Agripedia

ವಾತಾವರಣ, ಮಣ್ಣಿಗೆ ಅನುಗುಣವಾದ ಬೆಳೆ, ಬೀಜಗಳ ಆಯ್ಕೆಗೆ ಇರಲಿ ಪ್ರಥಮ ಆದ್ಯತೆ

29 June, 2021 1:19 PM IST By:

ಬದಲಾಗುತ್ತಿರುವ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಪ್ರದೇಶಕ್ಕೆ ಸೂಕ್ತವಾಗಿರುವ ಬೆಳೆಗಳನ್ನು ಹಾಗೂ ಉತ್ತಮ ಇಳುವರಿ ನೀಡುವ ತಳಿಗಳನ್ನು ಅಯ್ಕೆ ಮಾಡಿಕೊಂಡು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮವಾದ ಇಳುವರಿ ಪಡೆಯಲು ಸಾಧ್ಯವಿದೆ. ರೈತ ಬಾಂಧವರು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿದರೆ ಉತ್ತಮ ಬೆಳೆ ಪಡೆಯಲಲು ಅನುಕೂಲವಾಗಲಿದೆ.

ಸೂಕ್ತ ಬೆಳೆಗಳು ಹಾಗೂ ಆ ಬೆಳೆಗಳಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಿದ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಬೆಳೆಯಬೇಕು.

ಉದಾಹರಣೆಗೆ: ತೊಗರಿ: ಜಿಆರ್‌ಜಿ -811  ಜಿಆರ್‌ಜಿ -152  ಬಿಎಸ್‌ಎಮ್‌ಆರ್-736

ಉದ್ದು : ಡಿಯು-1 ಡಿಬಿಜಿವ್ಹಿ-5 ಮತ್ತು ಬಿಡಿಯು-12

ಹೆಸರು : ಸೆಲೆಕ್ಷನ್-4, ಬಿಜಿಎಸ್-9, ಟಿಅರ್‌ಸಿಅರ್‌ಎಂ-147

ಸೋಯಾ ಅವರೆ: ಡಿಎಸ್‌ಬಿ-21 ಮತ್ತು ಜೆಎಸ್-335

  1. ಪ್ರತಿ ಎಕರೆಗೆ ಅಗತ್ಯವಿರುವ ಬೀಜಗಳಿಗೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಅಣುಜೀವಿ ಗೊಬ್ಬರ 200 ಗ್ರಾಂ ಮತ್ತು 20 ಗ್ರಾಂ. ಟ್ರೆöÊಕೋಡರ್ಮದಿಂದ ಬೀಜೋಪಚಾರ ಮಾಡಿ. ರಸಹೀರುವ ಕೀಟಗಳ ನಿರ್ವಹಣೆಗಾಗಿ ಇಮಿಡಾಕೋಪ್ರಿಡ್ 60 ಎಫ್‌ಎಸ್ 10 ಮಿ.ಲೀ ನಿಂದ ಪ್ರತಿ ಕಿ,ಗ್ರಾಂ ಹೆಸರು ಅಥವಾ ಉದ್ದಿನ ಬೀಜಗಳನ್ನು ಉಪಚರಿಸಿ
  2. ರಾಸಾಯನಿಕ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಬಳಸುವದು ಉತ್ತಮ ಹಾಗಾಗಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ಸರಿಯಾಗಿ ಸಂಯೋಜಿಸಿದ ಗೊಬ್ಬರವನ್ನು ಬೇಕಾದ ಪ್ರಮಾಣದಲ್ಲಿ ಬಳಸಿ.
  • ತೊಗರಿ, ಹೆಸರು, ಉದ್ದು ಬೆಳೆಗೆ ಸಾರಜನಕ: ರಂಜಕ 10 ಕೆ.ಜಿ. : 20 ಕೆ.ಜಿ (ಯೂರಿಯಾ 4.4 ಕಿ.ಗ್ರಾಂ. ಮತ್ತು ಡಿ.ಎ.ಪಿ 44 ಕಿ.ಗ್ರಾಂ) ಗಂಧಕ: 8 ಕೆ.ಜಿ. (40 ಕಿ.ಗ್ರಾಂ. ಜಿಪ್ಸಂ ಮೂಲಕ) ಬಳಸಬಹುದು.
  • ಸೋಯಾ ಅವರೆಗೆ ಸಾರಜನಕ : ರಂಜಕ : ಪೊಟ್ಯಾಷ್ 16:32:10 ಕೆ.ಜಿ. ಅನುಪಾತದಲ್ಲಿ ಅಂದರೆ (ಯೂರಿಯಾ 8.0 ಕಿ.ಗ್ರಾಂ., ಡಿ.ಎ.ಪಿ 70.0 ಕಿ.ಗ್ರಾಂ ಮತ್ತು ಮ್ಯೂರೇಟ್ ಆಫ್ ಪೊಟ್ಯಾಷ್ 17.0 ಕಿ.ಗ್ರಾಂ.) ಹಾಗೂ ಗಂಧಕ : 8 ಕೆ.ಜಿ. (40 ಕಿ.ಗ್ರಾಂ. ಜಿಪ್ಸಂ ಮೂಲಕ) ನೀಡುವುದು.
  1. ರಾಸಾಯನಿಕ ಗೊಬ್ಬರ ಹಾಕುವ ವಿಧಾನ: ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕ ಕಾಲಕ್ಕೆ ಬಿತ್ತುವ ಕೂರಿಗೆಯಿಂದ ಬಿತ್ತುವಾಗ ಹಾಕಬೇಕು.
  2. ತೊಗರಿಯಲ್ಲಿ ಲಘು ಪೋಷಕಾಂಶಗಳನ್ನು ಹಾಕುವ ವಿಧಾನ: ಸತುವಿನ ಸಲ್ಫೇಟ್: 6.0 ಕೆ.ಜಿ. ಪ್ರತಿ ಎಕರೆಗೆ, ಸತುವಿನ ಸಲ್ಫೇಟ್ ಅನ್ನು ಬಿತ್ತನೆ ಮಾಡಿದ 20-25 ದಿನಗಳ ನಂತರ ಅಷ್ಟೆ ಪ್ರಮಾಣದ ಸೊಸಿದ ತಿಪ್ಪೆ ಗೊಬ್ಬರ ಜೊತೆಯಲ್ಲಿ ಕೊಡಬೇಕು.
  3. ಸೋಯಾ ಅವರೆಯಲ್ಲಿ ಲಘು ಪೋಷಕಾಂಶಗಳನ್ನು ಹಾಕುವ ವಿಧಾನ: ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ 5 ಕೆ.ಜಿ ಸತುವಿನ ಸಲ್ಫೇಟ್ ಅನ್ನು ಅಷ್ಟೆ ಪ್ರಮಾಣದ ಸೊಸಿದ ತಿಪ್ಪೆ ಗೊಬ್ಬರ ಜೊತೆಯಲ್ಲಿ ಕೊಡಬೇಕು
  4. ಆಯಾ ಬೆಳೆಗಳಿಗೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಬಿತ್ತನೆ ಕೈಗೊಳ್ಳಬೇಕು. ಸರಿಯಾದ ವಾತಾವರಣ, ತೇವಾಂಶ ಹಾಗೂ ನಿರ್ಧಿಷ್ಟಾವಧಿಯಲ್ಲಿ ಬಿತ್ತನೆ ಕೈಗೊಂಡಲ್ಲಿ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುತ್ತದೆ. ಉದಾಹರಣೆಗೆ: ಉದ್ದು ಹಾಗೂ ಹೆಸರು ಬೇಳೆಯನ್ನು ಜೂನ್ ಮೊದಲ ಪಾಕ್ಷಿಕದಲ್ಲಿಯೇ ಬಿತ್ತನೆ ಮಾಡಬೇಕು, ತೊಗರಿ ಮತ್ತು ಸೋಯಾಅವರೆಯನ್ನು ಜುಲೈ ತಿಂಗಳ 15ನೇ ತಾರೀಖಿನವರೆಗೆ ಬಿತ್ತಬಹುದು
  1. ತೊಗರಿ ಬೆಳೆಯಲ್ಲಿ ಕಳೆ ನಿರ್ವಹಣೆಗಾಗಿ: ಎ) ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 3.0 ಮಿ.ಲೀ. ಪೆಂಡಿಮಿಥಾಲಿನ್ ಸಾಕಷ್ಟು ತೇವಾಂಶವಿದ್ದಾಗ ಸಿಂಪರಿಸಿ. ಬಿ) ಕಳೆಗಳು 3-5 ಎಲೆಗಳ ಹಂತದಲ್ಲಿದಾಗ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಇಮ್ಯಾಝೆತಾಪೈರ್ 10 ಎಸ್.ಎಲ್ ಸಿಂಪರಣೆ ಮಾಡಿ, ಸಿ) ನಂತರ ಕಳೆ ಇದ್ದಲ್ಲಿ ಕೈಯಿಂದ ತೆಗೆಯುವುದು.
  2. ಹೆಸರಿನ ಬೆಳೆಯಲ್ಲಿ ಕಳೆ ನಿರ್ವಹಣೆಗಾಗಿ ಬೀಜ ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 4.3 ಮಿ.ಲೀ. ಪೆಂಡಿಮಿಥಾಲಿನ್ 30 ಇ.ಸಿ. ಕಳೆನಾಶಕ ಬೆರೆಸಿ ಸಾಕಷ್ಟು ತೇವಾಂಶವಿದ್ದಾಗ ಸಿಂಪಡಿಸಿ
  3. ಸೋಯಾಅವರೆ ಬೆಳೆಯಲ್ಲಿ ಕಳೆ ನಿರ್ವಹಣೆಗಾಗಿ: ಬಿತ್ತಿದ ದಿನ ಅಥವಾ ಮರುದಿನ ಪ್ರತಿ ಲೀಟರ್ ನೀರಿಗೆ 4.3 ಮಿ.ಲೀ. ಪೆಂಡಿಮಿಥಾಲಿನ್ ಅನ್ನು ಸಾಕಷ್ಟು ತೇವಾಂಶವಿದ್ದಾಗ ಸಿಂಪಡಿಸಿ. ಕಳೆಗಳು 3-5 ಎಲೆಗಳ ಹಂತದಲ್ಲಿದಾಗ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಇಮ್ಯಾಝೆತಾಪೈರ್ 10 ಎಸ್.ಎಲ್ ಸಿಂಪರಣೆ ಮಾಡಿ, ನಂತರ ಕಳೆ ಇದ್ದಲ್ಲಿ ಕೈಯಿಂದ ತೆಗೆಯಿರ.
  4. ಕಳೆನಾಶಕಗಳನ್ನು ಬಳಸುವ ಮುನ್ನ ತಜ್ಞರು, ವಿಜ್ಞಾನಿಗಳೊಂದಿಗೆ ಚರ್ಚಿಸಿ ಖರೀದಿಸಿರಿ. ಈಗಾಗಲೆ ಬಿತ್ತನೆ ಮಾಡಿದ ಸೋಯಾ ಅವರೆ, ಹೆಸರು ಮತ್ತು ಉದ್ದು ಬೆಳೆಗಳಿಗೆ 15 ದಿನಗಳಾಗಿದ್ದು, 2-4 ಎಲೆಯ ಹಂತದಲ್ಲಿವೆ. ಈ ಸಮಯದಲ್ಲಿ ಕಾಂಡನೋಣದ ಬಾಧೆ ಕಾಡುವ ಸಾಧ್ಯತೆಯಿದ್ದು, ನಿರ್ವಹಣೆಗಾಗಿ ಥೈಯೋಮಿಥಾಕ್ಸಾಮ್ 0.25 ಗ್ರಾಂ ಅಥವಾ 0.3 ಮಿ,ಲೀ ಇಮಿಡಾಕ್ಲೋಪ್ರಿಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಇದೇ ಸಿಂಪಡಣೆಯನ್ನು 10 ದಿವಸಗಳ ನಂತರ ಮತ್ತೊಮ್ಮೆ ಕೈಗೊಳ್ಳಿ.
  5. ತಮ್ಮ ಕ್ಷೇತ್ರದಲ್ಲಿ ಕಂಡುಬರುವ ಕೀಟ ಹಾಗೂ ರೋಗಗಳ ನಿರ್ವಹಣೆಯನ್ನು ವಿಜ್ಞಾನಿಗಳು ಅಥವಾ ರೈತ ಸಂಪರ್ಕ ಕೇಂದ್ರದಲ್ಲಿರುವ ಅಧಿಕಾರಿಗಳೋಂದಿಗೆ ಚರ್ಚಿಸಿ ಕೈಗೊಳ್ಳಿ
  6. ತೊಗರಿ, ಉದ್ದು, ಹೆಸರು ಮತ್ತು ಸೊಯಾ ಅವರೆಯನ್ನು ಬಾಧಿಸುತ್ತಿರುವ ಬಸವನ ಹುಳುವಿನ ನಿರ್ವಹಣೆಗಾಗಿ ಎಕರೆಗೆ 2 ಕಿ.ಗ್ರಾಂ ಮೆಟಾಲ್ಡಿಹೈಡ್ ಬಳಸಿ.
  7. ಅರಶಿಣದಲ್ಲಿ ಕಂಬಳಿ ಹುಳುವಿನ ಬಾಧೆ ಕಂಡು ಬಂದಿದ್ದು, ಇದು ಎಲೆಯಲ್ಲಿಯ ಪತ್ರಹರಿತ್ತನ್ನು ತಿಂದು ಎಲೆಯನ್ನು ಜರಡಿಯಂತೆ ಮಾಡುತ್ತದೆ. ನಿರ್ವಹಣೆಗಾಗಿ ಹುಳು ಬಾಧೆ ಮಾಡುವದು ಕಂಡ ತಕ್ಷಣ ಗಿಡದ ಭಾಗ/ಇಡಿ ಗಿಡವನ್ನು ಕಿತ್ತು ಸುಟ್ಟು ಬಿಡಿ. ನಂತರ ಮೆಲಾಥಿüಯಾನ ಅಥವಾ ಪನ್ಸ್ಲ್‌ರೇಟ್ ಅಥವಾ ಸೈಪರ್‌ಮೆತ್ರಿನ್ ಪುಡಿಯನ್ನು ಪ್ರತಿ ಎಕರೆಗೆ 8 ಕಿ.ಗ್ರಾಂ ನಂತೆ ಧೂಳಿಕರಿಸಿ.
  8. ಮೆಣಸಿನ ಕಾಯಿ ಬೆಳೆಯಲ್ಲಿ ಎಲೆ ಮುಟುರು ರೋಗ ಕಂಡು ಬಂದಿದ್ದು ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಫೆನ್ಜ್ಕ್ವಿನ್ ಜೊತೆಗೆ 0.3 ಮಿ.ಲೀ ಇಮಿಡಾಕ್ಲೋಪ್ರಿಡ್ ಬೆರೆಸಿ ಸಿಂಪಡಿಸಿ.
  1. ಮಾವಿನ ಗಿಡದಲ್ಲಿ ಟೊಂಗೆಗಳು ದಟ್ಟವಾಗಿ ಬೆಳೆದಿದ್ದರೆ ಗಿಡದ ಒಳ ಭಾಗದಲ್ಲಿ ಗಾಳಿ, ಬೆಳಕು ಮತ್ತು ಸೂರ್ಯನ ಕಿರಣಗಳು ಪ್ರವೇಶಸುವಂತೆ ಅನುಕೂಲವಾಗಲು ಕೆಲ ಟೋಂಗೆಗಳನ್ನು ಚಾಟಿನಿ ಮಾಡಬೇಕು ಹಾಗೂ ಕತ್ತರಿಸಿದ ಭಾಗಕ್ಕೆ ಶಿಲಿಂದ್ರನಾಶಕ, ಕೀಟನಾಶಕ ಲೇಪಿಸಬೇಕು (40 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್+ 5 ಮಿ.ಲೀ ಹೆಕ್ಸಾಕೋನೊಜೋಲ್ + 10 ಮಿ.ಲೀ ಕ್ಲೋರ್‌ಪೈರಿಫಾಸ್ 100 ಮಿ.ಲೀ ಡಿಸ್ಟೆಂಪರ್ 10 ಮಿ.ಲೀ ಅಂಟು ಬೆರಸಿ ದ್ರಾವಣ ತಯಾರಿಸಬೇಕು).
  2. ಬಾಳೆ ಬೆಳೆ ನಾಟಿಗೆ ಇದು ಸೂಕ್ತ ಸಮಯ. ನಾಟಿಗೆ ಕಂದು ಇಲ್ಲವೆ ಅಂಗಾAಶ ಕೃಷಿಯ ಸಸಿ ಬಳಸಬೇಕು.
  3. ಪಪ್ಪಾಯ ಬೆಳೆ ಆರಂಭಿಸಲು ಜೂಲೈ ತಿಂಗಳು ಸಕಾಲವಾಗಿದ್ದು, ಇದರಲ್ಲಿ ಕುಂಬಳ ಜಾತಿಗೆ ಸೇರಿದ ಬೆಳೆಗಳನ್ನು ಅಂತರ ಬೆಳೆಯಯಾಗಿ ಬೆಳೆಯಬಾರದು.
  4. ಮಳೆಗಾಲ ಆರಂಭವಾದ ನಂತರ ಕುರಿ ಹಾಗೂ ಆಡುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು. ನಂತರ ಒಂದು ವಾರದ ಬಳಿಕ ಹಿರೇಬೇನೆ(ಪಿಪಿಆರ್) ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಒಂದು ತಿಂಗಳ ಬಳಿಕ ಕರಳು ಬೇನೆ (ಇ.ಟಿ) ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.
  5. ಮಳೆಗಾಲ ಆರಂಭವಾದ ನಂತರ ಎಮ್ಮೆಗಳಿಗೆ ಗಂಟಲು ಬೇನೆ ರೋಗದ ವಿರುದ್ಧ ಲಸಿಕೆ, ಹಸುಗಳಿಗೆ ಹಾಗೂ ಕರುಗಳಿಗೆ ಚಪ್ಪೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಹಾಗೆಯೇ ಮಳೆಗಾಲದಲ್ಲಿ ಸಂಗ್ರಹವಾಗುವ ಕೆಂಪು ನೀರನ್ನು ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಕುಡಿಸಬಾರದು, ಈ ನೀರಿನಿಂದಾಗಿ ನೆಗಡಿ, ಭೇದಿ ಸೇರಿದಂತೆ ಚಪ್ಪೆ ರೋಗ ಹರಡುವ ಸಾಧ್ಯತೆ ಇರುತ್ತದೆ.

ಲೇಖಕರು: ಡಾ. ಸುನೀಲಕುಮಾರ ಎನ್.ಎಂ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬೀದರ್