ಅಂಚೆ ಇಲಾಖೆಯಿಂದ ಮಾವಿನ ಹಣ್ಣಿನ ಪ್ರಿಯರಿಗೆ ಸಿಹಿಸುದ್ದಿ. ಇದೀಗ ಅಂಚೆ ಮೂಲಕ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ ರಸವತ್ತಾದ ಮಾವು. ಹೇಗೆ ಗೊತ್ತೆ? ಇದನ್ನ ಓದಿರಿ…
ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಈ ಹಣ್ಣುಗಳ ರಾಜನೆಂದರೆ ಇಷ್ಟ.
ಕೇವಲ ಹೆಸರು ಕೇಳಿದರೆ ಬಾಯಲ್ಲಿ ನೀರೂರಿಸುವ ಮಾವಿನ ಸೀಸನ್ ಅದಾಗಲೇ ಆರಂಭ ಆಗಿದೆ ಕೂಡ. ಇ
ದೀಗ ಅಂಚೆ ಇಲಾಖೆಯೂ ಪೋಸ್ಟ್ ಮೂಲಕ ಕೂಡ ಮಾವಿನ ಹಣ್ಣುಗಳನ್ನು ತರಿಸಿಕೊಳ್ಳುವ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಅಂಚೆಯ ಮೂಲಕ ನಿಮಗೆ ಬೇಕಾದಷ್ಟು ಮಾವಿನ ಹಣ್ಣುಗಳನ್ನು ನಿಮ್ಮ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ. ಅಲ್ಲದೇ ಆನ್‌ಲೈನ್ ಮೂಲಕ ಆರ್ಡರ್ ಮಾಡುವ ವ್ಯವಸ್ಥೆಯನ್ನು ನೀಡಿದೆ.
ಇದು ರೈತರಿಗೂ ಕೂಡ ದಲ್ಲಾಳಿಗಳ ಹಾವಳಿ ತಪ್ಪಿಸಿ ತುಸು ಲಾಭದಾಯಕ ವ್ಯಾಪಾರ ಮಾಡಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದೆ.
ಆದರೆ, ಸದ್ಯಕ್ಕೆ ಬೆಂಗಳೂರು ನಗರಕ್ಕೆ ಸೀಮಿತವಾಗಿ ಅಂಚೆ ಮೂಲಕ ಮಾವಿನಹಣ್ಣುಗಳನ್ನು ಸರಬರಾಜು ಮಾಡಲಾಗುತ್ತಿದೆ.
ಕನಿಷ್ಠ 3 ಕೆ.ಜಿ. ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಾವಿನ ಹಣ್ಣು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ.
ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವನ್ನು ಬೆಳೆಯಲಾಗುತ್ತಿದೆ.
ಬಾದಾಮಿ, ತೋತಾಪುರಿ, ಬಂಗನ್‌ಪಲ್ಲಿ, ಶುಗರ್ ಬೇಬಿ, ನೀಲಂ, ರಸಪುರಿ, ಮಲ್ಲಿಕಾ ಹೀಗೆ ನಾನಾ ತಳಿಯ ಮಾವು ಮಾರಾಟಕ್ಕೆ ಲಭ್ಯವಿದೆ.
ವಿಶೇಷ ಎಂದರೆ ಮಾವು ಬೆಳೆಗಾರರ ಮಕ್ಕಳೇ ಆನ್‌ಲೈನ್‌ನಲ್ಲಿ ಮಾವು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಕೆಲವರು ಸಾಫ್ಟ್‌ವೇರ್ ಎಂಜಿನಿಯಗಳು ತಮ್ಮ ತೋಟಗಳಲ್ಲಿ ಬೆಳೆದಿರುವ ಮಾವಿನ ಹಣ್ಣುಗಳನ್ನು ಆನ್‌ಲೈನ್ ಬುಕಿಂಗ್‌ಗೆ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಕೆಲವರು ತಮ್ಮ ಸಹೋದ್ಯೋಗಿಗಳ ಮೂಲಕ ವಾಟ್ಸ್‌ಆ್ಯಪ್, ಗೂಗಲ್ ಫಾರ್ಮ್‌ಗಳನ್ನು ಕಳುಹಿಸಿ ಆ ಮೂಲಕ ಆರ್ಡರ್‌ಗಳನ್ನು ಪಡೆಯುತ್ತಿದ್ದಾರೆ.
ತಮ್ಮ ತೋಟಗಳಲ್ಲೇ ಬೆಳೆಯುವ ಮಾವಿನ ಹಣ್ಣುಗಳನ್ನು ಬೆಂಗಳೂರಿನ ನಿವಾಸಿಗಳ ಮನೆ ಬಾಗಿಲಿಗೆ ಅಂಚೆ ಇಲಾಖೆ ಮೂಲಕ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
kolarmangoes.com ಜಾಲತಾಣಕ್ಕೆ ಭೇಟಿ ನೀಡಿ ಅಥವಾ 9886116046 ಮೂಲಕ ಬೆಂಗಳೂರಿನ ಗ್ರಾಹಕರು ಮಾವಿನ ಹಣ್ಣಿಗೆ ಆರ್ಡರ್ ಮಾಡಬಹುದು.