Agripedia

ಈ ಬಾರಿ ಜೋಳಕ್ಕೂ ಕಾಡುತ್ತಿದೆ ಲದ್ದಿ ಹುಳು ಬಾಧೆ

26 November, 2020 8:08 AM IST By:

ಈ ಬಾರಿ ಪ್ರಕೃತಿ ವಿಕೋಪದ ಕಾರಣದಿಂದ, ಅತಿಯಾದ ಮಳೆಯಾದ ಕಾರಣ ರೈತರು ಈಗಾಗಲೇ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ, ಇಂತಹ ಸಮಯದಲ್ಲಿ ರೈತರನ್ನು ಬಿಡದೆ ಕಾಡುತ್ತಿವೆ ಕೀಟ ಹಾಗೂ ರೋಗದ ಸಮಸ್ಯೆಗಳು, ಈ ಬಾರಿ ಔಷಧಿ ಸಿಂಪಡನೆಗೆ  ಅತಿ ಹೆಚ್ಚು ಹಣ ರೈತರು ಖರ್ಚು ಮಾಡಿದ್ದಾರೆ.

 ಇಷ್ಟು ದಿನ ಗೋವಿನ ಜೋಳದಲ್ಲಿ ಹಾನಿಕಾರಕವಾಗಿದ್ದ ಲದ್ದಿ ಹುಳು ಈಗ ಜೋಳದ ಮೇಲೂ ತನ್ನ ಆಟವನ್ನು ಶುರುಮಾಡಿದೆ, ಈ ಕೀಟವು ಬೆಳೆಯ ಸುಳಿಯಲ್ಲಿ ವಾಸ ಆಗಿರುತ್ತದೆ, ಹಾಗೂ ಎಲ್ಲಾ ಕಾಂಡಗಳನ್ನು ತಿಂದು ಅದನ್ನು ಲದ್ದಿ ಹಾಕುತ್ತದೆ, ಅದಕ್ಕಾಗಿಯೇ ಇದಕ್ಕೆ ಹೆಸರು ಲದ್ದಿ ಹುಳು. ಈ ಹುಳು ಒಮ್ಮೆ ಬಿದ್ದರೆ ಅದು ಇಳುವರಿಯಲ್ಲಿ ಗಣನೀಯ ವ್ಯತ್ಯಾಸವನ್ನು ತರುತ್ತದೆ, ಇದನ್ನು ನಾವು ಹತೋಟಿಗೆ ತರದೇ ಹಾಗೆ ಬಿಟ್ಟರೆ ಗೋವಿನ ಜೋಳದಲ್ಲಿ ನಾವು ಇದರಿಂದ ಆದಂತಹ ಲಾಸ್ ನ್ನು ಹಲವಾರು ಕಡೆ ನೋಡಿದ್ದೇವೆ. ಈಗ ಜೋಳದಲ್ಲಿ ಕೂಡ ನಾವು ನಿರ್ವಹಣೆ ಮಾಡದೆ ಹಾಗೆ ಬಿಟ್ಟರೆ ಇದು ಕೂಡ ಜೋಳದ ಇಳುವರಿಯನ್ನು  ತುಂಬಾ ಕಡಿಮೆ ಮಾಡುತ್ತದೆ.

 ಇದು ಹೆಣ್ಣು  ಪಾತರಗಿತ್ತಿ ಎಲೆಗಳ ಮೇಲೆ ಗುಂಪುಗುಂಪಾಗಿ ತತ್ತಿಯನ್ನು ಇಡುತ್ತದೆ, ಮುಂದೆ ಆ ತತ್ತಿ ಓಡೆದು ಮರಿಗಳಾಗುತ್ತವೆ, ಈ ಮರಿಗಳೇ ಕಿಡಿಗಳು, ಇವು ಬೆಳೆಗಳಿಗೆ ತುಂಬಾ ಹಾನಿಗಳನ್ನು ಮಾಡುತ್ತವೆ, ಮುಂದೆ ಕಿಡಿಗಳು ಮತ್ತೆ ಪಾತರಗಿತ್ತಿ ಗಳಾಗುತ್ತವೆ, ಇದು ಈ ಹುಳದ ಜೀವನ ಚಕ್ರ.

ಲದ್ದಿ ಹುಳು ನಿರ್ವಹಣೆ ಹೇಗೆ ಮಾಡಬಹುದು?

ಹುಳು ನಿರ್ವಹಣೆಗಾಗಿ ಬೀಜೋಪಚಾರದ ಸಮಯದಲ್ಲಿ cyantrianiliprole 19.8+ thiomethaxom 19.8 fs @6ಮಿಲಿ ಪ್ರತಿ ಕೆಜಿ ಇಂದ ಬೀಜೋಪಚಾರ ಮಾಡಬೇಕು.

ಎಕರೆ ಗೆ  4-5 ಮೋಹಕ ಬಲೆಗಳನ್ನು ಅಳವಡಿಸಬೇಕು.

ಜೈವಿಕ ಕೀಟನಾಶಕಗಳಾದಂತ beauveria bassiana ಹಾಗೂ metarhizium anisophilae ಬಳಸಬೇಕು.

ಸಾವಯುವ ಕೀಟನಾಶಕವಾದ  ಬೇವಿನ ಅಜರಡಿಕ್ಟಿನ್ 10000 ppm  @2ಮಿಲಿ ಪ್ರತಿ ಲೀಟರ್ ಗೆ ಹಾಕಿ ಸಿಂಪರಣೆ ಮಾಡಬಹುದು 

ಕೊನೆಗೆ ರಾಸಾಯನಿಕಗಳಾದ  chlorantriniprole 18.5 sc @.4 ಮಿಲಿ ಪ್ರತಿ ಲೀಟರ್ ಅಥವಾ emamectin benzoate 5ಸ್ಗ್ @.5 ಗ್ರಾಂ ಹಾಕಿ ಸಿಂಪರಣೆ ಮಾಡಬೇಕು.

ಸೂಚನೆ -ಔಷಧಿ ಸಿಪಂಡಣೆ ಮಾಡುವುದಕ್ಕಿಂತ ಮುನ್ನ ನಿಮ್ಮಹತ್ತಿರದ ರೈತ ಸಂಪರ್ಕ ಕೇಂದ್ರ,  ಸಂಬಂಧ ಪಟ್ಟ ಕೃಷಿ ಅಧಿಕಾರಿಗಳು ಅಥವಾ ಕೃಷಿ ತಜ್ಞರನ್ನು  ವಿಚಾರಿಸಿ ಬಳಸಬೇಕು, ಯಾಕೆಂದರೆ ನಾವು ಹೇಳಿದಂತ ಕ್ರಮಗಳು ಯಾವ ಹಂತದಲ್ಲಿ ಬಳಸಬೇಕು, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂದು ಸಂಪೂರ್ಣ ಮಾಹಿತಿಯನ್ನು ಪಡೆದ ನಂತರವಷ್ಟೇ ಉಪಯೋಗಿಸಬೇಕೆಂದು ವಿನಂತಿ ಮಾಡುತ್ತೇವೆ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