Agripedia

ಭತ್ತದ ಎಲೆಗಳ ಕೆಳಭಾಗಕ್ಕೆ ಕೂತು ರಸ ಹೀರುವ ನುಶಿ ಭಾದೆ ತಡೆಯಲು ಈ ರೀತಿ ಮಾಡಿ

05 October, 2020 4:12 PM IST By:

ಭಾರತದಲ್ಲಿ ಭತ್ತವು ಒಂದು ಪ್ರಮುಖ ಬೆಳೆಯಾಗಿದ್ದು, ಮೂರನೆ ಎರಡರಷ್ಟು ಜನರು ಭತ್ತದ ಮೇಲೆ ಅವಲಂಬಿತರಾಗಿದ್ದಾರೆ.  ಕರ್ನಾಟಕದಲ್ಲಿ ಭತ್ತವು 1.2 ಮೀ. ಹೆಕ್ಟರ್  ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ರಾಯಚೂರು, ಬಳ್ಳಾರಿ, ಹಾವೇರಿ, ಕೊಪ್ಪಳ, ಧಾರವಾಡ, ಗುಲ್ಬರ್ಗಾ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 3.5 ಲಕ್ಷ ಹೆಕ್ಟರ್ ಪ್ರದೇಶವನ್ನು ಭತ್ತವು ಆವರಿಸಿದೆ.

ಸಾರಜನಕ ರಸಗೊಬ್ಬರಗಳ ಅತಿಯಾದ ಬಳಕೆಯೊಂದಿಗೆ ಮತ್ತು ಭತ್ತವನ್ನು ನಿರಂತರವಾಗಿ ಬೆಳೆಸುವುದರಿಂದ ಕೀಟ ಭಾದೆಯ ಸಮಸ್ಸೆ ಹೆಚ್ಚಾಗಿ ಕಂಡು ಬರುತ್ತದೆ . ಕರ್ನಾಟದಲ್ಲಿ ಸುಮಾರು 20 ಬಗೆಯ ಕೀಟಗಳು ಹೆಚ್ಚಾಗಿ ಭತ್ತವನ್ನು ಹಾನಿ ಮಾಡುವುದು ಕಂಡು ಬರುತ್ತದೆ. ಅದರಲ್ಲಿ ರಸ ಹೀರುವ ಕೀಟಗಳು ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಹಾನಿ ಮಾಡುತ್ತವೆ. ಈಗಿನ ದಿನಗಳಲ್ಲಿ ಅತಿಯಾದ ಗೊಬ್ಬರಗಳ ಬಳಕೆಯಿಂದ ರಸ ಹೀರುವ ಕೀಟಗಳ ಸಂಖ್ಯೆ ಜಾಸ್ತಿ ಪ್ರಮಾಣದಲ್ಲಿ ಕಂಡು ಬರುತಿದ್ದು ಸಸಿ ಮಡಿಗಳಲ್ಲಿ ನುಶಿಯಾಕಾರದ  (ಥ್ರಿಪ್ಸ್) ಕೀಟವು ಹೆಚ್ಚಾಗಿ ಕಂಡುಬರುತಿದೆ. ಇದರಿಂದಾಗಿ ಸಸಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಈ ಕೀಟವು ಬಹಳ ಸೂಕ್ಷ್ಮವಾಗಿದ್ದು ಕಂದುಬಣ್ಣದ ಮೇಲ್ಮೈಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಕೀಟವು ಎಲೆಗಳ ಕೆಳಭಾಗದಲ್ಲಿ ಕೂತು ರಸವನ್ನು ಹೀರುತ್ತವೆ.

ಭಾದೆಯ ಲಕ್ಷಣಗಳು:

ಸಸಿ ಮಡಿಯಲ್ಲಿ ಥ್ರಿಪ್ಸ್ (ನುಶಿ) ಭಾದೆ ಜಾಸ್ತಿ ಕಂಡು ಬರುತ್ತದೆ. ಸತತವಾಗಿ ಎಲೆಗಳಿಂದ ರಸಹೀರುವ ಕಾರಣ  ಎಲೆ ಮತ್ತು ಕಾಂಡಗಳ ಮೇಲೆ ಸಣ್ಣ ಬೆಳ್ಳಿ ಗುರುತುಗಳು ಅಥವಾ ಹಳದಿ ತೇಪೆಗಳನ್ನು  ಉಂಟುಮಾಡುತ್ತದೆ. ಒಂದು ವೇಳೆ ಕೀಟ ಭಾದೆಯ ಪ್ರಮಾಣ ಜಾಸ್ತಿ ಇದ್ದಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುವ ಮೊದಲು ಎಲೆಗಳ ಅಂಚು ಸುರುಳಿಯಾಗುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತವೆ ಮತ್ತು ಕೀಟವನ್ನು ನಿಯಂತ್ರಿಸದಿದ್ದರೆ ಇಡೀ ಸಸ್ಯ ಸಾಯಬಹುದು. ಸಾಮಾನ್ಯವಾಗಿ ಜೂಲೈ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಈ ಕೀಟವು ಹೆಚ್ಚಾಗಿ ಕಂಡು ಬರುತ್ತದೆ.

ನಿರ್ವಹಣ ಕ್ರಮಗಳು:

  • ಕೀಟಭಾದೆಯ ಲಕ್ಷಣ ಜಾಸ್ತಿ ಕಂಡುಬಂದಲ್ಲಿಒಂದು ದಿನದ ಮಟ್ಟಿಗೆ 4 ರಿಂದ 5 ಸೆಂ. ಮೀ. ವರೆಗೂ ಗದ್ದೆಯಲ್ಲಿ(ಸಸಿ ಮಡಿಯಲ್ಲಿ) ನೀರು ನಿಲ್ಲಿಸಬೇಕು.
  • ಹೊಲದ ಬದುಗಳಲ್ಲಿರುವ ಕಳೆಗಳನ್ನು ನಾಶಮಾಡುವುದು.
  • ಪರತಂತಂತ್ರ/ ಪರಭಕ್ಷಕ ಕೀಟಗಳ ಸಂಖ್ಯೆ ಜಾಸ್ತಿಯಾಗುವಂತೆ ಮಾಡಬೇಕು.

    • ಕೀಟ ನಿರೋಧಕ ತಳಿಗಳನ್ನು ಬೆಳೆಯಬೇಕು. ಕೀಟ ಭಾದೆಯೂ ತೀವ್ರ ಪ್ರಮಾಣದಲ್ಲಿ ಕಂಡುಬಂದಲ್ಲಿ ಕೆಳಗಿನ ಯಾವುದಾದರು ಕೀಟಗಳ ಬಳಕೆ ಮಾಡಬಹುದು :

    ಫೋರೇಟ್ 10 ಜಿ. @ 75 ಗ್ರಾಂ. ಅಥವಾ ಕಾರ್ಬೋಫುರಾನ್ 3 ಜಿ. @ 1.25 ಕೆ.ಜಿ./ ಬೀಜದ ಹಾಸಿಗೆ (300 ಚದರ ಮೀಟರ್ ಪ್ರದೇಶ) ನಂತರ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿಸಬೇಕು. ಡೈನಿಟ್ರೊಫುರಾನ್ @ 1-1.5 ಟ/hಚಿ ಸಿಂಪಡಿಸಬೇಕು.

    ಲೇಖಕರು: 1.ಸುಜಯ್ ಹುರಳಿ, (Asst. professor, AICRIP rice, Gangavathi)
    2.ವಿನೋದ (SRF, Entomology)