Agripedia

ಪಶುಗಳಿಗೆ ಆಹಾರ ರೂಪದಲ್ಲಿ ಶಕ್ತಿಕೊಡುತ್ತದೆ ಆಜೋಲ್ಲಾ- ಇದೇನಿದು ಅಜೋಲ್ಲಾ ಅಂದುಕೊಂಡಿದ್ದೀರಾ..ಇಲ್ಲಿದೆ ಮಾಹಿತಿ

06 August, 2021 9:44 AM IST By:
azolla

ನೀರಿನ ಮೇಲೆ ಬೆಳೆಯುವ ಒಂದು ಹಸಿರು ಪಾಚಿ ವಾತಾವರಣದಲ್ಲಿ ಇರುವ ಸಾರಜನಕವನ್ನು ಹೀರಿಕೊಂಡು ಶೀಘ್ರ ಗತಿಯಲ್ಲಿ ಬೆಳೆಯುವ ಸಸ್ಯಪ್ರಭೇದ. ಹೈನುಗಾರಿಕೆಯಲ್ಲಿ ಪಶುಗಳಿಗೆ ಪ್ರತಿದಿನ ಮೇವಿನ ಜೊತೆ ಸಿದ್ಧ ಪಶು ಆಹಾರವನ್ನು ಸಹ ಒದಗಿಸಬೆಕಾಗುವುದರಿಂದ ಬೆಸಿಗೆಕಾಲದಲ್ಲಿ ಮೇವಿನ ಕೊರತೆ ಸಾಮಾನ್ಯವಾಗಿರುವುದರಿಂದ ಸಿದ್ಧ ಪಶುಅಹಾರ ಕೈಗೆಟಕದಿದ್ದಾಗ ಈ ಅಜೋಲ್ಲಾ ಪಶುಗಳಿಗೆ ಪರ್ಯಾಯ ಶಕ್ತಿಕೂಡಬಲ್ಲಾದು. ಇದು ನೀರಿನಲ್ಲಿ ತನ್ನ ಬೇರುಗಳನ್ನು ತೇಲಾಡಿಸಿಕೊಂಡು ವಾತಾವರಣದಲ್ಲಿನ ಸಾರಜನಕ ಹೀರಿಕೊಂಡು ಬೆಳೆಯುತ್ತದೆ. ಈ ಸಸ್ಯದ ಕಾಂಡ ಮತ್ತು ಎಲೆಗಳು ಬಹಳ ಚಿಕ್ಕದಾಗಿದ್ದು, ಮೃದುವಾಗಿವೆ. ಸಾಮಾನ್ಯವಾಗಿ ನೆಲದ ಮಟ್ಟದಲ್ಲಿ 1,2 ಸೆಂ.ಮೀ ನಷ್ಟು ಬೆಳೆಯುತ್ತದೆ.

ಅಜೋಲ್ಲಾದ ಪೌಷ್ಟಿಕತೆ:

ಪ್ರೊಟೀನ್ :- 25% -35%, ಮಿನರಲ್ಸ್:- 10%-15%, ಅಮ್ಯನೊ ಅಸಿಡ್ಸ್:- 7- 10% ಹಾಗು ಹಲವಾರು ಪೂಶಕಾಂಶ ಒಳಗೂಂಡಿರುವುದರಿಂದ ಇದನ್ನು ಒಳ್ಳೆ ಪಶುಆಹಾರ ಎನ್ನಬಹುದು. ಹಾಲು ಕೊಡುವ ಪಶುಗಳ್ಳದೆ, ಕೋಳಿ,ಹಂದಿ ಮತ್ತು ಮೋಲಗಳಿಗು ಸಹಕೊಡಬಹುದಾಗಿದೆ.

