Agripedia

ಕಡಿಮೆ ಖರ್ಚಿನಲ್ಲಿ ದಶಗವ್ಯ ಸಾವಯವ ಕೀಟ ನಾಶಕ ಬಳಸಿ ಹೆಚ್ಚಿನ ಇಳುವರಿ ಪಡೆಯಿರಿ

18 December, 2020 6:30 AM IST By:

ಪಂಚಗವ್ಯದಲ್ಲಿ ಬರುವ ಹಸುವಿನ ಐದು ಉತ್ಪನ್ನಗಳಾದ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದೊಂದಿಗೆ ಇತರ ಸಸ್ಯಜನ್ಯ ಪದಾರ್ಥಗಳನ್ನು ಬಳಸಿ ತಯಾರಿಸಿದ ಕಷಾಯದಿಂದ ಎಲ್ಲಾ ರೀತಿಯ ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿ ದಶಪರ್ಣಿ ಕಷಾಯವು ತುಂಬಾ ಪರಿಣಾಮಕಾರಿಯಾಗಿದೆ.

ಸಸ್ಯದಲ್ಲಿ ನಂಜು ಪ್ರತಿರೋಧಕ ಮತ್ತು ಶಿಲಿಂದ್ರ ಪ್ರತಿರೋಧಕವಾಗಿದೆ. ರೈತರು ಈ ಕಷಾಯವನ್ನು ಮನೆಯಲ್ಲಿಯೇ ತಯಾರಿಸಬಹುದು. ಹೌದು ಇದು   ಪಂಚಗವ್ಯ, ಜೀವಾಮೃತದಂತೆ ಇದನ್ನು ಸಹ ಬೆಳೆಗಳ ಪೋಷಣೆ ಹಾಗೂ ಕೀಟನಾಶಕವಾಗಿ ಬಳಸಬಹುದು.  ಇದನ್ನು ದಶಗವ್ಯವೆಂದಲೂ ಕರೆಯುತ್ತಾರೆ.

ಹೆಸರೇ ಸೂಚಿಸುವಂತೆ ಇದು ಪಂಚಗವ್ಯದೊಂದಿಗೆ ಇತರ ಗಿಡಮೂಲಿಕೆಗಳ ಐದು ಸಸ್ಯಜನ್ಯ ಪದಾರ್ಥಗಲನ್ನು ಬಳಸಿ ಇದನ್ನು ತಯಾರಿಸುವುದರಿಂದ ಇದಕ್ಕೆ ದಶಗವ್ಯ, ದಶಪರ್ಣಿ ಎಂತಲೂ ಕರೆಯುತ್ತಾರೆ. ಇದು ಸಾವಯವ ಕೃಷಿ ಪದ್ಧತಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬನ್ನಿ ದಶಗವ್ಯ ಹೇಗೆ ತಯಾರಿಸಬೇಕೆಂಬುದರ ಕುರಿತು ತಿಳಿದುಕೊಳ್ಳೋಣ.

ತಯಾರಿಕೆಗೆ ಬೇಕಾಗುವ ಪದಾರ್ಥಗಳು:

ದೇಶಿ ಹಸುವಿನ ಸಗಣಿ 7 ಕೆಜಿ

ದೇಶಿ ಹಸುವಿನ ಗಂಜಲ 10 ಲೀಟರ್

ಬೆಲ್ಲ 3 ಕೆಜಿ

ಮೊಸರು 2 ಲೀಟರ್

ನೀರು 10 ಲೀಟರ್

ದೇಶಿ ಹಸುವಿನ ಹಾಲು 3 ಲೀಟರ್

ದೇಶಿ ಹಸುವಿನ ತುಪ್ಪ 1 ಕೆಜಿ

ಲಿತ ಬಾಳೆ ಹಣ್ಣು 12

1ಕೆಜಿ ದತ್ತುರಿ ಎಲೆ

1ಕೆಜಿ ದವನದ ಎಲೆ

1ಕೆಜಿ ತುಳಸಿ ಎಲೆ

1 ಕೆಜಿ ಬೆಟ್ಟದ ಹರಳು

ನಾವು ದಶಗವ್ಯ ವನ್ನೂ  ತಯಾರಿಸುವ ಮುನ್ನ ಎಲ್ಲ ಮೇಲೆ ಹೇಳಿರುವಂತೆ ಸರಿಯಾಗಿ ಇಟ್ಟುಕೊಳ್ಳಬೇಕು

ಮೊದಲಿಗೆ ಎಲ್ಲ ಎಲೆಗಳು ಅಂದರೆ  1ಕೆಜಿ ,ದತ್ತುರೀ ಎಲೆ, ದವನದ ಎಲೆ,ಬೆಟ್ಟದ ಹರಳು, ಬೇವಿನ ಎಲೆ ಸಹ ತಗದುಕೊಳ್ಳಬಹುದು  ಅದನ್ನು ಸರಿಯಾಗಿ ಕುಟ್ಟಿ ಸಣ್ಣ ಮಾಡಬೇಕು.. ತದನಂತರ  ಆ ಕುಟ್ಟಿದ ಮಿಶ್ರಣ ವನ್ನೂ 1 ಲೀ ಗಂಜಲ ದೊಂದಿಗೆ 10 ದಿನಗಳ ಕಾಲ ಕೊಳೆಸಬೇಕು.

ಅಥವಾ ಸಸ್ಯ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಕಳೆ ಗಳು ಸಹ ಬಳಸಬಹುದು.   ನಂತರ ಸಗಣಿ ,ತುಪ್ಪ,ಬೆಲ್ಲ,ಮೊಸರು ,ಬಾಳೆ ಹಣ್ಣು , ಹಾಲು ಇವುಗಳ ಮಿಶ್ರಣ ಕೂಡಾ ಸರಿಯಾಗಿ ಮಾಡಿಕೊಳ್ಳಬೇಕು.   

ನಂತರ ಆ 10 ದಿನ ಕೊಳೆಸಿರುವ ಎಲೆ ಗಳ ಮಿಶ್ರಣ ವನ್ನೂ ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕ 10 ಲೀ ನೀರು ಹಾಕಬೇಕು ಸರಿಯಾಗಿ ಮಿಶ್ರಣ ಮಾಡಿ ಅದನ್ನು ಸಗಣಿ ,ತುಪ್ಪ,ಬೆಲ್ಲ,ಮೊಸರು ,ಬಾಳೆ ಹಣ್ಣು , ಹಾಲು ಇವುಗಳ ಮಿಶ್ರಣ ಕ್ಕೇ ಹಾಕಬೇಕು ನಂತರ ನಮ್ಗೆ ದಶಗವ್ಯ ಸಿದ್ದವಾಗುತ್ತದೆ

ಉಪಯೋಗಿಸುವ ವಿಧಾನ:

ಬಂದಿರುವ ಆ ಮಿಶ್ರಣ ವನ್ನು 1 ಲೀ ದಶಗವ್ಯ ನಾವು 10 ಲೀ ನೀರಿನಲ್ಲಿ ಬೆರೆಸಿ   ಬೆಳೆಗಳಿಗೆ ಸಿಂಪಡಿಸಬೇಕು  ಅಥವ ಬೀಜೋಪಚಾರ ಸಹ ಮಾಡಬಹುದು 20-30 ನಿಮಿಷಗಳ ಕಾಲ ಬಿತ್ತುವ ಮುಂಚೆ ಬೀಜಗಳನ್ನು ಇದರಲ್ಲಿ ಅದ್ದಿ ನಂತರ ಬಿತ್ತನೆ ಮಾಡಬೇಕು..

ಪ್ರಯೋಜನಗಳು:

ನಾವು  ಇದನ್ನು ಉಪಯೋಗಿಸುವುದರಿಂದ ಎಲ್ಲಾ ಬೆಳೆಗಳಿಗೆ ತಗಲುವ ರೋಗಗಳನ್ನು ನಿಯಂತ್ರಣ ಮಾಡಬಹುದು?

ಎಲೆ ತುಕ್ಕ ರೋಗ , ಎಲೆ ಚುಕ್ಕೆ , ಎಲೆ ಹಲದಿಯಾಗುವಿಕೆ , ಇತ್ಯಾದಿ

ಇದನ್ನು ಉಪಯೋಗಿಸುವುದರಿಂದ ಕೀಟ ಭಾದೆ ಕೂಡಾ ತಡೆಗಟ್ಟಬಹುದು.

ಬಿಳಿ ನೋಣಗಳು ,ಹೇನು ಗಳು,ಸಸಿ, ಕಂಬಳಿ ಹುಳ ಗಳು ಸಹ ನಿಯಂತ್ರಣ ಮಾಡಬಹುದು .

ಸೂಚನೆ:  ಉಪಯೋಗಿಸುವುದಕ್ಕಿಂತ ಮೊದಲು ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಕ್ಕೆ ಬೇಟಿ ನೀಡಿ ಅವರಿಗೂ ಕೇಳಿ ನಂತರ ಬಳಸಿ .

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