Agripedia

ಇಳುವರಿ ಹೆಚ್ಚಿಸಲು ಹೈಡ್ರೋಜೆಲ್ ಉಪಯೋಗಿಸಿ

12 January, 2021 9:18 PM IST By:
Hydro gel

ಭಾರತವು ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದೆ . ದೇಶದ 60-70% ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಕೃಷಿಗೆ ಯೋಗ್ಯವಾದ ಭೂಮಿಯು 140 ಮಿಲಿಯನ್ ಹೆಕ್ಟೇರನಷ್ಟಿದೆ. ಇದರಲ್ಲಿ 71.68 ಮಿಲಿಯನ್ ಹೆಕ್ಟೇರ್ ಮಳೆ ಆಧಾರಿತ ಕೃಷಿ ಭೂಮಿಯಾಗಿದ್ದು, ಉಳಿದ 68.32 ಮಿಲಿಯನ್ ಹೆಕ್ಟೇರ್ ನೀರಾವರಿ ಆಧಾರಿತ ಭೂಮಿಯಾಗಿದೆ.

ಮಳೆ ಆಧಾರಿತ ಕೃಷಿಯಲ್ಲಿ ತೊಡಗಿರುವ ರೈತರಿಗೆ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಅವುಗಳಲ್ಲಿ ಅತೀ/ಅನಾವೃಷ್ಟಿ, ಕಾಲಕಾಲಕ್ಕೆ ಮಳೆ ಸರಿಯಾಗಿ ಆಗದೇ ನಿಗದಿತಮಟ್ಟದ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿಯೇ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನ್ಯಾನೋ ತಂತ್ರಜ್ಞಾನದ ಮೂಲಕ PUSA HYDROGEL ಎಂಬ ತಂತ್ರಜ್ಞಾನವನ್ನು ಸಂಶೋಧಿಸಿದೆ.

ಏನಿದು HYDRO GEL ತಂತ್ರಜ್ಞಾನ ?

ಇದು SUPER ABSORBENT POLYMERS ಎಂಬ ಸಂಯುಕ್ತಗಳ ವರ್ಗಕ್ಕೆಸೇರಿದ್ದು, ಇವುಗಳು ತಮ್ಮಲ್ಲಿ ನೀರನ್ನು ಹೀರಿಕೊಳ್ಳುವ ಮತ್ತು ಅದನ್ನು ಅಗತ್ಯಕ್ಕೆ ತಕ್ಕಂತೆ ಬಿಡುಗಡೆಗೊಳಿಸುವ ಸಾಮರ್ಥ್ಯಹೊಂದಿವೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೃಷಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಕೈಗೊಂಡ ಸಂಶೋಧನೆಯ ಪ್ರಕಾರ ವಿದೇಶದಿಂದ ಆಮದು ಮಾಡಿಕೊಂಡ ಹೈಡ್ರೋಜೆಲಗಳು ಭಾರತೀಯ ಹವಾಮಾನಕ್ಕೆ ಹೊಂದದೆ ಹಾಗೂ ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಪರಿಣಾಮದಿಂದಾಗಿ ತಮ್ಮಕಾರ್ಯಕ್ಷಮತೆಯನ್ನು ಕಳೆದುಕೊಂಡವು. ಈ ಎಲ್ಲಾ ಮಿತಿಗಳನ್ನು ಗಣನೆಗೆ ತೆಗೆದುಕೊಂಡ ವಿಜ್ಞಾನಿಗಳು ಸೆಲ್ಯುಲೋಸಯುಕ್ತ ಸ್ವದೇಶಿ PUSAHYDROGELಅನ್ನು ಅಭಿವೃದ್ಧಿಪಡಿಸಿದರು.

PUSAHYDROGELನಪ್ರಮುಖ ಲಕ್ಷಣಗಳು :

  • ಇದು ತನ್ನಲ್ಲಿ 350-500 ರಷ್ಟುನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನುಹೊಂದಿದ್ದಲ್ಲದೆ, ಅದನ್ನು ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಬಿಡುಗಡೆಗೊಳಿಸುತ್ತದೆ.
  • ಇದರ ಹೀರಿಕೊಳ್ಳುವಿಕೆಯು ಸಾಮರ್ಥ್ಯವು 50 ಡಿಗ್ರಿ ತಾಪಮಾನದವರೆಗೂ ಹೆಚ್ಚುತ್ತದೆ ಹಾಗೂ ಇದನ್ನು ಪ್ರತ್ಯೇಕವಾಗಿ ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾತಾವರಣದ ಸ್ಥಿತಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ.
  • ಒಂದು ಬೆಳೆಯ ಕಾಲಾವಧಿಯ ಪೂರ್ಣದವರೆಗೂ ಪರಿಣಾಮಕಾರಿಯಾಗಿದೆ.
  • ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಗಳನ್ನು ಸುಧಾರಿಸುತ್ತದೆ.
  • ಬೀಜಗಳ ಮೊಳಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಬೇರುಗಳ ಬೆಳವಣಿಗೆ ಮತ್ತು ಅವುಗಳ ಸಾಂದ್ರತೆಯನ್ನು ಹೆಚ್ಚಿಗೆಮಾಡುತ್ತದೆ.
  • ಮಣ್ಣಿನಲ್ಲಿ ಕಡಿಮೆ ತೇವಾಂಶ ಇದ್ದರೂ ಸಹ ಅದನ್ನು ಸರಿಯಾದ ರೀತಿಯಲ್ಲಿ ಬೆಳೆಗಳಿಗೆ ಸಿಗುವ ಹಾಗೆ ಮಾಡುತ್ತದೆ.

ಬೆಳೆಗಳ ಮೇಲಿನ ಪ್ರಭಾವ :

  • ಇದನ್ನು ಬಳಸಿದ ರೈತರ ಪ್ರಕಾರ ಇಳುವರಿಯಲ್ಲಿ ಶೇಕಡಾ 10-50 ರಷ್ಟು ಏರಿಕೆಯಾಗಿದ್ದು, ಬೆಳೆಗಳಲ್ಲಿ ನೀರಿನ ಬಳಕೆ 30-50% ಹಾಗೂ ಗೊಬ್ಬರ ಬಳಕೆಯಲ್ಲಿ 22-30% ನಷ್ಟು ಕಡಿಮೆಯಾಗಿದೆ. ಇದರಿಂದ ಅವುಗಳ ಉತ್ಪಾದನಾ ವೆಚ್ಚ ಸಹಕ ಡಿಮೆ ಆಗುತ್ತಿದೆ ಎನ್ನುತ್ತಾರೆ.

ಬಳಸುವವಿಧಾನ :

  • ಇದನ್ನು ಬಿತ್ತುವ ಸಮಯದಲ್ಲಿ ಸಾಲಿನಲ್ಲಿ ಬೀಜದ ಜೊತೆಗೆ, ಹಾಗೂ ನರ್ಸರಿಗಳಲ್ಲಿ ಸಸಿಗಳಿಗೆ ಬೇರು ಉಣಿಸುವಿಕೆಗೆ ( root dipping) ಸಹ ಬಳಸಬಹುದು. ಹೊಲಗಳಲ್ಲಿ ಇದನ್ನು ಪ್ರತಿ ಎಕರೆಗೆ 1-1.5 ಕೆಜಿ ಬಳಸಬೇಕು .ಮತ್ತು ನರ್ಸರಿಗಳಲ್ಲಿ ಇದನ್ನು ಪ್ರತಿಸ್ಕ್ವೇರ್ಮೀಟರ್ಗೆ 2ಗ್ರಾಂನಂತೆ ಬಳಸಬಹುದು.

ಮಾರುಕಟ್ಟೆಯಲ್ಲಿನ ಲಭ್ಯತೆ:

  • ಈ ಒಂದು PUSAHYDROGELನ ಉತ್ಪಾದನೆಗಾಗಿ 6 ಕಂಪನಿಗಳಿಗೆ ಪರವಾನಿಗೆ ನೀಡಲಾಗಿದ್ದು, ಇವುಗಳಲ್ಲಿ ಕೇವಲ ಮೂರು ಕಂಪನಿಗಳು ಯಶಸ್ವಿಯಾಗಿವೆ.

ಪರವಾನಿಗೆಹೊಂದಿರುವಕಂಪನಿಗಳು:

  • M/s Earth International Ltd, Delhi [ಉತ್ಪನ್ನದಹೆಸರು–VAARIDHAR G 1 ]
  • M/s CarborundumUniversal Ltd, Bangalore [ ಉತ್ಪನ್ನದಹೆಸರು –Cauvery ]
  • M/s Huntin Organics Ltd, Faridabad [ ಉತ್ಪನ್ನದ ಹೆಸರು – Anmol]
  • M/s Nagarjuna Fertilisers Ltd, Hyderabad
  • The SarpanchSaman, Delhi
  • M/s Madhusudhan company Ltd, Jaipur
  • ಪ್ರತಿಕೆಜಿಗೆ 1000-1400 ದರಗಳಲ್ಲಿ ಲಭ್ಯವಿದೆ.

ಲೇಖನ:ಆತ್ಮಾನಂದ ಹೈಗರ್