Success stories

PM ಮನ್ ಕಿ ಬಾತ್‌ನಲ್ಲಿ ಕರ್ನಾಟಕದ ಕೃಷಿಕ ಮಧುಕೇಶ್ವರ ಹೆಗಡೆ ಪ್ರಸ್ತಾಪ! ಮೋದಿ ಹೊಗಳಿದ ಈ ಕೃಷಿಕನ ಸಾಧನೆ ಬಗ್ಗೆ ನೀವು ತಿಳಿಯಲೆಬೇಕು…

31 July, 2022 2:45 PM IST By: Kalmesh T
Karnataka farmer Madhukeshwar Hegade proposed in PM Man Ki Baat!

ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಮನ್ ಕಿ ಬಾತ್ಕಾರ್ಯಕ್ರಮದಲ್ಲಿ ಕರ್ನಾಟಕದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರ ಸಾಧನೆ ಪ್ರಸ್ತಾಪ. ಇಲ್ಲಿದೆ ಮೋದಿಯವರೇ ಹೊಗಳಿದ ಕೃಷಿಕನ ಸಾಧನೆಯ ಮಾಹಿತಿ

ಇದನ್ನೂ ಓದಿರಿ: Dragon fruit: ಡ್ರ್ಯಾಗನ್‌ ಫ್ರೂಟ್‌ ಬೆಳೆದು 1.5 ಕೋಟಿ ಗಳಿಸುತ್ತಿರುವ ಡಾಕ್ಟರ್‌; ಇಲ್ಲಿದೆ ವೈದ್ಯರೊಬ್ಬರ ಕೃಷಿ ಕತೆ!

ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಪ್ರಧಾನಮಂತ್ರಿ ಮೋದಿಯವರ “ಮನ್ ಕಿ ಬಾತ್ಕಾರ್ಯಕ್ರಮದ ಕುರಿತು ನಿಮಗೆಲ್ಲ ತಿಳಿದೆ ಇದೆ.

ಈಗ ಈ ಕಾರ್ಯಕ್ರಮದಲ್ಲಿ ನಮ್ಮ-ನಿಮ್ಮೆಲ್ಲರ ಕರ್ನಾಟಕದ ಹೆಮ್ಮೆಯ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆ ಅವರ ಸಾಧನೆಯ ಬಗ್ಗೆ ಸ್ವತಃ ಪ್ರಧಾನಿ ಮೋದಿ ಅವರೇ ಹೊಗಳಿ ಅವರ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಇಲ್ಲಿದೆ ಮೋದಿಯವರೇ ಹೊಗಳಿದ ಕೃಷಿಕನ ಸಾಧನೆಯ ಕುರಿತಾದ ಒಂದು ನೋಟ.

ಪ್ರಧಾನಿ ಮೋದಿಯಿಂದ ಕರ್ನಾಟಕದ ರೈತನ ಹೊಗಳಿಕೆ!

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಪ್ರಗತಿಪರ ಜೇನು ಕೃಷಿಕರಾದ ಮಧುಕೇಶ್ವರ ಹೆಗಡೆ ಅವರು ತಮ್ಮ ನೂತನ ಸಂಶೋಧನೆಗಳ ಮೂಲಕ ಜೇನು ಸಾಕಾಣಿಕೆ ಕೃಷಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಹೊಗಳಿದ್ದಾರೆ.

ಹಸುವಿನ ಸಗಣಿಯಿಂದ ಆಭರಣ ತಯಾರಿಸಿ ಆದಾಯ ಗಳಿಸುತ್ತಿರುವ ಸ್ವಾವಲಂಬಿ ಮಹಿಳೆಯರು! ಹೇಗೆ ಗೊತ್ತೆ?

ಕೃಷಿಕ ಮಧುಕೇಶ್ವರ ಹೆಗಡೆ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಪ್ರಶಸ್ತಿ ಪಡೆದ ಕ್ಷಣ

ಜೇನು ಕೃಷಿಯಲ್ಲಿ ಮಹತ್ತರ ಸಾಧನೆ!

30 ವರ್ಷಗಳಿಂದ ಈ ನಾಟಿ ಔಷಧವನ್ನು ಜನರಿಗೆ ನೀಡುತ್ತಾ ಬಂದಿದ್ದಾರೆ. ಇದುವರೆಗೂ ಯಾವುದೇ ಅಪಾಯವಾಗಿಲ್ಲ. ಈ ಪದ್ದತಿಯು ನಮ್ಮ ಪುರಾತನ ಕಾಲದಿಂದಲು ಬಂದಂತಹ ಪದ್ದತಿ ಆದ್ದರಿಂದ ಅವರೂ ಸಹ  ಇದೇ ನಾಟಿ ಔಷಧ ನೀಡುವುದನ್ನು ಮುಂದುವರೆಸುತ್ತಾ ಬಂದಿದ್ದಾರೆ.

