BetelLeaf ಕರ್ನಾಟಕದ ಮೈಸೂರಿನ ಯುವಕ ಪ್ರಾರಂಭಿಸಿದ ಸ್ಟಾರ್ಟ್ ಅಪ್ (Startup)ಇದೀಗ ಹಸಿರು ಬಂಗಾರ ಎಂದೇ ಕರೆಯುವ ವೀಳ್ಯದೆಲೆಗೆ ಪರ್ಯಾಯ ಮಾರುಕಟ್ಟೆಯನ್ನು ಸೃಷ್ಟಿಸುವ ಹಾದಿಯಲ್ಲಿದೆ.
ಸಾವಿರಾರು ವರ್ಷಗಳಿಂದಲೂ ವೀಳ್ಯದೆಲೆ (BetelLeaf)ಎನ್ನುವುದು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿದ್ದರೂ,
ಅದನ್ನು ಆಹಾರ ಪದಾರ್ಥವಾಗಿ ಬಳಸುವ ವಿಧಾನ ಹಾಗೂ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದು ಅಷ್ಟಕ್ಕಷ್ಟೇ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.
ಸಾಮಾನ್ಯವಾಗಿ ವೀಳ್ಯದೆಲೆ (BetelLeaf)ಯನ್ನು ಮದುವೆ, ಸಮಾರಂಭ ಇಲ್ಲವೇ ತಂಬಾಕಿನೊಂದಿಗಷ್ಟೇ ಸೇವಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಆದರೆ ವೀಳ್ಯೆದೆಲೆ (BetelLeaf) ಯಲ್ಲಿ ಹಲವು ಆರೋಗ್ಯ ಪೂರಕ ಅಂಶಗಳಿದ್ದು ಅದನ್ನು ಮುಖ್ಯವಾಗಿ ಪರಿಗಣಿಸಿದ್ದು ಮಾತ್ರ ಇಲ್ಲವೇ ಇಲ್ಲ ಎನ್ನುವಷ್ಟು.
ಇದೀಗ ಮೈಸೂರಿನ ಸಂದೀಪ್ ಈಶಾನ್ಯ ಎಂಬವರು ವಿಶ್ವದಲ್ಲಿಯೇ ಮೊದಲ ಬಾರಿಗೆ ಕೇವಲ ವೀಳ್ಯದೆಲೆಯಿಂದ ಗ್ರೀನ್ ಟೀ ಮಾಡುವುದನ್ನು ಪರಿಚಯಿಸಿದ್ದು,
ಆ ಮೂಲಕ ವಿಳ್ಯೆದೆಲೆಯನ್ನು (BetelLeaf) ಹೊಸ ಬಳಸುವಂತೆ ಮಾಡುವುದರ ಜೊತೆಗೆ ವಿಳ್ಯೆದೆಲೆಗೊಂದು ಪರ್ಯಾಯ ಮಾರುಕಟ್ಟೆಯನ್ನು ಸೃಷ್ಟಿಸುವ ಗುರಿ ಹೊಂದಿದ್ದಾರೆ
ಬೀಟಲ್ ಲೀಫ್ ಆರ್ಗಾನಿಕ್ ಟೀ (OrganicTea) (ವೀಳ್ಯದೆಲೆಯಿಂದ ತಯಾರಾದ ಟೀ ಪುಡಿ)ವಿಶ್ವದಲ್ಲಿಯೇ ಮೊದಲ ಪ್ರಯತ್ನ ಇದಾಗಿದೆ.
ಈಗಾಗಲೇ ವಿಶ್ವದಲ್ಲಿ ಹಲವು ಮಾದರಿಯ ಟೀಗಳು ಲಭ್ಯವಿದೆ. ಆದರೆ, ಕೇವಲ ವೀಳ್ಯದೆಲೆಯನ್ನು ಮಾತ್ರ ಬಳಸಿ ಟೀ ಪರಿಚಯಿಸಿರುವುದು ನಾವು ಮಾತ್ರ.
ಹೀಗಾಗಿ, ಇದಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಸಂದೀಪ್ ಈಶಾನ್ಯ.
ರೈತರಿಗೆ ಹೇಗೆ ಲಾಭ ?
