Agripedia

PM KISAN ಯೋಜನೆಯ ಲಾಭ ಪಡೆಯದವರು ಶೀಘ್ರ ನೋಂದಣಿ ಮಾಡಿಸಿ ನವೆಂಬರ್ ತಿಂಗಳ ಕಂತು ಪಡೆಯಿರಿ

05 September, 2020 3:35 PM IST By:

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ-ಕಿಸಾನ್‌ (PM Kisan) ನಿಧಿ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೆ ಸಿಗುವ 2 ಸಾವಿರ ರುಪಾಯಿ ಕಂತಿನ ಹಣ ಪಡೆಯದವರು ಅಥವಾ ತಾಂತ್ರಿಕ ಕಾರಣಗಳಿಂದ ಹೆಸರು ನೋಂದಾಯಿಸದೆ ಇರುವವರು  ಶೀಘ್ರ ನಿಮ್ಮ ಹೆಸರು ನೋಂದಾಯಿಸಿ ಈಗಲೂ ಲಾಭ ಪಡೆಯಬಹುದು.

ಅನೇಕ ರೈತರ ಬ್ಯಾಂಕ್ ಖಾತೆಗಳಲ್ಲಿನ ತಾಂತ್ರಿಕ ಕಾರಣಗಳಿಂದಾಗಿ, ಅಥವಾ ಹೆಸರು, ಬ್ಯಾಂಕ್ ಫಾಸ್ ಬುಕ್ ಸೇರಿದಂತೆ ಇತರ ದಾಖಲಾತಿ ಸಲ್ಲಿಸುವಲ್ಲಿ ತಪ್ಪಾಗಿದ್ದವರಿಗೆ ಎರಡು ಸಾವಿರ ರೂಪಾಯಿಗಳ ಕಂತು ಸಿಕ್ಕಿರಲಿಕ್ಕಿಲ್ಲ. ಮುಂದಿನ ಕಂತನ್ನು ಸರ್ಕಾರ ಈಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದೆ. ನವೆಂಬರ್ ತಿಂಗಳ ಕಂತು ಪಡೆಯಲು ರೈತರು ತಮ್ಮ ಬ್ಯಾಂಕ್ ಖಾತೆಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ಲಾಭ ಪಡೆಯಬಹುದು.

ನಿಮ್ಮ ಆಧಾರ್ ಸಂಖ್ಯೆ, ಪಹಣಿ ಖಾತೆ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಲ್ಲಿನ ವ್ಯತ್ಯಾಸದಿಂದಾಗಿ ಖಾತೆಯಲ್ಲಿ ಹಲವು ಬಾರಿ ಹಣವನ್ನು ವರ್ಗಾಯಿಸಲಾಗುವುದಿಲ್ಲ. ಆದ್ದರಿಂದ ಅವುಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಪಿಎಂ ಕಿಸಾನ್  ಯೋಜನೆಯಡಿ ಭೂ ಒಡೆತನ ಹೊಂದಿರುವ ಎಲ್ಲ ವರ್ಗದ ಅರ್ಹ ರೈತ ಕುಟುಂಬಕ್ಕೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 3 ಸಮಾನ ಕಂತುಗಳಲ್ಲಿ 2000ರೂ. ಪಾವತಿಯಾಗಲಿದೆ.

ಮನೆಯಲ್ಲಿಯೇ ಕುಳಿತು ನೋಂದಣಿ (Regirstration) ಮಾಡಿಸಿಕೊಳ್ಳಿ:

