ಅವರೆ (Lablab purpureus sweet) (ಕುಟುಂಬ: ಪ್ಯಾಪಿಲಿಯೋನೇಸೀ) ಹೆಬ್ಬಾಳ ಅವರೆ ಜನಪ್ರೀಯ ಏಕವಾರ್ಷಿಕ ಬೆಳೆ. ಸಾಮಾನ್ಯವಾಗಿ ಇದನ್ನು ರಾಗಿ ಮತ್ತು ಜೋಳಗಳ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಕರ್ನಾಟಕದ ದಕ್ಷಿಣದ ಭಾಗಗಳಲ್ಲಿ ಅವರೆಯನ್ನು ದ್ವಿದಳ ಧಾನ್ಯ ತರಕಾರಿ ಹಾಗೂ ಮೇವಿಗಾಗಿಯೂ ಬೆಳೆಯುತ್ತಾರೆ.
ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿಯೂ ಈ ಬೆಳೆಯು ಜನಪ್ರಿಯವಾಗಿದೆ. ಅವರೆಯ ಉಪಯುಕ್ತತೆಯನ್ನು ಪರಿಗಣಿಸಿ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದವರು, ಹೆಬ್ಬಾಳ ಅವರೆ -3 ಎಂಬ ತಳಿಯನ್ನು ಅಭಿವೃದ್ಧಿಪಡಿಸಿ 1978 ರಲ್ಲಿ ಬಿಡುಗಡೆ ಮಾಡಿದರು. ನಂತರ 1997 ರಿಂದ ಈಚೆಗೆ ವಿಶ್ವವಿದ್ಯಾನಿಲಯದ ಬಿ.ಎಸ್.ಪಿ. ಘಟಕವು ಈ ತಳಿಯನ್ನು ಶುದ್ಧೀಕರಿಸಿ, ಪುನಶ್ಚೇತನಗೊಳಿಸಿ ಬೀಜೋತ್ಪಾದನೆಯ ಕಾರ್ಯದಲ್ಲಿ ನಿರತವಾಗಿದೆ. ಈ ಬೆಳೆಯನ್ನು ಉತ್ತರ ಕರ್ನಾಟಕದಲ್ಲಿಯು ಸಹ ಬೆಳೆದು ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಇದು 85-90 ದಿವಸಗಳ ಅವಧಿಯಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿ. ಈ ತಳಿಗೆ ಬಳ್ಳಿಯಾಗಿ ಹಬ್ಬುವ ಗುಣವಿರುವುದಿಲ್ಲ. ಸೂರ್ಯಪ್ರಕಾಶದ ಅವಧಿ (Photoperiod) ಈ ಬೆಳೆಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಆದ್ದರಿಂದ ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು.
ಹೂಗಳ ಬಣ್ಣ ಬಿಳಿ: ಎಳೆಯ ಕಾಯಿಗಳ ಮತ್ತು ಬೀಜಗಳ ಬಣ್ಣ ಹಸಿರು; ಬಲಿತ ಕಾಯಿಗಳಲ್ಲಿ ತಿಳಿ ಕಂದು ಬಣ್ಣದ 3-4 ದುಂಡನೆಯ ಬೀಜಗಳಿರುತ್ತದೆ.
ಬಿತ್ತನೆ ಕಾಲ: ವರ್ಷದ ಯಾವ ಸಮಯದಲ್ಲೂ ಬಿತ್ತನೆ ಮಾಡಬಹುದು.
ಅಂತರ: ಸಾಲಿನಿಂದ ಸಾಲಿಗೆ 45 ಸೆ.ಮೀ. ಬೀಜದಿಂದ ಬೀಜಕ್ಕೆ 15 ಸೆ.ಮೀ.
ಸಾಮಗ್ರಿಗಳು |
ಎಕರೆಗೆ |
ಹೆಕ್ಟೇರಿಗೆ |
ಕೊಟ್ಟಿಗೆ ಗೊಬ್ಬರ |
2-3 ಟನ್ |
5-7.5 ಟನ್ |
ರಸಗೊಬ್ಬರಗಳು |
||
ಸಾರಜನಕ |
10 ಕಿಲೋಗ್ರಾಂ |
25 ಕಿಲೋಗ್ರಾಂ |
ರಂಜಕ |
20 ಕಿಲೋಗ್ರಾಂ |
50 ಕಿಲೋಗ್ರಾಂ |
ಪೊಟ್ಯಾಷ್ |
10 ಕಿಲೋಗ್ರಾಂ |
25 ಕಿಲೋಗ್ರಾಂ |
ಬಿತ್ತನೆ ಬೀಜ |
12 ಕಿಲೋಗ್ರಾಂ |
30 ಕಿಲೋಗ್ರಾಂ |
ರೈಬೋಬಿಯಂ ಜೀವಾಣು |
100 ಗ್ರಾಂ |
357 ಗ್ರಾಂ |
ಸಸ್ಯ ಸಂರಕ್ಷಣೆ:
ಕೀಟಗಳು: ಏಫಿಡ್, ಎಲೆ ತಿನ್ನುವ ಹಾಗೂ ಕಾಯಿ ಕೊರೆಯುವ ಹುಳಗಳು.