ಕೇವಲ 8ನೇ ತರಗತಿ ವಿದ್ಯಾಬ್ಯಾಸ

ಕೇವಲ 8 ನೇ ತರಗತಿ ವರೆಗೆ ಮಾತ್ರ ಶಿಕ್ಷಣ ಪಡೆದ ಇವರು ಇಂದು ದೇಶವೇ ತಿರುಗಿ ನೋಡುವ ಸಾಧನೆ ಮಾಡಿದ್ದಾರೆ. ಅವರ ಆಸಕ್ತಿಯೆಲ್ಲ ನಾಟಿ ವೈದ್ಯಕೀಯದ ಕಡೆ ಸೆಳೆಯುತ್ತಿತ್ತು. ಇದರಿಂದಾಗಿ ಶಿಕ್ಷಣ ಮುಂದುವರೆಸದೆ ಗಿಡಮೂಲಿಕೆಗಳನ್ನು ತಯಾರಿಸಲು ಮುಂದಾದೆ ಎನ್ನುತ್ತಾರೆ ಅವರು.

ಮಧುಕೇಶ್ವರ ಹೆಗಡೆಯವರು ಒಟ್ಟು 40 ಎಕರೆಯಲ್ಲಿ ಜೇನುಕೃಷಿ ಮಾಡಿದ್ದಾರೆ. ಇವರು ಜೇನು ತುಪ್ಪ ಮಾರಾಟ, ಉಪ ಉತ್ಪನ್ನಗಳ ಮಾರಾಟದ ಜೊತೆಗೆ ಜೇನು ಹುಳು ಮಾರಾಟ, ಗೂಡು, ಜೇನು ಸಾಕುವ ಪಟ್ಟಿಗೆ, ಪರಾಗ ಇತ್ಯಾದಿ ಮಾರಾಟ ಮಾಡಿ ಆದಾಯ ಪಡೆಯುತ್ತಾರೆ.

ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

280 ಪ್ರಭೇದದ ಔಷಧಿ ಸಸ್ಯಗಳು

ತಾವು ಬೆಳಸಿದ ಔಷಧೀಯ ಗಿಡಮೂಲಿಕೆಗಳು- ನಾನು ಸುಮಾರು 280 ಜಾತಿಯ ಔಷಧಿ ಸಸ್ಯಗಳನ್ನು ಬೆಳೆದಿದ್ದು, ಸ್ವತಃ ತಾವೇ ಗಿಡಮೂಲಿಕೆಗಳಿಂದ ಎಲ್ಲ ರೀತಿಯ ಔಷಧಿಗಳನ್ನು ತಯಾರಿಸಿ ಕೊಡುತ್ತಾರೆ.

ನಾಟಿ ಔಷಧಿ ನೀಡುವಲ್ಲಿ ನಿಪುಣರು..

ಸಮಸ್ಯೆ ಹೇಳಿಕೊಂಡು ಬರುವ ಸಾಕಷ್ಟು ರೋಗಿಗಳಿಗೆ ಸೂಕ್ತ ನಾಟಿ ಔಷಧ ಕೊಟ್ಟು ಅವರ ಕಾಯಿಲೆ ಕಡಿಮೆ ಮಾಡುತ್ತಾರೆ. ಇವರ ಔಷಧಿಗಳಿಗೆ ಸ್ಥಳೀಯವಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆ, ರಾಜ್ಯ ಹಾಗೂ ಹೊರದೇಶಗಳಿಂದಲೂ ಬೇಡಿಕೆ ಇದೆ.

ಇವರಲ್ಲಿ ದೊರೆಯುವ ಔಷಧಗಳು-

ಇವರು ನೀಡುವ ನಾಟಿ ಔಷಧ ಯಾವುದೇ ರೀತಿಯ ಕೆಮಿಕಲ್ಸ್ ಹೊಂದಿರುವುದಿಲ್ಲ. ಇದು ಜನರಿಗೆ ತುಂಬ ಇಷ್ಟವಾಗಿದೆ ಎನ್ನುತ್ತಾರೆ ಮಧುಕೇಶ್ವರ. ಮೂಲವ್ಯಾಧಿ, ಬೊಜ್ಜು ಕರಗಿಸಲು, ಅಲ್ಸರ್, ಬಿಳಿಸೆರಗು, ನಪುಂಸಕತ್ವ,

ಸಕ್ಕರೆ ಕಾಯಿಲೆ, ದೇಹದ ತೂಕ ಹೆಚ್ಚಿಸಲು, ಸಂತಾನ ಸಮಸ್ಯ, ಮಂಡಿನೂವು, ಕ್ಯಾನ್ಸರ್, ಎಚ್ ಐ ವಿ ಹಿಗೆ ಹಲಾವಾರು ರೋಗಗಳಿಗೆ ತಾವೇ ಗಿಡಮೂಲಿಕೆಯಿಂದ ತಯಾರಿಸಿದ ನಾಟಿ ಔಷಧ ನೀಡುತ್ತಾರೆ.

