Agripedia

ತೊಗರಿ ಮತ್ತು ಇತರೆ ಬೆಳೆಗಳಿಗೆ ಬರುವ ಕೀಟ, ರೋಗ ಹಾಗೂ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳು

11 November, 2020 2:03 PM IST By:

ತೊಗರಿ, ಹತ್ತಿ ಸೇರಿದಂತೆ ಇತರ ಬೆಳೆಗಳಿಗೆ  ಸಾಮಾನ್ಯವಾಗಿ ಕಾಡುವ ತೊಂದರೆಯೆಂದರೆ ಕೀಟಗಳ ಹಾವಳಿ, ಹುಳುಗಳು, ಇತ್ಯಾದಿ. ಇವುಗಳಿಂದ ಅಪಾರವಾದ ಬೆಳೆಹಾನಿಯೂ ಆಗುತ್ತದೆ. ಕೀಟ ಹಾವಳಿ ಹಾಗೂ ಬೆಳೆಗಳಿಗೆ ತಗಲುವ ರೋಗಗಳ ನಿಯಂತ್ರಣಕ್ಕೆ ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಿಜಾಪುರ ಸೇರಿದಂತೆ ವಿವಿಧೆ ತೊಗರಿ ಈಗ ಹೂ ಮೊಗ್ಗು ಬಿಡುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿ ಕೀಟಗಳ ಹಾವಳಿಯೂ ಹೆಚ್ಚಾಗುತ್ತಿರುತ್ತದೆ. ಅತೀಯಾದ ಮಳೆಯಿಂದಾಗಿ ಅಲಲ್ಲಿ ನೀರು ನಿಂತು ಹೊದ ಭೂಮಿಯಲ್ಲಿ ಪೈಟೊಪತ್ತೊರ ಬಾದೆಯಿಂದ ನೆಟೆ ರೋಗ ಕಂಡುಬಂದಿದೆ.

ತೊಗರಿ ಹೊಲದಲ್ಲಿ ನೈಸರ್ಗಿಕ ಶತೃಗಳಾದ ಜೇಡ, ಗುಲಗುಂಜಿ ಹುಳು, ಇತ್ಯಾದಿ ರೈತ ಮಿತ್ರ ಕೀಟಗಳು ಇದ್ದವು.  ಜೇವರ್ಗಿ ಅಫಜಲಪೂರ ಮತ್ತು ಚಿಂಚೋಳಿ ತಾಲೂಕುಗಳಲ್ಲಿ ಹತ್ತಿ ಬೆಳೆಯೆ ಬೆಳವಣಿಗೆ ಮದ್ಯಮ ವಾಗಿರುತ್ತದೆ ಮತ್ತು ರಸಹಿರುವ ಕೀಟದ ಬಾದೆ ಕಂಡು ಬಂದಿದೆ ಮತ್ತು ಹತ್ತಿ ಕೆಂಪಾಗುತ್ತಿದೆ.

ಸಮಗ್ರ ನಿರ್ವಹಣಾ ಕ್ರಮಗಳು:

1) ತೊಗರಿಯ ತುದಿ ಜೀಡಿಗಟ್ಟುವ  ಬಾದೆ ಕಂಡುಬಂದರೆ ರೈತರು ಆತಂಕ ಕೊಳಗಾಗಬೆಡಿ. ಎಲ್ಲಿ ಅದರ ಬಾದೆ ಹೆಚ್ಚು ಕಂಡಲ್ಲಿ ರೈತರು ಈ ಕೆಳಗೆ ತಿಳಿಸಿದ ಕೀಟ ನಾಶಕಗಳಾದ ಪೆÇ್ರಪೆನೋಫಾಸ್ 50 ಇ.ಸಿ. 2.0ಮಿ.ಲಿ. ಜೊತೆಗೆ 0.5 ಮಿ.ಲಿ. ಡಿ.ಡಿ.ವಿ.ಪಿ (ನುವಾನ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

2) ಎರಡನೇ ಸಿಂಪರಣೆಯಾಗಿ  : ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ  ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ)  ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ  ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು. 

