Agripedia

ಏಕ ಬೆಳೆ ಭೂಮಿಗೆ ಭಾರ: ಲಾಭವಿದ್ದರೂ ಕೃಷಿಕರು ಬೆಳೆ ಬದಲಿಸದೇ ಇರಲು ಕಾರಣವೇನು?

20 June, 2021 9:19 PM IST By:

ಭಾರತ ಸಮತೋಲನ ಹವಾಮಾನವನ್ನು ಒಳಗೊಂಡಿರುವ ದೇಶ. ಇಲ್ಲಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಮಳೆಯಾಗಲಿ, ತಾಪಮಾನವಾಗಲಿ ಅಥವಾ ಚಳಿಯಾಗಲಿ ಮಿತಿ ಮೀರಿ ಹೋಗುವುದಿಲ್ಲ. ಯಾವ ಅವಧಿಯಲ್ಲಿ ಎಷ್ಟಿರಬೇಕೋ ಅಷ್ಟೇ ಬಿಸಿಲು-ಚಳಿ-ಮಳೆ ಇರುತ್ತದೆ (ಕೆಲವು ನಗರಗಳನ್ನು ಹೊರತುಪಡಿಸಿ). ಈ ನಡುವೆ ಜಾಗತಿಕ ತಾಪಮಾನ ಏರಿಕೆಯಾದ ಪರಿಣಾಮವಾಗಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಜೊತೆಗೆ, ತಾಪಮಾನವೂ ಎಂದಿಗಿಂತಲೂ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಲೇ ಸಾಗಿದೆ. ಆದರೆ ಪಾಶ್ಚಿಮಾತ್ಯ ಹಾಗೂ ಯೂರೋಪ್ ದೇಶಗಳಲ್ಲಿ ಇರುವಂತೆ ತಾಪಮಾನ ಎಂದೂ ಮಿತಿ ಮೀರುವುದಿಲ್ಲ. ಹಾಗೇ ಚಳಿಗಾಳದಲ್ಲಿ ಮಂಜು ಬೀಳುವುದಿಲ್ಲ. ಉಷ್ಣಾಂಶ ಮೈನಸ್ ಡಿಗ್ರಿ ಸೆಲ್ಸಿಯಸ್ ತಲುಪುವುದಿಲ್ಲ.

ಭಾರತದಲ್ಲಿನ ಈ ಸಮತೋಲಿತ ಹವಾಗುಣ ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅನುಕೂಲಕರವಾಗಿದೆ. ಹೀಗಾಗಿಯೇ ದೇಶದ ಪ್ರತಿಯೊಂದು ರಾಜ್ಯ, ಆಯಾ ರಾಜ್ಯಗಳ ಒಂದೊಂದು ಜಿಲ್ಲೆಯಲ್ಲೂ ಒಂದೊಂದು ರೀತಿಯ ಬೆಳೆ ಬೆಳೆಯುತ್ತಾರೆ. ರುತುಮಾನಗಳಿಗೆ ಅನುಗುಣವಾಗಿ ಬೆಳೆಗಳನ್ನು ಬದಲಿಸುವ ಪದ್ಧತಿ ಭಾರತದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅಲ್ಲದೆ ಯಾವ ತಿಂಗಳು ಯಾವ ಬೆಳೆ ಬೆಳೆಯಲು ಸೂಕ್ತ ವಾತಾವರಣ ಇರಲಿದೆ ಎಂಬ ನೈಯಸರ್ಗಿಕ ವಿಜ್ಞಾನವನ್ನು ದೇಶದ ಕೆಲ ಕೃಷಿಕರು ಚನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕದ ಕೃಷಿ ಪದ್ಧತಿಯನ್ನು ನೋಡುವುದಾದರೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಆಗಾಗ ಬೆಳೆಗಳ ಬದಲಾವಣೆ ಮಾಡಲಾಗುತ್ತದೆ. ಆದರೆ, ನೀರಾವರಿ ಸೌಲಭ್ಯ ಇರುವ ಕೃಷಿಕರು ಪ್ರತಿ ಬೆಳೆಯೂ ಏಕ ರೂಪದ ಬೆಳೆಗಳನ್ನು ಬೆಳೆಯುತ್ತಾ ಹೋಗುತ್ತಾರೆ. ಇದರಿಂದ ಭೂಮಿಯ ಫಲವತ್ತತೆಗೆ ಪೆಟ್ಟು ಬೀಳುತ್ತದೆ. ಇಳುವರಿ ಕುಂಠಿತವಾದಾಗ, ಇಳುವರಿ ಹೆಚ್ಚಿಸಲು ರಾಸಾಯಯನಿಕ, ಕೀಟನಾಶಕ ಸಿಂಪಡಿಸುವುದರಿAದ ಭೂಮಿಯಲ್ಲಿನ ಫಲವತ್ತತೆಯ ಸತ್ವ ಮತ್ತಷ್ಟು ಹಾಳಾಗುತ್ತದೆ.

