Agripedia

ಹಲಸಿನ ಹಣ್ಣಿನಲ್ಲಿ ಹೊಸ ಶಿಲೀಂಧ್ರ ಪತ್ತೆ..!

24 July, 2022 4:20 PM IST By: Maltesh
ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ಇತರ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣು ಯಾವುದೇ  ರೋಗಗಳಿಂದ ಮುಕ್ತವಾಗಿದೆ ಎಂದು ಪರಿಗಣಿಸಲಾಗಿದೆ. ಸದ್ಯ ಕೇರಳದ ಕೃಷಿ ವಿಶ್ವವಿದ್ಯಾಲಯದ ಸಂಯೋಜಿತ ಕೃಷಿ ವ್ಯವಸ್ಥೆಗಳ ಸಂಶೋಧನಾ ಕೇಂದ್ರದ) ಸಂಶೋಧಕರು ಹಗಲಸಿನ ಹಣ್ಣಿನಲ್ಲಿ ಹೊಸ ಫಂಗಸ್‌ ಖಾಯಿಲೆಯನ್ನು ಗುರುತು ಮಾಡಿದ್ದಾರೆ ಎಂದು ವರದಿಯಾಗಿದೆ.

ಹೌದು ಅಥೇಲಿಯಾ ರೋಲ್ಫ್ಸಿ ಎಂಬ ಶಿಲೀಂಧ್ರದಿಂದ ಹಲಸಿನ ಹಣ್ಣು ಫಂಗಸ್‌ಗೆ ಒಳಗಾಗುತ್ತದೆ ಎಂದುದನ್ನು ಕಂಡು ಹಿಡಿಯಲಾಗಿದೆ. ಅಷ್ಟೇ ಅಲ್ಲದೆ ಈ ಶಿಲೀಂಧ್ರದಿಂದ ಹಲಸಿನ ಹಣ್ಣಿನಲ್ಲಿ ಫಂಗಸ್‌ ಕಂಡು ಬರುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಮೂರು ಜಿಲ್ಲೆಗಳಿಂದ ಸಂಗ್ರಹಿಸಿದ ಮಾದರಿಗಳು

ರೋಗ-ಸೋಂಕಿತ ಮಾದರಿಗಳು ತಿರುವನಂತಪುರಂ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಂದ ಸಂಗ್ರಹಿಸಲಾದ ಬಲಿತ ಹಲಸಿನ ಹಣ್ಣಿನ ಮಾದರಿಗಳಾಗಿವೆ. ಬೇರೆಡೆಯಿಂದ ಪರಿಚಯಿಸಲಾದ ಹಣ್ಣಿನ ಪ್ರಭೇದಗಳು ತಮ್ಮೊಂದಿಗೆ ಹೊಸ ರೋಗಗಳನ್ನು ತರಬಹುದು, ಅಥೇಲಿಯಾ ರೋಲ್ಫ್ಸಿಯಿಂದ ಉಂಟಾಗುವ ಹಣ್ಣು ಕೊಳೆತವು ಈ ವರ್ಗಕ್ಕೆ ಬರುವುದಿಲ್ಲ ಎಂದು ಡಾ.ಸಜೀನಾ ಹೇಳುತ್ತಾರೆ.

ಮಣ್ಣಿನಿಂದ ಹರಡುವ ಶಿಲೀಂಧ್ರ ರೋಗಕಾರಕ, ಅಥೇಲಿಯಾ ರೋಲ್ಫ್ಸಿಯು ಹಲವಾರು ಬೆಳೆಗಳಿಗೆ ಪ್ರಮುಖ ಅಪಾಯವಾಗಿದೆ ಮತ್ತು ಆದ್ದರಿಂದ, ಹೊಸ ಅಭಿವೃದ್ಧಿಯು ತಕ್ಷಣದ ಗಮನವನ್ನು ನೀಡುತ್ತದೆ ಎಂದು ಜರ್ನಲ್ ಆಫ್ ಪ್ಲಾಂಟ್ ಪೆಥಾಲಜಿಯ ಇತ್ತೀಚಿನ ಆವೃತ್ತಿಯಲ್ಲಿ ಪ್ರಕಟವಾದ IFSRS ಸಂಶೋಧನೆಗಳನ್ನು ವಿವರಿಸುವ ಸಂಶೋಧನಾ ಪ್ರಬಂಧವು ಎಚ್ಚರಿಸಿದೆ.

ನಿಂಬೆ ಕೃಷಿಯಿಂದ ಪಡೆಯಬಹುದು ಬಂಪರ್ ಲಾಭ! ಮಾರುಕಟ್ಟೆಯಲ್ಲಿ ಹೆಚ್ಚಿದ ಬೆಲೆ

ಹಲಸಿನ ಹಣ್ಣಿನ ಆರೋಗ್ಯಕರ ಪ್ರಯೋಜನಗಳು

ತೂಕ ಇಳಿಸಿಕೊಳ್ಳುವಲ್ಲಿ (Weight loss) ಪರ್ಫೆಕ್ಟ್ ಹಣ್ಣು

ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಯಾವ ಭಯವೂ ಇಲ್ಲದೆ ಹಲಸಿನ ಸೇವನೆ ಮಾಡಬಹುದು . ಇದರಿಂದ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಹಲಸಿನ ಹಣ್ಣಿನ ತೊಳೆಗಳಲ್ಲಿ ಕೇವಲ ಪ್ರೋಟಿನ್ ಅಂಶ ಮಾತ್ರವಲ್ಲದೆ ನಾರಿನ ಅಂಶ ವಿಟಮಿನ್ ' ಎ ', ವಿಟಮಿನ್ ' ಸಿ ', ರಿಬಾಫ್ಲವಿನ್, ಮೆಗ್ನೀಷಿಯಂ, ಪೊಟ್ಯಾಶಿಯಂ, ತಾಮ್ರ ಮತ್ತು ಮ್ಯಾಂಗನೀಸ್ ಅಂಶಗಳು ಇತರ ಹಣ್ಣುಗಳಿಗೆ ಹೋಲಿಸಿದರೆ ದುಪ್ಪಟ್ಟಾಗಿವೆ. ನಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಮತ್ತು ಬಹಳ ಪ್ರಯೋಜನಕಾರಿಯಾದ ಆಂಟಿ - ಆಕ್ಸಿಡೆಂಟ್ ಅಂಶಗಳು ಇದರಲ್ಲಿ ಲಭ್ಯವಿವೆ.

ನಿದ್ರಾಹೀನತೆ (Insomnia) ದೂರ:

ಹಲಸಿನ ಹಣ್ಣು ತಿಂದರೆ ನಿದ್ರಾಹೀನತೆ ದೂರವಾಗುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತದೆ. ಅಲ್ಸರ್ ಸಮಸ್ಯೆ ನಿವಾರಣೆಯಾಗುತ್ತದೆ. ಮೂಳೆಗಳನ್ನು ಬಲಪಡಿಸುವ ವಿಶೇಷ ಸಾಮರ್ಥ್ಯವೂ ಇದರಲ್ಲಿದೆ.