ಕಷಾಯ ತಯಾರಿಸುವ ವಿದಾನ : 5 ಕಿಲೋ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ 100 ಲೀ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಟು ದ್ರಾವಣ ತೆಗೆಯಿರಿ.  ಈ ದ್ರಾವಣಕ್ಕೆ 25 ಗ್ರಾಂ ಸೋಪಿನಪುಡಿಯನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೇವಿನ ಬೀಜ ಸಿಗದಿದ್ದಲ್ಲಿ ಬೇವಿನ ಬೀಜ ಮೂಲದ ಕೀಟನಾಶಕವನ್ನು (1500ಪಿಪಿಎಮ್) 3 ಮಿ.ಲೀ./ಲೀ ನೀರಿಗೆ ಬೆರೆಸಿ ಸಿಂಪಡಿಸಿ.

3) ತೊಗರಿಯಲ್ಲಿ ಎಲೆ ಚುಕೆ ರೋಗದ ನಿರ್ವಹಣೆ ; ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕರ ಕಂದು ಬಣ್ಣದ ಚುಕ್ಕೆ ಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹು ಉದುರುವು. ಉಷ್ಣಾಂಶ 25 ಸಿ. ಕ್ಕಿಂತ ಕಡಿಮೆ ಹಾಗೂ ಮೊಡಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ 3-4 ತಾಸು ಮಂಜು ಇದ್ದಾಗ ರೋಗದ ಬಾದೆಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು.

4) ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು - ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು.  

ಹೆಚ್ಚಿನ ಮಾಹಿತಿಗಾಗಿ 9880323707 ಗೆ ಸಂಪರ್ಕಿಸಬಹುದು.

ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ನಿರ್ವಹಣೆ:

ಥ್ರಿಪ್ಸ್ ನುಶಿ ಹಾಗೂ ಹಸಿರು ಜಿಗಿಹುಳುಗಳ ಬಾದೆ ಕಂಡುಬಂದಲ್ಲಿ ಅಸಿಟಾಮಿಪ್ರಿಡ್ 20ಎಸ್.ಪಿ.0.15ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮಿಲಿ ಅಥವಾ ಥಯೋಮಿಥಾಕ್ಸಾಂ 20 ಡಬ್ಲೂಜಿ 0.2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸೆ ಸಿಂಪಡಿಸುವುದರಿಂದ ಇವುಗಳನ್ನು ನಿರ್ವಹಣೆ ಮಾಡಬಹುದು.

ರೈತರಿಗೆ ವಿಷೇಶ ಸೂಚನೆ

  1. ಪೀಡೆ ನಾಶಕ ಕೊಂಡುಕೊಳ್ಳುವಾಗ ನಿಗದಿತ ರಶಿಧಿ ಪಡೆದು ಕಾಯಿದಿರಿಸಿಕೊಳ್ಳಿ.
  2. ಸಿಪಾರಸ್ಸು ಮಾಡಿದ ಪೀಡೆ ನಾಶಕವನ್ನೆ ಕರಿದಿಸಿ ಸಿಂಪಡಿಸಬೇಕು.
  3. ಪೀಡೆ ನಾಶಕ ಸಿಂಪರಣೆ ಮಾಡುವಾಗ ಎಲ್ಲಾ ಮುನ್ನೆಚರಿಕೆ ಕ್ರಮಗಳ್ಳನ್ನು ಅನುಸರಿಸಬೇಕು.
  4. ರೈತರು ಯಾವದೆ ವಿವರಣೆ/ಖಚಿತ ಮಾಯಿತಿಯಿಲ್ಲದ ಹಾಗೂ ಸಿಪಾರಸ್ಸು ಮಾಡದಿರುವ ಹಾಗೂ ನೊಂದಾಯಿಸದ (ಬಯೊ ಯಂದು ಮಾರಾಟ ವಾಗುವ) ಕೀಟ ನಾಶಕ ಸಿಂಪಡಿಸಬಾರದು ಇದರಿಂದ ಸಮರ್ಪಕವಾಗಿ ಪೀಡೆ ನಿರ್ವಹಣೆ ಯಾಗದೆ ಮನುಷ, ಪ್ರಾಣಿ ಮತ್ತು ಪರಿಸರಕ್ಕೆ ದಕ್ಕೆ ಯಾಗುವ ಸಂದರ್ಭ ಇರುತ್ತದೆ ಎಂದು ಕೃಷಿ ಇಲಾಖೆಯ ತಜ್ಞರು ತಿಳಿಸಿದ್ದಾರೆ.