ನೀವು ಯಾವುದೇ ಕೃಷಿ ತಜ್ಞರು, ವಿಜ್ಞಾನಿಗಳನ್ನು ಕೇಳಿ, ಭೂಮಿ ಫಲವತ್ತತೆ ಕಾಪಾಡಲು ಹಾಗೂ ಅಧಿಕ, ಗುಣಮಟ್ಟದ ಇಳುವರಿ ಪಡಯಲು ಅವರು ನೀಡುವ ಒಂದೇ ಒಂದು ಸಲಹೆ ಬಹು ಬೆಳೆ ಪದ್ಧತಿ, ಅಥವಾ ಆಯಾ ಮಾಸ, ರುತು ಹಾಗೂ ಹವಾಗುಣಕ್ಕೆ ಅನುಗುಣವಾಗಿ, ಆಯಾ ಸಂದರ್ಭಗಳಿಗೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಬೇಕು ಎಂಬುದಾಗಿರುತ್ತದೆ. ಹಾಗಾದರೆ ರಾಜ್ಯದ ಕೃಷಿಕರೇಕೆ ಬಹು ಬೆಳೆ ಪದ್ಧತಿ ಅನುಸರಿಸುತ್ತಿಲ್ಲ? ರುತುಗಳಿಗೆ ಅನುಗುಣವಾದ ಬೆಳೆ ಬೆಳೆಯಲು ಹಿಂಜರಿಕೆ ಏಕೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಏಕ ಬೆಳೆ ಏಕೆ?

ರೈತರ ಜೀವನ ಪ್ರಕೃತಿ, ಮಳೆ ಹಾಗೂ ಮಾರುಕಟ್ಟೆಯೊಂದಿಗಿನ ಜೂಜಾಟವಿದ್ದಂತೆ. ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಬಂದರೆ, ಇನ್ನೇನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಚಂಡಮಾರುತವೋ, ಬಿರುಗಾಳಿಯೋ ಬಂದು ಬೆಳೆ ನೆಲಕಚ್ಚುತ್ತದೆ. ಬೇಸಿಗೆ ಬೆಳೆ ಕಟಾವು ಸಂದರ್ಭದಲ್ಲಿ ಮಳೆ ಬಂದು ಕೆಲಸ ಕೆಡಿಸುತ್ತದೆ. ಈ ಪ್ರಕೃತಿ, ಮಳೆ ಎರಡೂ ಸಹಕಾರ ನೀಡಿ ಸಕಾರಾತ್ಮಕ ವಾತಾವರಣವಿದ್ದಾಗ ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ, ನ್ಯಾಯಯುತ ಬೆಲೆ ಸಿಗುವುದಿಲ್ಲ. ಹೀಗಾಗಿ ಪ್ರತಿ ಬಾರಿ ಬೆಳೆ ಬದಲಾಯಿಸುವ ಸಾಹಸಕ್ಕೆ ರೈತರು ಕೈಹಾಕುವುದೇ ಇಲ್ಲ. ಉದಾಹರಣೆಗೆ ನೋಡುವುದಾದರೆ ಭತ್ತ ಬೆಳೆಯುವ ರೈತರು ಈಗಾಗಲೇ ಅದಕ್ಕೆ ಸೂಕ್ತ ಮಾರುಕಟ್ಟೆ ಅಥವಾ ಕೊಳ್ಳುವ ವರ್ತಕರನ್ನು ಕಂಡುಕೊAಡಿರುತ್ತಾರೆ. ಆ ಬೆಳೆ ಬೆಳೆದರೆ ಎಷ್ಟು ಆದಾಯ ಬರುತ್ತದೆ, ಆ ಹಣದಲ್ಲಿ ಸಂಸಾರ ನಿರ್ವಹಣೆ ಸಾಧ್ಯವಾಗುವುದೇ, ಇಲ್ಲವೇ ಎಂಬುದನ್ನು ಅರ್ಥ ಮಾಡಿಕೊಂಡಿರುತ್ತಾರೆ. ಹೀಗಾಗಿ, ಆದಾಯ ಹಾಗೂ ಆಹಾರ ಭದ್ರತೆಯ ದೃಷ್ಟಿಯಿಂದ ಅದೊಂದೇ ಬೆಳೆಗೆ ಅಂಟಿಕೊAಡು ಕೃಷಿ ನಡೆಸುತ್ತಾರೆ.

