

ತೆಲಂಗಾಣದ ‘ಟ್ರೀ ಮ್ಯಾನ್ : ಚೆಟ್ಲಾ ರಾಮಯ್ಯ, ವನಜೀವಿ ರಾಮಯ್ಯ ಅಲ್ಲದೇ “ಟ್ರೀ ಮ್ಯಾನ್‌” ಎಂದೇ ಕರೆಯಲ್ಪಡುವ ದಾರಿಪಲ್ಲಿ ರಾಮಯ್ಯ ಅವರು 1937ರಲ್ಲಿ ತೆಲಂಗಾಣದಲ್ಲಿ ಜನಿಸಿದ್ದಾರೆ. ಅವರು ಸಾಮಾಜಿಕ ಅರಣ್ಯ ಉಪಕ್ರಮಗಳಿಗೆ ಹೆಸರು ವಾಸಿಯಾದ ಸಮಾಜ ಸೇವಕರಾಗಿದ್ದಾರೆ.

ಮರಗಳ ಸಂತತಿಯನ್ನು ವಿಸ್ತರಿಸಲು ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ಅವರು 2017 ರ ಪದ್ಮಶ್ರೀ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.

ಅವರನ್ನು ಸ್ಥಳೀಯವಾಗಿ 'ಚೆಟ್ಲಾ ರಾಮಯ್ಯ' ಎಂದು ಕರೆಯಲಾಗುತ್ತದೆ. ಎಲ್ಲೆಡೆ ಹಸಿರು ಹೊದಿಕೆಯನ್ನು ಮರಳಿ ತರುವ ಉದ್ದೇಶದಿಂದ, ಅವರು ಭವಿಷ್ಯದ ಪೀಳಿಗೆಗೆ ನೆರಳು, ಹಣ್ಣು-ಹಂಪಲು ಸಸ್ಯಗಳು ಮತ್ತು ಜೈವಿಕ ಡೀಸೆಲ್ ಸಸ್ಯಗಳನ್ನು ಒದಗಿಸುವ ಮರಗಳ ಮೇಲೆ ಒತ್ತು ನೀಡುತ್ತಾರೆ.

ಖಮ್ಮಂ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಅವರು ಹೈದರಾಬಾದ್ ರಾಜ್ಯದ ಖಮ್ಮಂ ಜಿಲ್ಲೆಯ ರೆಡ್ಡಿಪಲ್ಲಿ ಗ್ರಾಮದವರು. 10 ನೇ ತರಗತಿಯವರೆಗೆ ಶಾಲಾ ಶಿಕ್ಷಣವನ್ನು ಹೊಂದಿರುವ ಇವರು ಪರಿಸರ ಪ್ರೇಮ ಮತ್ತು ಸಸಿಗಳ ಹಂಚುವುದರಿಂದಲೇ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

ಐದು ದಶಕಗಳಿಗೂ ಹೆಚ್ಚು ಕಾಲ ಸಾಮಾಜಿಕ ಅರಣ್ಯದ ನಿರಂತರ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಂದಿನ ಬೆಳವಣಿಗೆಯ ಋತುವಿಗಾಗಿ ತನ್ನ ತಾಯಿ ತರಕಾರಿ ಸಸ್ಯಗಳ ಬೀಜಗಳನ್ನು ಉಳಿಸುವುದನ್ನು ನೋಡಿದ್ದರು.

ನಂತರ ಅವರು ಬಾಲ್ಯದಲ್ಲಿ ನೋಡುತ್ತಿದ್ದ ಅವರು ಅದನ್ನೆ ಪ್ರೇರಣೇಯಾಗಿ ತೆಗೆದುಕೊಂಡು ಪರಿಸರ ಸಂರಕ್ಷಣೆಗೆ ನಿಂತಿದ್ದಾರೆ.

ಬಾಲ್ಯದಿಂದಲೂ ಅವರು ಶ್ರೀಗಂಧದದ ಮರ, ಅಲ್ಬಿಜಿಯಾ ಸಮನ್, ಫಿಕಸ್ ರಿಲಿಜಿಯೋಸಾ, ಏಗಲ್ ಮಾರ್ಮೆಲೋಸ್, ನಿಯೋಲಾಮಾರ್ಕಿಯಾ ಕಡಂಬ ಮುಂತಾದ ಸ್ಥಳೀಯ ಮರಗಳ ಬೀಜಗಳನ್ನು ಸಂಗ್ರಹಿಸುತ್ತಿದ್ದಾರೆ.

