ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ.
ರೈತರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು, ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ್ದ ರೈತರಿಗೆ ಬೆಳೆನಷ್ಟ ಮತ್ತು ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಆದರೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಎಕರೆವಾರು ವಿಮಾ ಮೊತ್ತವನ್ನು ಪಾವತಿ ಮಾಡುವ ಯೋಜನೆ ಇದಾಗಿದೆ.
2020-21 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ರಾಜ್ಯದ ಆಯಾ ಜಿಲ್ಲೆಗಳಿಗೆ ಅನುಷ್ಟಾನಗೊಳಿಸಲು ಸರ್ಕಾರವು ಮಂಜೂರಾತಿ ನೀಡಿದೆ.
ಪ್ರಕೃತಿ ವಿಕೋಪಕ್ಕೆ ವಿಮೆ ಪರಿಹಾರ:
ಈ ಯೋಜನೆಯಡಿ 2020 ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ (ಇನಂಡೇಷನ್)ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ಬೆಳೆಸಾಲ ಮಂಜೂರಾದ ರೈತರು ಫಸಲ್ ಬಿಮಾ ಯೋಜನೆಯಡಿ:
ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಫಸಲ್ ಬಿಮಾ ಯೋಜನೆಯಡಿ ಒಳಪಡಿಸಲಾಗುವುದು. ಆದರೆ, ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿಭಾಗವಹಿಸಲು ಇಚ್ಛಿಸದಿದ್ದರೆ ಈ ಕುರಿತು ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ನಿಗದಿತ ನಮೂನೆಯಲ್ಲಿಮುಚ್ಚಳಿಕೆ ಪತ್ರವನ್ನು ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಸದರಿ ಯೋಜನೆಯಡಿ ಮುಖ್ಯ ಬೆಳೆಗಳನ್ನು ಜಿಲ್ಲೆಯ ಎಲ್ಲಾ ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ರೈತರು ಸಮೀಪದ ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿವಿಮೆ ಕಂತು ಪಾವತಿಸಿ ಬೆಳೆ ವಿಮೆ ನೋಂದಣಿ ಮಾಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ ಮಟ್ಟದ ಬೆಳೆಗಳಿಗೆ ಹಾಗೂ ಹೋಬಳಿ ಮಟ್ಟದ ಬೆಳೆಗಳಿಗೆ ಹತ್ತಿರದ ಬ್ಯಾಂಕುಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಥವಾ ತಮ್ಮ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.
2019 ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗಧಿಪಡಿಸಲಾಗಿರುವ ಇಂಡೆಮ್ನಿಟಿ ಮಟ್ಟ,
ಕ್ರ.ಸಂ |
ನಿರ್ಧರಿತ ಬೆಳೆಗಳು |
ಇಂಡೆಮ್ನಿಟಿ ಮಟ್ಟ (ಶೇಕಡಾಃ |
ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್ ಗೆ |
|
||
(ಪ್ರಾರಂಭಿಕ ಇಳುವರಿಯ ಮೌಲ್ಯದವರೆಗೆ) |
ನೋಂದಣಿ ಕೊನೆ ದಿನಾಂಕ
|
|||||
ವಿಮಾ ಮೊತ್ತ (ರೂ. ಗಳಲ್ಲಿ) |
ರೈತರ ವಿಮಾ ಕಂತು (ಶೇಕಡಾ) |
ರೈತರು ಪಾವತಿಸಬೇಕಾದ ವಿಮಾ ಮೊತ್ತ (ರೂ.ಗಳಲ್ಲಿ) |
||||
1 |
ಭತ್ತ (ನೀರಾವರಿ) |
90 |
86000 |
2.00 |
1720 |
14-08-2020 |
2 |
ಮುಸುಕಿನಜೋಳ (ನೀರಾವರಿ) |
90 |
59000 |
2.00 |
1180 |
14-08-2020 |
3 |
ಮುಸುಕಿನಜೋಳ (ಮಳೆ ಆಶ್ರಿತ) |
80 |
50000 |
2.00 |
1000 |
31-07-2020 |
4 |
ಜೋಳ (ನೀರಾವರಿ) |
90 |
40000 |
2.00 |
800 |
31-07-2020 |
5 |
ಜೋಳ (ಮಳೆ ಆಶ್ರಿತ) |
80 |
34000 |
2.00 |
680 |
31-07-2020 |
6 |
ಸಜ್ಜೆ (ಮಳೆ ಆಶ್ರಿತ) |
80 |
29000 |
2.00 |
580 |
31-07-2020 |
7 |
ಉದ್ದು (ಮಳೆ ಆಶ್ರಿತ) |
80 |
28000 |
2.00 |
560 |
31-07-2020 |
8 |
ತೊಗರಿ (ನೀರಾವರಿ) |
90 |
42000 |
2.00 |
840 |
31-07-2020 |
9 |
ತೊಗರಿ (ಮಳೆ ಆಶ್ರಿತ) |
80 |
40000 |
2.00 |
800 |
31-07-2020 |
10 |
ಹೆಸರು (ಮಳೆ ಆಶ್ರಿತ) |
80 |
29000 |
2.00 |
580 |
31-07-2020 |
11 |
ಸೋಯಾ ಅವರೆ (ಮಳೆ ಆಶ್ರಿತ) |
80 |
34000 |
2.00 |
680 |
31-07-2020 |
12 |
ಸೂರ್ಯಕಾಂತಿ (ನೀರಾವರಿ) |
90 |
42000 |
2.00 |
840 |
14-08-2020 |
13 |
ಸೂರ್ಯಕಾಂತಿ (ಮಳೆ ಆಶ್ರಿತ) |
80 |
35000 |
2.00 |
700 |
14-08-2020 |
14 |
ಎಳ್ಳು (ಮಳೆ ಆಶ್ರಿತ) |
80 |
25000 |
2.00 |
500 |
31-07-2020 |
15 |
ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) |
80 |
46000 |
2.00 |
920 |
31-07-2020 |
16 |
ನೆಲಗಡಲೆ (ಶೇಂಗಾ) (ನೀರಾವರಿ) |
90 |
57000 |
2.00 |
1140 |
31-07-2020 |
17 |
ಹತ್ತಿ (ನೀರಾವರಿ) |
90 |
67000 |
5.00 |
3350 |
31-07-2020 |
18 |
ಹತ್ತಿ (ಮಳೆ ಆಶ್ರಿತ) |
80 |
43000 |
5.00 |
2150 |
3107-2020 |
19 |
ಟೊಮ್ಯಾಟೋ |
90 |
118000 |
5.00 |
5900 |
31-07-2020 |
20 |
ಈರುಳ್ಳಿ (ನೀರಾವರಿ) |
90 |
75000 |
5.00 |
3750 |
14-08-2020 |
21 |
ಅರಿಶಿನ |
90 |
133000 |
5.00 |
6650 |
31-07-2020 |
22 |
ಕೆಂಪು ಮೆಣಸಿನಕಾಯಿ (ನೀರಾವರಿ) |
90 |
96000 |
5.00 |
4800 |
14-08-2020 |