ಸಂರಕ್ಷಣಾ ವಿಧಾನ: ಬಿತ್ತನೆಯ ನಂತರದ 35-40 ದಿನಗಳಲ್ಲಿ ಹೂ ಬಿಡುವ ಒಂದು ವಾರದ ಮುನ್ನ ಕೀಟನಾಶಕ ದ್ರಾವಣವನ್ನು (ಒಂದು ಲೀಟರ್ ನೀರಿಗೆ 2 ಮಿಲಿ ಲೀಟರ್ ಮೊನೊಕ್ರೊಟೊಫಾಸ್ ಅಥವಾ 4 ಗ್ರಾಂ ಕಾರ್ಬರಿಲ್ 50 w.p. ಬೆರೆಸಿದ ದ್ರಾವಣ) ಸಿಂಪಡಿಸಬೇಕು. ಕೀಟಗಳ ಬಾಧೆಯು ಹೆಚ್ಚಾಗಿ ಕಂಡು ಬಂದಲ್ಲಿ ಪ್ರತಿ 15 ದಿವಸಗಳಿಗೊಮ್ಮೆ 3-4 ಸಿಂಪರಣೆಗಳನ್ನು ಮಾಡಿ ಹತೋಟಿಗೆ ತರಬಹುದು. ಕೊಯ್ಲಿಗೆ ಮುಂಚೆ ಮೆಲಾಥಿಯಾನ್ ಪುಡಿಯ ಸಿಂಪರಣೆಯಿಂದ ಉಗ್ರಾಣದ (ಶೇಖರಣೆಯ) ಕೀಟಗಳ ನಿಯಂತ್ರಣವು ಸಾಧ್ಯವಾಗುತ್ತದೆ.
ರೋಗಗಳು: ಎಲೆ ಚುಕ್ಕೆ ರೋಗ ಮತ್ತು ಆಂಥ್ರಾಕ್ನೊಸ್ ರೋಗಗಳ ಸೂಚನೆ ಕಂಡ ಕೂಡಲೇ ಒಂದು ಲೀಟರ್ ನೀರಿಗೆ 2-3 ಗ್ರಾಂ ಮ್ಯಾಂಕೊಂಜೆಬ್ (Dithane-M-45) ಪುಡಿಯನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಸಿಂಪರಣೆ ಮಾಡಿದರೆ ರೋಗದ ಹತೋಟಿಯಾಗುತ್ತದೆ.
ಹಸಿರು ತರಕಾರಿ ಕಾಳು/ಬೀಜ:
ಬೀಜೋತ್ಪಾದನೆ ಸಮಯದಲ್ಲಿ ಅನುಸರಿಸಬೇಕಾದ ಕ್ಷೇತ್ರ ಹಾಗೂ ಬೀಜ ಮಾನದಂಡಗಳು
ಕ್ಷೇತ್ರ ಮಾನದಂಡಗಳು |
ಬೀಜ ಮಾನದಂಡಗಳು |
ಪ್ರತ್ಯೇಕತೆ ಅಂತರ ದೂರ (ಮೀ.) ಮೂಲ ಬೀಜ - 10 ಮೀ. ಪ್ರಮಾಣಿತ ಬೀಜ – 5 ಮೀ. |
ಬೀಜ ಶುದ್ಧತೆ (ಶೇ) : 98 % ಜಡವಸ್ತು (ಶೇ) : 2 % ಇತರೆ ಬೆಳೆ ಬೀಜ : 10/ ಕೆ.ಜಿ. ಕಳೆ ಬೀಜ : 5/ ಕೆ.ಜಿ. ಮೊಳಕೆ (ಶೇ) : 75 % ತೇವಾಂಶ (ಶೇ) : 7-8 %
|
ಇಳುವರಿ: 4-5 ಕ್ವಿಂಟಾಲ್ ಪ್ರತಿ ಎಕರಿಗೆ (ಖುಷ್ಕಿ), 6-8 ಕ್ವಿಂಟಾಲ್ ಪ್ರತಿ ಎಕರಿಗೆ(ನೀರಾವರಿ)
|
ಎಕರೆಗೆ (ಕ್ಟಿಂಟಾಲ್) |
ಹೆಕ್ಟೇರಿಗೆ (ಕ್ವಿಂಟಾಲ್) |
ಕಾಳು/ಬೀಜ |
|
|
ಖುಷ್ಕಿ |
4-5 |
10-12.5 |
ನೀರಾವರಿ |
6-8 |
15-20 |
ಹಸಿರು ತರಕಾರಿ |
|
|
ಖುಷ್ಕಿ |
8-10 |
20-25 |
ನೀರಾವರಿ |
|
|
ಮೊದಲ ಕೊಯ್ಲು |
12-15 |
30-37.5 |
ಎರಡನೇ ಕೊಯ್ಲು |
6-8 |
15-20 |
ಲೇಖಕರು:
1. ಡಾ. ಲೋಕೇಶ್ ಕೆ., ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ.
2. ಶ್ರೀ ಸುಹಾಸ ಪಿ.ಡಿ., ಸಹಾಯಕರು, ಕೃಷಿ ಮಹಾವಿದ್ಯಾಲಯ, ಕಲಬುರಗಿ, ಕೃಷಿ ವಿಶ್ವವಿದ್ಯಾಲಯ, ರಾಯಚೂರು.