ಈ ಲಿಂಕ್  https://www.pmkisan.gov.in/RegistrationForm.aspx  ಕ್ಲಿಕ್ ಮಾಡಿ ತಮ್ಮ ಹೆಸರು ಸೇರಿದಂತೆ ಇತರ ಮಾಹಿತಿಯನ್ನು ನೀಡಿ ನೋಂದಾಯಿಸಿಕೊಳ್ಳಬಹುದು. ಅಥವಾ ಮೊಬೈಲ್ ಆ್ಯಪ್ ಮೂಲಕವೂ ನೋಂದಾಯಿಸಿಕೊಳ್ಳಬಹುದು. ಈ ಮೊಬೈಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೌಡ್ ಮಾಡಿಕೊಂಡು ಅಗತ್ಯ ಮಾಹಿತಿ ಭರ್ತಿ ಮಾಡಿ ರೈತರೇ ಅಪ್‍ಲೋಡ್ ಮಾಡಬಹುದು.
ಈ ತಂತ್ರಾಂಶದಲ್ಲಿ  ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್  ನಂಬರ್ ಅನ್ನು ದಾಖಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‍ವರ್ಡ್ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಅಪ್‍ಲೋಡ್ ಎಂಬ ಬಟನ್ ಒತ್ತಬೇಕು. ಈ ಹಂತದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ವಿವರಗಳು ನೇರವಾಗಿ ಭೂಮಿ ದತ್ತಾಂಶದಿಂದ ಮೊಬೈಲ್‍ಗೆ ಡೌನ್‍ಲೋಡ್ ಆಗುತ್ತದೆ. ಸರ್ವೆ ಸಂಖ್ಯೆ ದಾಖಲಿಸಿ ಸ್ವಾಧೀನದಾರರ ಹೆಸರನ್ನು ಆಯ್ಕೆ ಮಾಡಬೇಕು. ವರ್ಗ, ಸಣ್ಣ, ಅತೀ ಸಣ್ಣ ಹಿಡುವಳಿದಾರರ ಮಾಹಿತಿಯನ್ನು ಆಯ್ಕೆ ಮಾಡಿ ದೃಢೀಕರಿಸಿದ ನಂತರ ಆಧಾರ್  ಮಾಹಿತಿಯನ್ನು ದಾಖಲಿಸಬೇಕು. ಅಥವಾ ಆಧಾರ್ ಮಾಹಿತಿಯನ್ನು ನೇರವಾಗಿ ಆಧಾರ್ ಕಾರ್ಡ್‍ನಲ್ಲಿರುವ ಕ್ಯೂ  ಆರ್ ಕೋಡ್ ಅನ್ನು ಮೊಬೈಲ್‍ನಿಂದ ಸ್ಕ್ಯಾನ್ ಮಾಡುವ ಮೂಲಕವೂ ಸ್ವಯಂಚಾಲಿತವಾಗಿ ಆಧಾರ್ ವಿವರ ದಾಖಲಿಸುವ ಸೌಲಭ್ಯವೂ ಇದೆ.
ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಐಎಫ್‍ಸಿ ಸಂಖ್ಯೆ ನಮೂದಿಸುವ ಮೂಲಕ ಸ್ವಯಂ ಚಾಲಿತವಾಗಿ ಬ್ಯಾಂಕ್ ಮತ್ತು ಬ್ರಾಂಚ್ ಹೆಸರು ಆಯ್ಕೆಯಾಗುವಂತೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ದತ್ತಾಂಶವನ್ನು ಉಳಿಸಿ ಮುಂದಿನ ಸರ್ವೆ ನಂಬರ್ ದಾಖಲಿಸಬಹುದು. ಅಂತಿಮ ಹಂತದಲ್ಲಿ ಎಲ್ಲಾ ದತ್ತಾಂಶವನ್ನು ಅಪ್‍ಲೋಡ್ ಬಟನ್ ಒತ್ತುವ ಮೂಲಕ ಸಂಗ್ರಹಿಸಿದ ಮತ್ತು ಛಾಯಾಚಿತ್ರಗಳನ್ನು ಕೇಂದ್ರ ಸರ್ವರ್‍ಗೆ ರವಾನೆಯಾಗಲಿದೆ. ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿಯೇ ಮಾಹಿತಿಯನ್ನು ಸಲ್ಲಿಸಬೇಕು.

ಯಾರು ಫಲಾನುಭವಿಗಳು:

ಗಂಡ, ಹೆಂಡತಿ ಹಾಗು 18 ವರ್ಷದೊಳಗಿನ ಮಕ್ಕಳು ಇರುವ ಕುಟುಂಬ ಇರಬೇಕು.  ಎರಡು ಹೆಕ್ಟೇರ್ ಜಮೀನು ಇರಬೇಕು. ಫೆಬ್ರವರಿ 1, 2019ರ ಕ್ಕಿಂತ ಮೊದಲಿನ ಭೂ ದಾಖಲೆಗಳಲ್ಲಿ ಹೆಸರು ಇರುವ ರೈತರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆಬ್ರವರಿ 1ರ ನಂತರ ಬದಲಾವಣೆ ಮಾಡಲಾದ ಭೂ ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.  ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಹಳ್ಳಿಗಳಲ್ಲಿ ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿ ಹೋಗಿದ್ದರೂ ಪರಿಗಣಿಸಲಾಗುತ್ತದೆ.

ಎಲ್ಲೆಲ್ಲಿ ಹೆಸರು ನೋಂದಣಿ:

 ಮೊಬೈಲ್ ಮೂಲಕ ಅಪ್ ಲೋಡ್ ಮಾಡಲು ಸಮಸ್ಯೆಯಾಗುತ್ತಿದ್ದರೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಅಟಲ್‌ಜಿ ಜನ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ ಕೇಚೇರಿಗಳು, ನಾಡ ಕಚೇರಿಗಳಲ್ಲಿ ಪಿಎಂ-ಕಿಸಾನ್‌ ಸಮ್ಮಾನ್‌ ನಿಧಿಯ ಯೋಜನೆಯಡಿ ರೈತರ ಹೆಸರು ನೋಂದಾಯಿಸಿಕೊಳ್ಳಬಹುದು.

ಸ್ಟೇಟಸ್, ಹಣ ಜಮೆಯಾಗಿದ್ದನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:

ಪಿಎಂ ಕಿಸಾನ್ (PM-Kisan) ಸ್ಟೇಟಸ್  ಹಣ ಜಮೆಯಾಗಿರುವುದನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈಗಲೇ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx  ಅಥವಾ ಗೂಗಲ್ ನಲ್ಲಿ pm kisan samman status ಅಂತ ಟೈಪ್ ಮಾಡಿ, know Beneficiary status-pm kisan ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್, ಅಕೌಂಟ್ ಅಥವಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪಿಎಂ. ಕಿಸಾನ್ ಯೋಜನಾ ಹೆಲ್ಪ್ ಲೈನ್ ನಂಬರ್ 011-24300606, ಅಥವಾ ಪಿಎಂ ಕಿಸಾನ್ ಯೋಜನೆ ಟೋಲ್ ಫ್ರಿ ನಂ. 1800115526 ಗೆ ಸಂಪರ್ಕಿಸಬಹುದು.ಇದಲ್ಲದೆ ಹೆಲ್ಪ್ ಲೈನ್ 155261 ಕರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದು ಬಿಟ್ಟು ಕೇಂದ್ರ ಕೃಷಿ ಸಚಿವಾಲಯ 011-23381092 ಗೆ ಕರೆ ಮಾಡಬಹುದು.