ಸಣ್ಣ ಸಣ್ಣ ಹಿಡುವಳಿ

ಕರ್ನಾಟಕದಲ್ಲಿ ನೂರಾರು ಎಕರೆ ಭೂಮಿ ಹೊಂದಿರುವ ದೊಡ್ಡ ಪ್ರಮಾಣದ ಹಿಡುವಳಿದಾರರು ತೀರಾ ಕಡಿಮೆ. ಇಲ್ಲೇನಿದ್ದರೂ ಹತ್ತು, ಇಪ್ಪತ್ತು ಎಕರೆ ಭೂಮಿ ಹೊಂದಿರುವವರೇ ಹೆಚ್ಚು. ಅದರಲ್ಲೂ ಎರಡು ಅಥವಾ ಮೂರು ಎಕರೆ, ಇಲ್ಲವೇ ಅದಕ್ಕಿಂತಲೂ ಕಡಿಮೆ ಭೂಮಿ ಹೊಂದಿರುವ ಅತಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿದೆ. ಇವರು ನಿರ್ದಿಷ್ಟ ಆದಾಯ ನೀಡುವ ಬೆಳೆ ಬೆಳೆಯುತ್ತಾರೆಯೇ ಹೊರತು, ಇರುವ ಅಲ್ಪ ಭೂಮಿಯಲ್ಲಿ ಪ್ರಯೋಗ ಮಾಡಿ, ದುರಾದೃಷ್ಟದಿಂದ ಬೆಳೆ ಕೈ ಕೊಟ್ಟರೆ ಉಪವಾಸ ಕೂರಲು ಬಯಸುವುದಿಲ್ಲ. ಇದೂ ಕೂಡ ಏಕ ಬೆಳೆ ಪದ್ಧತಿ ಅನುಸರಿಸಲು ಕಾರಣವಾಗಿದೆ.

ಮಾರುಕಟ್ಟೆ ಸಮಸ್ಯೆ

ರಾಜ್ಯದ ವಿಷಯಕ್ಕೆ ಬರುವುದಾದರೆ ಎಲ್ಲಾ ಜಿಲ್ಲೆ ಅಥವಾ ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ಬೆಳೆ, ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ರೈತರ ಅನುಕುಲಕ್ಕೆಂದೇ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರಗಳಿವೆಯಾದರೂ, ಅಲ್ಲಿನ ದಲ್ಲಾಳಿಗಳ ಹಾವಳಿ ಹಾಗೂ ಕಾಯುವ ಕಾಯಕಕ್ಕೆ ಬೇಸತ್ತು ರೈತರು ಎಪಿಎಂಸಿಗಳ ಬಗ್ಗೆ ಹೆಚ್ಚು ಒಲವು ತರುವುದಿಲ್ಲ. ಹೀಗಾಗಿ, ವಿಭಿನ್ನ ಬೆಳೆಗಳನ್ನು ಬೆಳೆದು ಪ್ರಯೋಗ ಮಾಡಿ ಯಶಸ್ವಿಯಾದರೂ, ಬೆಳೆ ಕೊಳ್ಳಲು ಯಾರೂ ಬರದಿದ್ದರೆ ಏನು ಮಾಡುವುದು ಎಂಬ ಭಯದಿಂದ ತಮ್ಮ ಭಾಗದಲ್ಲಿ ಲಭ್ಯವಿರುವ ಮಾರುಕಟ್ಟೆ ಅವಕಾಶಗಳಳಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಾರೆ. ಮಾರುಕಟ್ಟೆ ಸಮಸ್ಯೆಯೇ ಬಹು ಬೆಳೆ ಪದ್ಧತಿ ಅನುಸರಿಸದೇ ಇರಲು ಪ್ರಮುಖ ಕಾರಣವಾಗಿದೆ.

ಬದಲಾದ ಪರಿಸ್ಥಿತಿ

ಇತ್ತೀದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬAಧಿಸಿದAತೆ ಬಹಳಷ್ಟು ಬದಲಾವಣೆಗಳಾಗಿದೆ. ಇ-ಕಾಮರ್ಸ್ ಮಾರುಕಟ್ಟೆ ಪ್ರಚಲಿತಕ್ಕೆ ಬಂದಾಗಿನಿAದ ಕೃಷಿಕರು ಬೆಳೆಯುವ ಧಾನ್ಯ, ತರಕಾರಿ, ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ನಗರ ಪ್ರದೇಶಗಳಿಗೆ ಹೊಂದಿಕೊAಡAತಿರುವ ಗ್ರಾಮಗಳಲ್ಲಿ ಬೆಳೆಯಯುವ ಹಣ್ಣು, ತರಕಾರಿಗಳನ್ನು ರೈತರ ಜಮೀನಿಗೇ ಹೋಗಿ ಕೊಳ್ಳುವ ವರ್ತಕರ ವಲಯವೊಂದು ಹುಟ್ಟಿಕೊಂಡಿದೆ. ಹೀಗಾಗಿ ರುತುಮಾನಕ್ಕೆ ಅನುಗುಣವಾದ ಬೆಳೆಗಳನ್ನು ಬಎಳೆಯಯಲು ಈಗ ಸೂಕ್ತ ವಾತಾವರಣವಿದೆ. ಇನ್ನೇನಿದ್ದರೂ ರೈತರು ಮನಸು ಬದಲಿಸಿ, ತಾವು ಬೆಳೆಯುವ ಬೆಳೆಗಳನ್ನು ಬದಲಿಸಬೇಕು. ವರ್ಷದಿಂದ ವರ್ಷಕ್ಕೆ ಅಥವಾ ಬೆಳೆಯಿಂದ ಬೆಳೆಗೆ ವಿಭಿನ್ನ ಬೆಳೆ ಆಯ್ಕೆ ಮಾಡಿಕೊಳ್ಳುವ ಮೂಲಕ ಭೂಮಿಯ ಫಲವತ್ತತೆ ಕಾಪಾಡುವ ಜೊತೆಗೆ ತಮ್ಮ ಆದಾಯವನ್ನೂ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕು.