Agripedia

ಭೂಮಿಯಲ್ಲಿನ ತೇವಾಂಶದ ಲಭ್ಯತೆ ಆಧಾರದ ಮೇಲೆ ಸೋಯಾಬೀನ್ ಬಿತ್ತನೆ ಕೈಗೊಳ್ಳಿ

09 June, 2020 11:59 AM IST By:

ಕರ್ನಾಟಕದಾದ್ಯಂತ ಈಗಾಗಲೇ ಮುಂಗಾರು ಬಿತ್ತನೆ ಕಾರ್ಯ ಚುರುಗಗೊಂಡಿದ್ದಿದರಿಂದ ಕಲಬುರಗಿ ಜಿಲ್ಲೆಯಲ್ಲಿ  ಸೋಯಾಬೀನ್ ಬಿತ್ತನೆ ಕಾರ್ಯಕೈಗೊಳ್ಳುವ ಜಿಲ್ಲೆಯ ರೈತರು ಸಮರ್ಪಕ ಮಳೆಯಾಗಿ ಅನುಕೂಲಕರ ವಾತಾವರಣ ನಿರ್ಮಾಣವಾದ ಸಮಯದಲ್ಲಿ ಮತ್ತು ಭೂಮಿಯಲ್ಲಿನ ತೇವಾಂಶದ ಲಭ್ಯತೆ ಆಧಾರದ ಮೇಲೆ ಸೋಯಾಬೀನ್ ಬಿತ್ತನೆ ಕಾರ್ಯ ಕೈಗೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರಸ್ತುತ ವಾತಾವರಣದಲ್ಲಿ ಭೂಮಿಯ ಉಷ್ಣಾಂಶ ಹೆಚ್ಚಾಗಿ ತೇವಾಂಶ ಅಥವಾ ನೀರಿನಾಂಶ ಕಡಿಮೆ ಇರುವ ಸಂದರ್ಭದಲ್ಲಿ ಸೋಯಾಬೀನ್ ಬಿತ್ತನೆ ಬೀಜ ಸರಿಯಾಗಿ ಮೊಳಕೆ ಒಡೆಯುವುದಿಲ್ಲ. ಸೋಯಾಬೀನ್ ಅತೀ ಸೂಕ್ಷ್ಮವಾಗಿದ್ದು, ಉತ್ತಮ ಮೊಳಕೆ ಬರಲು ತಂಪಾದ ವಾತಾವರಣ ಭೂಮಿಯಲ್ಲಿ ಹದಭರಿತ ತೇವಾಂಶದ ಅವಶ್ಯಕತೆ ಇರುತ್ತದೆ.  ರೈತರು ಬಿತ್ತನೆ ಕಾರ್ಯಕೈಗೊಳ್ಳುವಾಗ ಮುಂಜಾಗ್ರತೆ ಕ್ರಮವಹಿಸುವುದು ಅಗತ್ಯವಾಗಿದೆ.

ಕೇಂದ್ರ ಸರ್ಕಾರದ ಇತ್ತೀಚಿನ ಮಾರ್ಪಾಡಿತ ಮಾರ್ಗಸೂಚಿಯಂತೆ ಜುಲೈ 31 ರವರೆಗೆ ಪ್ರಮಾಣಿಕರಣಗೊಂಡಿರುವ ಸೋಯಾಬೀನ್ ಬಿತ್ತನೆ ಬೀಜದ ಕನಿಷ್ಠ ಮೊಳಕೆ ಪ್ರಮಾಣದ ಮಾನದಂಡವನ್ನು ಶೇ. 70 ರಿಂದ 65ಕ್ಕೆ ಸಡಿಲಗೊಳಿಸಿರುವ ಪ್ರಯುಕ್ತ ರೈತರು ಪ್ರತಿ ವರ್ಷ ಬಿತ್ತನೆಗಾಗಿ ಉಪಯೋಗಿಸುವ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೀಜ ಉಪಯೋಗಿಸಿ ಬಿತ್ತನೆ ಕಾರ್ಯಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.