ಪ್ರತಿ ಬಂಜರು ಭೂಮಿಯನ್ನು ಮರಗಳಿಂದ ಹಾಸಿರಾಗುವ ಹಾಗೇ ಮಾಡುವ ಉದ್ದೇಶ ಅವರದು.

ಪ್ರಕೃತಿಯನ್ನು ರಕ್ಷಿಸಿ, ದೇವರು ಸೃಷ್ಟಿಸಿದ ಎಲ್ಲವನ್ನೂ ರಕ್ಷಿಸಿ, ಮುಂದಿನ ಪೀಳಿಗೆಗಾಗಿ ಸುರಕ್ಷಿತಾಗಿ ಬಿಟ್ಟು ಹೋಗಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎನ್ನುತ್ತಾರೆ ರಾಮಯ್ಯ.

ಹೆಚ್ಚಿನ ಸಸಿಗಳು ಮತ್ತು ಬೀಜಗಳನ್ನು ಖರೀದಿಸಲು ಅವರು ತಮ್ಮ 3 ಎಕರೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಕೂಡ.

ಟ್ರೀ ಮ್ಯಾನ್‌ ದಾರಿಪಲ್ಲಿ ರಾಮಯ್ಯನವರು

ಜೀವನಚರಿತ್ರೆ ಪುಸ್ತಕ

ದಾರಿಪಲ್ಲಿ ರಾಮಯ್ಯ ಅವರ ಕಾರ್ಯ ಮತ್ತು ಸಾಧನೆಯನ್ನು ಗುರುತಿಸಿ ಅವರ ಜೀವನ ಚರಿತ್ರೆಯನ್ನು ಕೂಡ ಪುಸ್ತಕ ರೂಪದಲ್ಲಿ ತರಲಾಗಿದೆ.

ಈ ಪುಸ್ತಕವು ರಾಮಯ್ಯನವರ ಬಾಲ್ಯದಿಂದ ಪದ್ಮಶ್ರೀಯವರೆಗೆ ಓಟ್ಟಾರೆಯಾದ ಮಾಹಿತಿಗಳನ್ನು ಒಳಗೊಂಡಿದೆ.

ರಾಮಯ್ಯ ಅವರು ಬರಿ ಉಪನ್ಯಾಸ, ಉಪದೇಶ ಮಾಡುವ ಬದಲು "ಮರವನ್ನು ನೆಟ್ಟು ಜೀವ ಉಳಿಸಿ" ಎಂಬ ಮಾತನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ದರಿಪಲ್ಲಿ ರಾಮಯ್ಯ

ಸ್ಥಳೀಯರು ಅವರನ್ನು ಬೀಜಗಳಿಂದ ತುಂಬಿದ ಮತ್ತು ತನ್ನ ಬೈಸಿಕಲ್‌ನಲ್ಲಿ ಸಸಿಗಳ ಓವರ್‌ಲೋಡ್‌ನೊಂದಿಗೆ ಮೈಲುಗಟ್ಟಲೆ ಪೆಡಲ್ ತುಳಿಯುತ್ತ ಸುತ್ತಾಡುವ ವ್ಯಕ್ತಿ ಎಂದೇ ಹೇಳುತ್ತಾರೆ.  

ನಮ್ಮ ಪರಿಸರವನ್ನು ಉಳಿಸಲು ಮರಗಳನ್ನು ನೆಡುವ ಅಗತ್ಯದ ಕುರಿತು ಅವರು ಎಲ್ಲರಿಗೂ ತಿಳಿಸಿ ಹೇಳುತ್ತಾರೆ. ಅಷ್ಟೇ ಅಲ್ಲದೇ ಅವರು ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಕಾಣುವ ಬರಡು ಭೂಮಿಯಲ್ಲಿ ಸಸಿಗಳನ್ನು ನೆಡುತ್ತಾರೆ.

Inspiring story : ಕೆಮೆಸ್ಟ್ರಿಯಲ್ಲಿ ಪಿಎಚ್‌ಡಿ ಪಡೆದ ಕೃಷಿ ಕಾರ್ಮಿಕ ಮಹಿಳೆ ! ನಿಜಕ್ಕೂ ಸ್ಪೂರ್ತಿದಾಯಕ ಕಥೆ

ಟ್ರೀ ಮ್ಯಾನ್‌ ದರಿಪಲ್ಲಿ ರಾಮಯ್ಯನವರು ಪದ್ಮಶ್ರೀ ಪ್ರಶಸ್ತಿ ಪಡೆದ ಕ್ಷಣ