ಅಜೋಲ್ಲಾದ ಲಾಭಗಳು:

ಹಾಲುಕೂಡುವ ಎಮ್ಮೆಅಥವಾ ಹಸುಗಳಿಗೆ 1.5 ರಿಂದ 2.0 ಕೆ.ಜಿ ಅಜೋಲ್ಲಾವನ್ನು ನೀಡುವುದರಿಂದ 15%-20% ರಷ್ಟು ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಎಮ್ಮೆಯ ಹಾಲಿನಲ್ಲಿ ಕೂಬ್ಬಿನಾಂಶವು ಸಹ 0.3%-0.7% ರಷ್ಟು ಹೆಚ್ಚಾಗುವುದು. ಭತ್ತದ ಗದ್ದೆಯಲ್ಲಿ ಮತ್ತು ಮೀನುಸಾಕುವ ಕೇರೆಯಲ್ಲಿ ಇದನ್ನು ಬೆಳೆಯುದರಿಂದ್ದ ಬತ್ತದಲ್ಲಿ 20% ಅಧಿಕ ಇಳುವರಿ ಹಾಗು ಮೀನು ಉತ್ಪಾದನೆಯಲ್ಲಿ 30% ರಷ್ಟು ಹೆಚ್ಚಾಗುತ್ತದೆ.

ಅಜೋಲ್ಲಾ ಬೆಳೆಯುವುದು ಹೇಗೆ?

ಆರಂಭದಲ್ಲಿ ನೆಲವನ್ನು ಸ್ವಚ್ಛಗೊಳಿಸಿ ಸಮತಟ್ಟಾಗಿಸಬೇಕು. 2.25 ಮೀ.ಉದ್ದ ಹಾಗೂ 1.5 ಮೀ. ಅಗಲ ಇರುವಂತಹ ಗುಂಡಿ ಅಗೆಯಬೇಕು. ಹಾಗೆ, ಅನುಕೂಲಕ್ಕೆ ಅನುಗುಣವಾಗಿ ಉದ್ದಗಲವನ್ನು ಬದಲಿಸಿಕೊಳ್ಳಬಹುದು, ಬಳಿಕ ಒಂದು ಅಂಗುಲದಷ್ಟು ಎತ್ತರಕ್ಕೆ ಮರಳು ಹಾಕಿ ಇದರ ಮೇಲೆ ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ 120 ರಿಂದ 150 ಜಿಸಿಎಂ ಸಿಲ್ಫಾಲಿನ್ಶೀಟು ಹರಡಬೇಕು. ಬಳಿಕ 30ರಿಂದ 35 ಕಿಲೋ ದಷ್ಟು ಫಲವತ್ತಾದ ಮೆತ್ತನೆ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡಬೇಕು. ಬಳಿಕ ಸುಮಾರು ಐದು ಕಿಲೊದಷ್ಟು ಸೆಗಣಿಗೆ, 40 ಗ್ರಾಂ ಖನಿಜ ಮಿಶ್ರಣ ಸೇರಿಸಿ ನೀರಿನಲ್ಲಿ ಕಲೆಸಿದ ಮೇಲೆ ಮಣ್ಣಿನಲ್ಲಿ ಮಿಶ್ರಣಮಾಡಬೇಕು. ಸುಮಾರು 7 ರಿಂದ 10 ಸೆಂಮಿ ಎತ್ತರದವರೆಗೆ ನೀರುಹಾಯಿಸಿ ಅದಕ್ಕೆ ಒಂದು ಕೆಜಿಯಷ್ಟು ಅಜೋಲ್ಲಾ ಕಲ್ಚ ರ್ಅಥವಾ ಹೆಪ್ಪನ್ನು ಮೇಲ್ಭಾಗದಿಂದ ಸಮಾನವಾಗಿ ಬೀಳುವಂತೆ ಹಾಕಬೇಕು. ಇಷ್ಟು ಮಾಡಿದ ನಂತರ ಅಜೋಲ್ಲಾದ ಮೇಲೆ ನೀರನ್ನು ಚಿಮುಕಿಸಬೇಕು. 7 ದಿನದ ನಂತರ ಮೋದಲನೆಯ ಇಳುವರಿಯನ್ನು ಪಡೆಯಬಹುದು ನಂತರ ಪ್ರತಿ 2 ದಿನಗಳಿಗೂಮ್ಮೆ ಅಜೋಲ್ಲಾವನ್ನು ಕಟಾವು ಮಾಡಬಹುದು. ಪ್ರತಿ 10 ದಿನಕೊಮ್ಮೆ 1 ಕೆ.ಜಿ ಸಗಣಿಯನ್ನು 20 ಕೆ.ಜಿ ಖನಿಜ ಮಿಶ್ರಣವನ್ನು 5 ಲೀ ನೀರಿನಲ್ಲಿ ಕಲಿಸಿ ಅಜೋಲ್ಲಾ ಗುಂಡಿಗೆ ಸೇರುಸುತ್ತಿರಬೇಕು ಪ್ರತಿ 4.5 ಛ.ಮೀಗೆ 1 ಕೆ.ಜಿ ಅಜೋಲ್ಲಾ ಪಡೆಯಬಹುದು.

ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳು

ಅಜೋಲ್ಲಾ ಗುಂಡಿಯ ಉಷ್ಣಾಂಶ 35 ಡಿಗ್ರಿ ಸೆಲ್ಸಿಯ ಸ್ಕಿಂತ ಹೆಚ್ಚು ಇರದಂತೆ ನೋಡಿಕೋಳ್ಳಬೇಕು. ಪೋಶಕಾಂಶಗಳ ಕೂರತೆ ಬಾರದಂತೆ ಆಗಾಗ ಪೋಶಕಾಂಶವನ್ನು ಒದಗಿಸುತ್ತಿರಬೇಕು. ದಿನ ಬಿಟ್ಟು ದಿನ ಕಟಾವು ಮಾಡುವುದು ಒಳ್ಳೆಯದು ಅದೆ ರೀತಿ 2 ತಿಂಗಳಿಗೂಮ್ಮೆ 5.ಕೆ.ಜಿರಷ್ಟು ಹೂಸ ಮಣ್ಣನ್ನು ತೆಗೆಯಬೇಕು 10 ದಿನಕೊಮ್ಮೆ ಅಜೋಲ್ಲಾ ಗುಂಡಿಯಿಂದ ಕಾಲುಭಾಗದಷ್ಟು ನೀರನ್ನುತೆಗೆದು ಹೂಸನೀರನ್ನು ಸೇರುಸುತ್ತಿರಬೇಕು. ಪಿ.ಹೆಚ್ 5.5 ಅಥವ 7 ಕಿಂತ ಜಾಸ್ತಿಇರದಂತೆ ನೋಡಿಕೊಳಬೇಕು.

ತೊಟ್ಟಿಯಿಂದ ತೆಗೆಯುವ ವಿಧಾನ:

ತೊಟ್ಟಿಯಿಂದ ಅಜೋಲ್ಲಾವನ್ನು ತೆಗೆದು ಇದರಿಂದ ಅತಿಸಣ್ಣ ಅಜೋಲ್ಲಾವನ್ನು ಬೇರ್ ಪಡಿಸಿ ಅದನ್ನು ಪುನಃ ತೊಟ್ಟಗೆ ಸೇರಿಸುವದರಿಂದ ಅದು ಮತ್ತೆ ಬೆಳೆಯುತ್ತದೆ. ಬೇರ್ಪಡಿಸಿದ ಅಜೋಲ್ಲಾವನ್ನು ಒಂದು ಬಕೆಟ್ನಲ್ಲಿ ಹಾಕಿ 2 ರಿಂದ 3 ಬಾರಿನೀರಿನಲ್ಲಿ ತೊಳೆದು ಪಶುಗಳಿಗೆ ಪೋರೈಸಬೇಕು. ಮೊದಲು ಇದನ್ನು ಪಶುಆಹಾರ ಜೊತೆ ಕಲಿಸಿಕೊಡಬೇಕು ಪಶುಗಳಿಗೆ ಅಭ್ಯಸವಾದ ನಂತರ ನೇರವಾಗಿ ಕೋಡಬಹುದು

ಲೇಖನ:-ಸರಾ ಫಾತಿಮಾ ಶರೀಫ್,ಅಂತಿಮ ವಷ೯ದ ವಿದ್ಯಾಥಿ೯, ಬಿ.ಎಸ್ಸಿ(ತೋ)  ಡಾ.ಪ್ರಿಯಾಂಕ, ಎಂ, ಸಹಾಯಕ ಪ್ರಾಧ್ಯಾಪಕಿ:  ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ.