Agripedia

ಬೇವಿನ ಕೀಟನಾಶಕ ತಯಾರಿಸಿ, ಖರ್ಚು ಉಳಿಸಿ, ಕೀಟಗಳ ನಿಯಂತ್ರಿಸಿ, ಹೆಚ್ಚು ಇಳುವರಿ ಪಡೆಯಿರಿ

20 December, 2020 9:43 AM IST By:

ಬೇವಿನ ಮರದ ಲಾಭ ಮನುಷ್ಯರಿಗೆ ಮಾತ್ರವಲ್ಲ, ಕೃಷಿಯಲ್ಲಿಯೂ ಅತ್ಯಂತ ಉಪಯುಕ್ತ ಎಂದು ಮನಗಂಡು ಕೀಟನಾಶಕಗಳ ರೂಪದಲ್ಲಿ, ಬೀಜೋಪಚಾರಕ್ಕಾಗಿ ಮತ್ತು ಭೂಮಿಯ ಫಲವರ್ಧನೆ ವೃದ್ಧಿಸಿಕೊಳ್ಳಲು ರೈತರಿಂದ ಬಳಸಲಾಗುತ್ತಿದೆ.

ಪುರಾತನ ಕಾಲದಿಂದಲೂ ಆಯುರ್ವೇದಿಯ ಔಷಧ ಮತ್ತು ಸೌಂದರ್ಯವರ್ಧಕಗಳಲ್ಲಿ ಬೇವಿನ ಎಲೆ, ಕಡ್ಡಿ, ಬೀಜಗಳನ್ನು ಬಳಸಲಾಗುತ್ತಿತ್ತು.  ಬೇವಿನಗಿಡದ ಪ್ರತಿಯೊಂದು ಭಾಗವು ನಮಗೆ ಸಹಾಯಮಾಡುತ್ತವೆ, ಔಷಧೀಯ ಗುಣ ವಾಗಿರಬಹುದು, ಕೀಟನಾಶಕ ಗುಣ ಆಗಿರಬಹುದು ಸಂಶೋಧನೆ ಪ್ರಕಾರ ಬೇವಿನ ಗಿಡ ಎರಡು ನೂರಕ್ಕೂ ಹೆಚ್ಚು ಕೀಟನಾಶಕಗಳ ಗುಣವನ್ನು ಹೊಂದಿದೆ.

ಸಾಮಾನ್ಯವಾಗಿ ನಾವು ಕೃಷಿ ಪದ್ಧತಿಯಲ್ಲಿ ಬೇವಿನ ಎಣ್ಣೆಗಳು ಬಳಸುತ್ತೇವೆ. ಅದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು, ಮಾರುಕಟ್ಟೆಗಳಿಂದ ತರುವುದರಿಂದ ನಮಗೆ ಸ್ವಲ್ಪ ಹಣ ಖರ್ಚಾಗುತ್ತದೆ. ಆದ್ದರಿಂದ ಹೇಗೆ ಮನೆಯಲ್ಲಿಯೇ ತಯಾರಿಸುವುದು ಅಂತ ನೋಡಿ.

ತಯಾರಿಕೆಗೆ ಬೇಕಾದ ವಸ್ತುಗಳು:

 ಬೇವಿನ ಬೀಜಗಳು

 ನೀರು

 ಸೋಪಿನ ದ್ರಾವಣ

ತಯಾರಿಸುವ ವಿಧಾನ:

ಒಣಗಿರುವ ಬೇವಿನ ಬೀಜಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ಸರಿಯಾಗಿ ಪುಡಿಮಾಡಿಕೊಳ್ಳಿ.  ಕೇವಲ ಒಂದು ಕೆಜಿ ಬೇವಿನ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ 23ರಿಂದ 24 ಲೀಟರ್ ನೀರಿನಲ್ಲಿ ಕುದಿಸಿ, ನಂತರ ಒಂದು ಬಿಳಿ ಬಟ್ಟೆಯಿಂದ ಸೋಸಿ,ನಂತರ ಒಂದು ಗಂಟೆ ಬಿಟ್ಟನಂತರ ನಮಗೆ 4 ಪ್ರತಿಶತದಷ್ಟು ಬೇವಿನೆಣ್ಣೆ ಸಿಗುತ್ತದೆ.

ಉಪಯೋಗಿಸುವ ವಿಧಾನ:

 ಸಾಮಾನ್ಯವಾಗಿ ನಾವು ಬೆಳೆಗಳ ಅನುಗುಣವಾಗಿ ಶೇಕಡಾ ಐದರಷ್ಟು ಮತ್ತು ಶೇಕಡ ನಾಲ್ಕರಷ್ಟು ಬೇವಿನ ಎಣ್ಣೆಯನ್ನು ಉಪಯೋಗಿಸಿಕೊಳ್ಳುತ್ತೇವೆ,.ಮತ್ತು 20ml ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಬೇಕು, ಒಂದು ಪಂಪ್ ಗೆ 1ml ಮಾರ್ಜಕ ರಹಿತ  ಸೋಪಿನ ದ್ರಾವಣವನ್ನು ಹಾಕಬೇಕು. ನಂತರ ಸಿಂಪರಣೆ  ಮಾಡಬೇಕು.

ಪ್ರಯೋಜನಗಳು:

ಬೇವಿನ ಎಣ್ಣೆ ಸಿಂಪರಣೆ ಮಾಡುವುದರಿಂದ, ರಸಹೀರುವ ಕೀಟಗಳನ್ನು ನಿಯಂತ್ರಣ ಮಾಡಬಹುದು.

ಶಿರು, ಬಿಹಾರಿ ಕ್ಯಾಟರ್ಪಿಲ್ಲರ್,ಥ್ರಿಪ್ಸ್ ನುಸಿ,ಸೈನಿಕ ಹುಳು,ಕಾಯಿಕೊರಕ,  ಕಾಂಡಕೊರಕ,ಹತ್ತಿಯಲ್ಲಿ ಬರುವ ಕೆಂಪು ತಿಗಣೆ, ಬಿಳಿ ನೊಣಗಳು ಈ ಎಲ್ಲವುಗಳನ್ನು ಸಹ ಬೇವಿನ ಎಣ್ಣೆಯಿಂದ ನಿಯಂತ್ರಣ ಮಾಡಬಹುದು.

ಪ್ರಮುಖವಾಗಿ ಹೂಕೋಸು ಮತ್ತು ಎಲೆಕೋಸು ಗಳಲ್ಲಿ ಶೇಕಡ ನಾಲ್ಕರಷ್ಟು ಬೇವಿನ ಎಣ್ಣೆ ಎನ್ನು ಮಾತ್ರ ಸಿಂಪಡಿಸಬೇಕು.

 ಲೇಖಕರು :  ಮುತ್ತಣ್ಣ ಬ್ಯಾಗೆಳ್ಳಿ