70 ಎಕರೆ ಜಾಗ, 5 ಕೋಟಿ ಮರಗಳು, ಒಂದು ದೊಡ್ಡ ಕಾಡನ್ನೇ ಸೃಷ್ಟಿಸಿದ ಆಧುನಿಕ ಭಗೀರಥ!

ಸ್ವತಃ ಅವರೇ ತಯಾರಿಸಿದ ಔಷಧಿಗಳು

ಇವರಿಗೆ ಬಂದ ಪ್ರಶಸ್ತಿಗಳು-

* 2009 ರಲ್ಲಿ ಕೃಷಿ ಪಂಡಿತ ಪ್ರಶಸ್ತಿ

* 2011 ರಲ್ಲಿ ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ

* ಕೃಷಿ ಸಾಧಕ ಪ್ರಶಸ್ತಿಗಳು

* ಕರ್ನಾಟಕ ಕೃಷಿ ರತ್ನ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ನಾಟಿ ವೈದ್ಯಕೀಯದಲ್ಲಿ ಪಡೆದಿದ್ದಾರೆ.

ಪಡಿತರ ತರಲು ಪರದಾಡಿದ್ದ ಯುವಕ; ಹೊಸ App ರಚಿಸಿದ ಕಥೆ!

ಸೆಲೆಬ್ರಿಟಿಗಳು ಬಳಸುವ ರಾಯಲ್ಜೆಲ್ಲಿ ಜೇನು ಕೂಡ ಇವರಲ್ಲಿದೆ!

ಇವರ ತೋಟದಲ್ಲಿ ಅಡಿಕೆ, ಏಲಕ್ಕಿ, ಶತಾವರಿ, ಬಾಳೆ ಶುಂಠಿ, ನೆಲ್ಲಿ, ಬ್ರಾಹ್ಮಿ, ಕಾಳು ಮೆಣಸು, ಕೋಕಂ ಸೇರಿದಂತೆ 280ಕ್ಕೂ ಅಧಿಕ ಔಷಧೀಯ ಗಿಡಗಳಿವೆ. ಇವುಗಳಿಂದ ಲೆಮನ್ ಸ್ಕಾಷ್, ಗಾರ್ಲಿಕ್ ಹನಿ, ಬೀ ಪೋಲನ್, ಜಿಂಜರ್ ಹನಿ, ಕಲ್ಲಳ್ಳಿ ಜೇನು ಇತ್ಯಾದಿ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರಿಸುತ್ತಾರೆ.

ಸೆಲೆಬ್ರಿಟಿಗಳು ಬಳಸುವ ‘ರಾಯಲ್ ಜೆಲ್ಲಿ ಜೇನುಇವರು ಸಿದ್ಧಪಡಿಸುತ್ತಾರೆ. ಅಳಿವಿನ ಅಂಚಿನಲ್ಲಿರುವ ಕೆಂಪು ಸರ್ಪಗಂಧ, ಏಕನಾಯಕ(ಸೆಲೆಷಿಯಾ), ಸೋಮಾರ ಬೇರು, ಕಾಡು ದಾಲ್ಚೀನ್ನಿ, ಆರ್ಕಿಡ್ ಇತ್ಯಾದಿ ಬೆಳೆಯುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಧುಕೇಶ್ವರ ಅವರ ಮೊಬೈಲ್ ಸಂಖ್ಯೆ: 9480746335.

ನಮ್ಮಲ್ಲಿ ಎಲ್ಲ ರೀತಿಯ ಸಮಸ್ಯೆಗಳನ್ನು ಹೇಳಿಕೊಂಡು ಜನ ಬರುತ್ತಾರೆ. ಮೊದಲಿಗೆ ಬರುವ ರೋಗಿಯ ಕೈ ಹಿಡಿದು ನಾಡಿ ಮಿಡಿತ ಗ್ರಹಿಸಿಯೇ ಔಷಧೀಯನ್ನು ನೀಡುತ್ತೆನೆ. ರೋಗಿಯನ್ನು ನೋಡದೆ ಯಾವುದೇ ರೀತಿಯಲ್ಲೂ ಔಷಧವನ್ನು ನೀಡುವುದಿಲ್ಲ.  ನಮ್ಮಲ್ಲಿ  ಸಾಕಷ್ಟು ಜನ ಬಂದು ರೋಗದಿಂದ ಗುಣವಾಗಿ ಹೋಗಿದ್ದಾರೆ.

- ಮಧುಕೇಶ್ವರ ಹೆಗಡೆ. ನಾಟಿ ವೈದ್ಯರು