ಸಾಮಾನ್ಯವಾಗಿ ವೀಳ್ಯದೆಲೆಯನ್ನು ಮದುವೆ, ಸಮಾರಂಭ ಹಾಗೂ ಅಲ್ಪ ಪ್ರಮಾಣದಲ್ಲಿ ನಿತ್ಯ ಬಳಕೆ ಮಾಡುತ್ತಾರೆ.
ಇದನ್ನು ಉಪ ಉತ್ಪನ್ನವಾಗಿ ಬೆಳೆಯುವ ಪ್ರಮಾಣವೇ ಹೆಚ್ಚು.
ಭಾರತದಂತ ಸಾಂಪ್ರದಾಯಿಕ ದೇಶದಲ್ಲೂ ವಿಳ್ಯೆದೆಲೆಯನ್ನು ಮುಖ್ಯ ಬೆಳೆಯುವ ರೈತರ ಸಂಖ್ಯೆ ಗಣನೀಯವಾಗಿ ಇಲ್ಲ.
ಪಶ್ಚಿಮ ಬಂಗಾಳ, ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳಂತ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಳ್ಯೆದೆಲೆಯನ್ನು
ಬೆಳೆಯುತ್ತಿದ್ದರೂ ಅದರಿಂದ ಗಳಿಸುವ ಆಧಾಯಕ್ಕೆ ಹಲವು ತೊಂದರೆಗಳಿವೆ.
ವಿದೇಶದಲ್ಲೂ ಸದ್ದು ಮಾಡ್ತಿದೆ ಕನ್ನಡಿಗನ “ವೀಳ್ಯದೆಲೆ ಟೀ”!
1. ಕೊಯ್ಲಿನ ಮುಂದಿನ ಮೂವತ್ತಾರು ಗಂಟೆಯೊಳಗೆ ಮಾರಾಟ ಮಾಡಬೇಕು
2. ಹಬ್ಬ ಹಾಗೂ ಮದುವೆಗಳು ಇಲ್ಲದ ದಿನಗಳಲ್ಲಿ ಕುಸಿಯುವ ಬೆಲೆ
3. ಪರ್ಯಾಯ ಮಾರುಕಟ್ಟೆಯ ವ್ಯವಸ್ಥೆ ಇಲ್ಲ
ಹೀಗೆ ಹಲವು ಸಮಸ್ಯೆಗಳು
ಇದೀಗ ವೀಳ್ಯದೆಲೆಯನ್ನು (BetelLeaf) ಟೀ ರೂಪವಾಗಿ ಪರಿಚಯಿಸುತ್ತಿರುವುದರಿಂದ ವೀಳ್ಯದೆಲೆಗೆ ಬೇಡಿಕೆಯೂ ಹೆಚ್ಚಾಗಲಿದ್ದು,
ಮುಂದಿನ ದಿನಗಳಲ್ಲಿ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಸಿಕೊಳ್ಳಬಹುದಾಗಿದೆ ಎನ್ನುವುದು ಯುವ ಉದ್ಯಮಿ ಸಂದೀಪ್ ಈಶಾನ್ಯ ಅವರ ಭರವಸೆ.
ಇಲ್ಲಿಯವರೆಗೆ ವೀಳ್ಯದೆಲೆಗೆ ಪರ್ಯಾಯ ಮಾರುಕಟ್ಟೆಗಳು ಇರಲಿಲ್ಲ.
ನಿತ್ಯ ಬಳಕೆಯ ರೂಪದಲ್ಲಿ ಮತ್ತು ತಂಬಾಕು ಸೇವನೆಗೆ ಮಾತ್ರ ವೀಳ್ಯದೆಲೆಯನ್ನು ಬಳಸಿಕೊಳ್ಳಲಾಗುತ್ತಿತ್ತು.
ಇದೀಗ ವೀಳ್ಯದೆಲೆ ಟೀಗೆ ವಿದೇಶದಲ್ಲೂ ಬೇಡಿಕೆ ಹೆಚ್ಚಾಗುತ್ತಿದ್ದು,
ಬೀಟಲ್ ಲೀಫ್ ಆರ್ಗಾನಿಕ್ ಟೀ ಉತ್ಪಾದನೆಯ ಪ್ರಮಾಣವೂ ಹೆಚ್ಚಳವಾಗುತ್ತಿದೆ.
