A truly inspiring story : ದಿನಗೂಲಿ ಲೆಕ್ಕದಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತ ಇದರೊಂದಿಗೆ ತಮ್ಮ ಪಿಎಚ್‌ಡಿಯನ್ನು ಕೂಡ ಪಡೆದುಕೊಂಡಿದ್ದಾರೆ ಇಲ್ಲೊಬ್ಬ ಮಹಿಳೆ. ಬಡತನ, ಕಷ್ಟಗಳಲ್ಲೂ ಓದನ್ನು ಕೈ ಬಿಡದ ಮಹಿಳೆಯ ಪ್ರೇರಣಾದಾಯಕ ಕಥೆ
ಬಡತನದ ನಡುವೆಯೂ ಓದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಲ್ಲದೇ ಇದರ ನಡುವೆ ಪಿಎಚ್‌ಡಿಯನ್ನು ಕೂಡ ಪಡೆದುಕೊಳ್ಳುವ ಮೂಲಕ ಸದ್ಯ ಸಕೆಭಾರತಿಯವರು ಎಲ್ಲೆಡೆ ಸುದ್ದಿಯಾಗಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಕೆಭಾರತಿಯವರೇ ಇದೀಗ ಕೃಷಿ ಕೂಲಿ ಮಾಡಿಕೊಂಡು ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿಯನ್ನು ಪಡೆದುಕೊಂಡ ಮಹಿಳೆಯಾಗಿದ್ದಾರೆ.
ಒಂದೆಡೆ ಬಡತನ ಇನ್ನೊಂದೆಡೆ ದುಡಿಯುವ ಅನಿವಾರ್ಯತೆ. ಅಷ್ಟೇ ಅಲ್ಲದೇ ಚಿಕ್ಕ ವಯಸ್ಸಿನಲ್ಲೆ ಮದುವೆ.
ಇವೆಲ್ಲವುಗಳ ನಡುವೆ ಭಾರತಿಯವರು ಎಷ್ಟೇ ಕಷ್ಟಗಳು ಬಂದರೂ ತಮ್ಮ ವಿದ್ಯಾಬ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿಲ್ಲ ಮಾತ್ರ.
ಓದಬೇಕೆನ್ನುವ ಹುಚ್ಚು ಅವರನ್ನು ಕೃಷಿ ಕೂಲಿ ಕೆಲಸಗಳ ನಡುವೆಯೂ ಜೀವಂತವಾಗಿ ಇಟ್ಟಿದೆ ಎನ್ನುತ್ತಾರೆ ಅವರು.
ಭಾರತಿಯವರ ಬಗ್ಗೆ
ಆಂಧ್ರದ ಅನಂತಪುರ ಜಿಲ್ಲೆಯ ನಾಗುಲಗುಡ್ಡೆ ಗ್ರಾಮದ ಯುವತಿ ಸಾಕೆ ಭಾರತಿಯವರು ಬಡತನದ ಹಿನ್ನೆಲೆಯಿಂದ ಬಂದವರು.
ಭಾರತಿಯವರು ಬಾಲ್ಯದಿಂದಲೇ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದರು. ತಮ್ಮ ಪಾಲಕರ ಮೂರು ಮಕ್ಕಳಲ್ಲಿ ಹಿರಿಯಳಾದ ಆಕೆ ಹನ್ನೆರಡನೇ ತರಗತಿಯವರೆಗೆ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಓದಿದ್ದಳು.
ಕುಟುಂಬದ ಆರ್ಥಿಕ ವ್ಯವಸ್ಥೆ ಉತ್ತಮವಾಗಿರದ ಕಾರಣ ಪಿಯುಸಿಯಲ್ಲೆ ವಿದ್ಯಾಬ್ಯಾಸ ನಿಲ್ಲಿಸುವಂತಾಗಿತ್ತು.
ನಂತರ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯ ಸಂಬಂಧಿಯೊಬ್ಬರನ್ನು ಮದುವೆಯಾಗುತ್ತಾರೆ. ಒಂದು ಮಗುವು ಆಗುತ್ತದೆ. ಆದರೆ, ಇಷ್ಟೆಲ್ಲ ಅಡಚಣೆಗಳ ಮಧ್ಯೆ ಭಾರತಿಯವರ ಶಿಕ್ಷಣದ ಕುರಿತಾದ ತುಡಿತ ಮಾತ್ರ ಕಿಂಚಿತ್ತು ಕಡಿಮೆಯಾಗಿರಲಿಲ್ಲ.
ಕೂಲಿ ಕೆಲಸ ಮಾಡುತ್ತಲೇ ತನ್ನೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಅನಂತಪುರದ ಎಸ್.ಎಸ್.ಬಿ.ಎನ್ ಪದವಿ ಮತ್ತು ಪಿಜಿ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.
ಪ್ರತಿದಿನ ಮನೆ ಕೆಲಸಗಳನ್ನು ಮುಗಿಸಿ ನಂತರ ತಮ್ಮ ಹಳ್ಳಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾಲೇಜಿಗೆ ಬಸ್ ಹಿಡಿಯಲು ಅವರು ನಡೆದುಕೊಂಡು ಹೋಗಬೇಕಾಗಿತ್ತು.
ಇಷ್ಟೆಲ್ಲಾ ಸವಾಲುಗಳ ನಡುವೆ ಗಟ್ಟಿಯಾಗಿ ನಿಂತ ಗಟ್ಟಿಗಿತ್ತಿ ಇದೀಗ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಕೋರ್ಸ್ ಗೆ ದಾಖಲಾಗಿ ಇತ್ತೀಚಿಗೆ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.
ಭಾರತಿಯವರ ಈ ಸಾಧನೆಯ ಹಿಂದೆ ಕೃಷಿ ಕಾರ್ಮಿಕರಾಗಿರುವ ಅವರ ಪತಿ ಶಿವಪ್ರಸಾದ್ ರವರ ಬೆಂಬಲ ಕೂಡ ಇದೆ ಎನ್ನುತ್ತಾರೆ ಅವರು
Red Banana: ಆಧುನಿಕ ಕೃಷಿ ಪದ್ದತಿಯಿಂದ ́ಕೆಂಪು ಬಾಳೆʼ ಬೆಳೆದು ₹35 ಲಕ್ಷ ಗಳಿಸುತ್ತಿರುವ ಯುವ ರೈತ!