Agripedia

ಭತ್ತಕ್ಕೆ ತಗಲುವ ಕೊಳವೆ ಹುಳುವಿನ ಬಾಧೆ, ಲಕ್ಷಣಗಳು ಮತ್ತು ಅದರ ಸಮಗ್ರ ನಿರ್ವಹಣಾ ಕ್ರಮಗಳು

04 September, 2021 9:02 PM IST By:

ಭತ್ತದ ಬೆಳೆಯ ಮೇಲೆ ಸುಮಾರು 100 ಕ್ಕೂ ಹೆಚ್ಚು ಜಾತಿಯ ಕೀಟಗಳು ದಾಳಿ ಮಾಡುತ್ತವೆ ಮತ್ತು ಅವುಗಳಲ್ಲಿ 20 ಕೀಟಗಳು ಗಂಭೀರ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತವೆ. ಆ 20 ಕೀಟಗಳ ಪೈಕಿ, ಕೊಳವೆ ಹುಳು ಪ್ರಮುಖ. ಭಾರತದ ಎಲ್ಲಾ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜೌಗು ಪ್ರದೇಶಗಳಲ್ಲಿ ಗಂಭೀರ ಪ್ರಮಾಣದಲ್ಲಿ ಈ ಕೀಟ ಭಾದೆಯನ್ನು ಕಾಣಬಹುದು

ಭಾದೆಯ ಲಕ್ಷಣಗಳು:

ನೀರಾವರಿ ಪರಿಸರದಲ್ಲಿ ಕೀಟವು ನಿಂತಿರುವ ನೀರಿನೊಂದಿಗೆ  ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಎಳೆಯ ಮೊಳಕೆ ನಾಟಿ ಕೂಡ ಕೀಟಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಕೀಟವು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ ಆದರೆ ಅನೂಕೂಲಕರ ವಾತಾವರಣವಿದ್ದರೆ ಕೀಟಗಳ ಸಂಖೆಯೂ ಹೆಚ್ಚಾಗುತ್ತವೆ. ಮರಿ ಹುಳುಗಳು ಎಲೆಗಳನ್ನು ಕೊಳವೆಯಾಕಾರದಲ್ಲಿ ಕತ್ತರಿಸಿ ಅದರಲ್ಲಿ ಅಡಗಿ ಹಸಿರು ಅಂಗಾಂಶಗಳನ್ನು ತಿನ್ನುತ್ತವೆ ಮತ್ತು ಎಲೆಗಳು ಶ್ವೇತಪತ್ರದ ಅಥವಾ ಅಸ್ಥಿಪಂಜರದ ತರ ಆಗುತ್ತವೆ. ಎಲೆಯ ಸುಳಿವುಗಳನ್ನು ತೀವ್ರವಾಗಿ ಕತ್ತರಿಸಲಾಗುತ್ತದೆ ಮತ್ತು ಕತ್ತರಿಸಿದ ಭಾಗಗಳನ್ನು ಸಿಲಿಂಡರಾಕಾರದ ಕೊಳವೆಗಳಾಗಿ ಪರಿವರ್ತಿಸುತ್ತವೆ, ಇವು ನೀರಿನ ಮೇಲೆ ತೇಲುತ್ತವೆ. ಮರಿಹುಳುಗಳು ಕೊಳವೆಯಲ್ಲಿ ಅಡಗಿ ನೀರಿನ ಮೇಲೆ ತೇಲುತ್ತವೆ ಮತ್ತು ಆಹಾರಕ್ಕಾಗಿ ಭತ್ತದ ಸಸ್ಯಕ್ಕೂ ತೆವಳುತ್ತವೆ. ಮಳೆಗಾಲದಲ್ಲಿ ಕುಬ್ಜ, ಕಾಂಪ್ಯಾಕ್ಟ್ ಮತ್ತು ಹೆಚ್ಚಿನ ಇಳುವರಿ ನೀಡುವ ಭತ್ತದ ತಳಿಗಳ  ಮೇಲೆ ಕೆಲವೊಮ್ಮೆ ತೀವ್ರ ಸಂಖ್ಯೆಯಲ್ಲಿ ಕೀಟ ಭಾದೆಯನ್ನು ಕಾಣಬಹುದು.

ಸಾಮಾನ್ಯವಾಗಿ ಈ ಕೀಟವು ಕಡಿಮೆ ಸಂಖ್ಯೆಯಲ್ಲಿ ಭತ್ತದ ಗದ್ದೆಗಳಲ್ಲಿ ಕಂಡುಬರುತ್ತದೆ. ಕೀಟನಾಶಕಗಳ ಬಳಕೆ, ನಿಯಂತ್ರಣ ಅಭ್ಯಾಸಗಳು ಮತ್ತು ಪರಿಸರ ಅಡೆತಡೆಗಳ ಕಾರಣದಿಂದಾಗಿ ಇದು ಸಸ್ಯಗಳ ಬೆಳವಣಿಗೆ ಮತ್ತು ಸಾವಿಗೆ ಕಾರಣವಾಗಿ ತೀವ್ರವಾದ ನಷ್ಟ ಉಂಟುಮಾಡಬಹುದು. ಸಾಮಾನ್ಯವಾಗಿ ಭತ್ತದ ಸಸ್ಯಗಳು ಈ ಕೀಟದ ಹಾನಿಯಿಂದ ಚೇತರಿಸಿಕೊಳ್ಳಬಹುದು. ಆದರೇ, ಬೆಳವಣಿಗೆ 7−10 ದಿನಗಳ ಕಾಲ ವಿಳಂಬವಾಗುತ್ತದೆ.

ಗುರುತಿಸುವುದು ಹೇಗೆ?

ಎಲೆ ಕೊಳವೆಗಳು ನೀರಿನ ಮೇಲೆ ತೇಲುತ್ತವೆ.

ಒಂದು ಜೋಡಿ ಕತ್ತರಿಗಳಂತೆ ಎಲೆಗಳನ್ನು ಲಂಬ ಕೋನಗಳಲ್ಲಿ ಕತ್ತರಿಸಲಾಗುತ್ತದೆ.

ಅಸ್ಥಿಪಂಜರದ ಎಲೆ ಅಂಗಾಂಶವು ಸಾಮಾನ್ಯಾವಾಗಿ ಏಣಿಯಂತೆ ಕಾಣಿಸಿಕೊಳ್ಳುತ್ತವೆ.

ಜೀವನ ಚಕ್ರ:

ಮೊಟ್ಟೆ: ಮೊಟ್ಟೆಯು ವೃತ್ತಾಕಾರವಾಗಿರುತ್ತದೆ, ಚಪ್ಪಟ್ಟೆಯಾಗಿರುತ್ತದೆ. ಇದು ತಿಳಿ ಹಳದಿ ಮತ್ತು ಮೃದುವಾದ ಮೇಲ್ಮೆಯನ್ನು ಹೊಂದಿರುತ್ತದೆ. ಪ್ರಬುಧ್ಧ ಮೊಟ್ಟೆಗಳು ಕಪ್ಪಾಗಿರುತ್ತವೆ.  ಮತ್ತು ಎರಡು ನೇರಳೆ ಬಣ್ಣದ ಚುಕ್ಕೆಗಳು ಕಾಣಬಹುದು. ಒಂದು ವಾರದಲ್ಲಿ ಮೊಟ್ಟೆಯೊಡೆದು ಮರಿಗಳಾಗುತ್ತವೆ.

ಮರಿಹುಳು: ಮರಿಹುಳುವು ಕಿತ್ತಳೆ ಬಣ್ಣದ ತಲೆಯನ್ನು ಮತ್ತು ತಿಳಿ ಅರೆಪಾರದರ್ಶಕ  ಹಸಿರು ದೇಹವನ್ನು ಹೊಂದಿರುತ್ತದೆ ಇದು ದೇಹದ ಬದಿಗಳಲ್ಲಿ ತಂತು ಕಿವಿರುಗಳನ್ನುಹೊಂದಿರುತ್ತದೆ. ಮತ್ತು ಇದು ಎಲೆಗಳನ್ನು ಸಕ್ರಿಯವಾಗಿ ತಿನ್ನುತ್ತದೆ ಸುಮಾರು 20 ದಿನಗಳಲ್ಲಿ 10-12 ಮಿ.ಮೀ. ಉದ್ದವನ್ನು ತಲುಪುತ್ತದೆ.

ಕೋಶ: ಕೋಶ ಕೆನೆ ಬಣ್ಣದಲ್ಲಿರುತ್ತದೆ ಮತ್ತು ಸುಮಾರು 5.5 ಮಿ.ಮೀ. ಪ್ರಬುದ್ದ ಪ್ಯೂಪಾ ಬೆಳ್ಳಿಯ ಬಿಳಿ ಬಣ್ಣ ಹೊಂದಿರುತ್ತದೆ. ಕೋಶದ ಅವಧಿಯು ಸುಮಾರು ಒಂದು ವಾರದವರೆಗೆ ಇರುತ್ತದೆ, ನಂತರ ಅದು ವಯಸ್ಕ ಕೀಟವಾಗಿ ಪರಿವರ್ತನೆ ಆಗುತ್ತದೆ.

ಚಿಟ್ಟೆ: ಚಿಟ್ಟೆ ಚಿಕ್ಕದಾಗಿದ್ದು, ತೆಳು ಕಂದು ಬಣ್ಣದ ಅಲೆಅಲೆಯಾದ ಗುರುತುಗಳೊಂದಿಗೆ ಸೂಕ್ಷ್ಮ ಬಿಳಿ ಬಣ್ಣವನ್ನು ಹೊಂದಿರುತ್ತದೆ. ವಯಸ್ಕ ಚಿಟ್ಟೆ ಸುಮಾರು 5 ಮಿ.ಮೀ. ಇದು ತಿಳಿ ಕಂದು ಮತ್ತು ಕಪ್ಪು ಕಲೆಗಳಿಂದ  ಪ್ರಕಾಶಮಾನವಾದ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಜೀವನ ಚಕ್ರವು ಸುಮಾರು 35-40 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.

ನಿರ್ವಹಣೆ:

ಸರಿಯಾದ ರಸಗೊಬ್ಬರವನ್ನು ಬಳಸಬೇಕು.

ಭತ್ತದ ಗದೆೆಯಿಂದ ಸಂಪೂರ್ಣವಾಗಿ ನೀರನ್ನು ತೆಗೆಯುವುದು.

ಭತ್ತದ ಸಸಿಗಳ ನಡುವೆ ವಿಶಾಲ ಅಂತರವನ್ನು (30*20 ಛಿm) ನೀಡುವುದರ ಮೂಲಕ ಹಾನಿಯನ್ನು ಕಡಿಮೆ ಮಾಡಬಹುದು.

ಜೈವಿಕ ನಿಯಂತ್ರಣ ಏಜೇಂಟ್ಗಳನ್ನು ಪ್ರೋತ್ಸಾಹಿಸಿ: ಬಸವನ ಹುಳು (ಮೊಟ್ಟೆಗಳ ಆಹಾರ), ಹೈಡ್ರೋಫಿಲಿಡ್ ಮತ್ತು ನೀರಿನ ಜೀರುಂಡೆಗಳು, ಜೇಡಗಳು.

ಹಗ್ಗವನ್ನು ಸಸಿಗಳ ಮೇಲೆ ಎಳೆಯುವುದರರಿಂದ ಕೊಳವೆಗಳನ್ನು ತೆಗೆದು ಮತ್ತು ನೀರನ್ನು ಹರಿಸುವುದು ಕೊಳವೆಗಳನ್ನು ಸಂಗ್ರಹಿಸಿ ಕ್ವಿನಾಲ್ಫೋಸ್ 25 ಇಸಿ 80 ಮಿ.ಲಿ. ಸಿಂಪಡಿಸುವುದರ ಮೂಲಕ ನಾಶಮಾಡುವುದು.

ನಿಂತ ನೀರಿಗೆ 250 ಮಿ.ಲಿ.  ಸೀಮೆಎಣ್ಣೆ ಮಿಶ್ರಣ ಮಾಡುವುದರ ಮೂಲಕ ಮರಿಹುಳುಗಳು ನಾಶಪಡಿಸುವುದು.

ಕೆಳಗಿನ ಯಾವುದೇ ಕೀಟನಾಶಕಗಳನ್ನು ಸಿಂಪಡಿಸಿ:

ಫೊಸಲೋನ್ 35 ಇಸಿ 1500 ಮಿ.ಲಿ./ ಹೆಕ್ಟರ್.

ಅಸಿಫೇಟ 75% ಎಸ್ಪಿ 666-1000 ಗ್ರಾಂ/ ಹೆಕ್ಟರ್.

ಥಯಮಿಥೋಕ್ಸಾಮ್ 25% ಡಬ್ಲ್ಯೂಜಿ 100 ಗ್ರಾಂ/ ಹೆಕ್ಟರ್.

ಟ್ರಯಾಜೋಫೋಸ್  40% ಇಸಿ 625-1250 ಮಿ.ಲಿ./ ಹೆಕ್ಟರ್.

ಲೇಖಕರು: ಸುಜಯ್ ಹುರಳಿ (Asst. professor, AICRIP rice, Gangavathi) ವಿನೋದ (SRF, Entomology), University of Agricultural Sciences, Raichur