ಇದರಿಂದ ವೀಳ್ಯದೆಲೆ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ.
ಮೈಸೂರಿನ ವೀಳ್ಯದೆಲೆಗೆ ಭರ್ಜರಿ ಲಾಭ ನಿರೀಕ್ಷೆ
ಬೀಟಲ್ ಲೀಫ್ ಆರ್ಗಾನಿಕ್ ಟೀಗೆ ಪೇಟೆಂಟ್ (ಹಕ್ಕುಸ್ವಾಮ್ಯ) ಕಾಯ್ದಿರಿಸಿದ್ದು, ಇದಕ್ಕೆ ಮುಖ್ಯವಾಗಿ ಮೈಸೂರಿನ ವಿಳ್ಯದೆಲೆಯನ್ನೇ ಬಳಸಿಕೊಳ್ಳಲಾಗಿದೆ.
ಮೈಸೂರಿನ ವೀಳ್ಯದೆಲೆ (BetelLeaf)ಯನ್ನು ಬಳಸಿಕೊಂಡು ಟೀ ತಯಾರಿಸುವ ಮೂಲಕ ಮಾರುಕಟ್ಟೆಯಲ್ಲಿ
ದೈತ್ಯ ಟೀ ಕಂಪನಿಗಳ ಜೊತೆ ಸೆಣಸಬಹುದು ಎನ್ನುವು ಒಂದು ನಂಬಿಕೆಯನ್ನು ಗಳಿಸಿಕೊಳ್ಳುವುದಕ್ಕೆ
ಸಂದೀಪ್ ಈಶಾನ್ಯ ಹಾಗೂ ಅವರ ರಿಸರ್ಚ್ ಟೀಮ್ ಅರ್ಥ ಮಾಡಿಕೊಳ್ಳಲು ಭರ್ತಿ ಎರಡೂವರೆ ವರ್ಷಗಳೇ ಬೇಕಾದವು.
ಈ ಬೆಳವಣಿಗೆಯಿಂದ ಮೈಸೂರು ಹಾಗೂ ಮೈಸೂರು ಸುತ್ತಮುತ್ತಲಿನ ಭಾಗದಲ್ಲಿ ವೀಳ್ಯದೆಲೆ ಬೆಳೆಯುವ ರೈತರಿಗೆ ಲಾಭವಾಗಲಿದ್ದು, ಮಾರುಕಟ್ಟೆ ಸಿಗಲಿದೆ.
ವೀಳ್ಯದೆಲೆ ಬೆಳೆಯುವವರ ಪ್ರಮಾಣವೂ ಹೆಚ್ಚಳವಾಗಲಿದೆ.
ವೀಳ್ಯದೆಲೆ ಸೇವನೆ ಹಾಗೂ ವೀಳ್ಯದೆಲೆ ಟೀ ಉಪಯೋಗಗಳು
* ವೀಳ್ಯದೆಲೆಯಲ್ಲಿ ಮಕ್ಕಳಿಂದ ಎಲ್ಲರಿಗೂ ಬೇಕಾಗುವ ಔಷಧಿಯಿ ಗುಣಗಳಿವೆ
* ದೇಹದಲ್ಲಿ ಮಧುಮೇಹ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
* 67% ಆರೋಗ್ಯ ಸಮಸ್ಯೆ ಅಜೀರ್ಣದಿಂದ ಬರುತ್ತಿದ್ದು, ವೀಳ್ಯದೆಲೆ ಟೀಯಿಂದ ಅಜೀರ್ಣ ಸಮಸ್ಯೆ ಕಡಿಮೆ ಆಗಲಿದೆ.
* ಫಾಸ್ಟ್‌ಫುಡ್‌ಗಳಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ವೀಳ್ಯದೆಲೆ ಸೇವೆನಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
* ಬಾಯಿ ದುರ್ವಾಸನೆ ತಡೆಗೆ ವೀಳ್ಯದೆಲೆ ಟೀ ಸಹಕಾರಿ.