Agripedia

ಮನೆಯಲ್ಲಿಯೇ ಬೋರ್ಡೋ ಮಿಶ್ರಣ ತಯಾರಿಸಿ ಬೆಳೆಗಳಿಗೆ ತಗಲುವ ರೋಗ ನಿಯಂತ್ರಿಸಿ

24 December, 2020 12:06 PM IST By:

ಬೋರ್ಡೋ ಮಿಶ್ರಣದಿಂದ ಬೆಳೆಗಳಿಗೆ ತಗಲುವ ಹಲವಾರು ರೋಗಗಳನ್ನು ನಿಯಂತ್ರಣ ಮಾಡಬಹುದು. ಮತ್ತು ಅದನ್ನು ಮನೆಯಲ್ಲಿ ತಯಾರಿಸಿ  ಹಣ ಉಳಿಸಬಹುದು.ಮತ್ತು ಇದು ಮಾರುಕಟ್ಟೆಯಲ್ಲಿ ಕಡಿಮೆ ರೇಟಿಗೆ ಸಿಗುತ್ತದೆ, ಉಳಿದವುಗಳನ್ನು ಹೊಂದಾಣಿಕೆ ಮಾಡಿದರೆ ಇದನ್ನು ಬಳಸುವುದು ಉತ್ತಮ.

 ಬೋರ್ಡೋ ಮಿಶ್ರಣ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

* ಮೈಲುತುತ್ತ (coffer sulphet) ಒಂದು ಕಿಲೋಗ್ರಾಂ

 *ಸುಣ್ಣದ ಹರಳು ಒಂದು ಕಿಲೋಗ್ರಾಂ

 *ನೀರು 100 ಲೀಟರ್

* ಪ್ಲಾಸ್ಟಿಕ್ ಅಥವಾ ಮಣ್ಣಿನ ಪಾತ್ರೆಗಳು

 1%  ಬೋರ್ಡೋ ಮಿಶ್ರಣ ತಯಾರಿಕೆ

 ಮೊದಲಿಗೆ ಒಂದು ಕಿಲೋಗ್ರಾಂ ಮೈಲುತುತ್ತ (coffer sulphet) ವನ್ನು ಐವತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು. ಅದೇ ರೀತಿ ಇನ್ನೊಂದು ಪಾತ್ರೆಯಲ್ಲಿ ಒಂದು ಕಿಲೋ ಗ್ರಾಂ ಸುಣ್ಣವನ್ನು ಐವತ್ತು ಲೀಟರ್ ನೀರಿನಲ್ಲಿ ಕರಗಿಸಬೇಕು.ಮತ್ತು ಮೈಲುತುತ್ತದ ಮಿಶ್ರಣ ಮತ್ತು ಸುಣ್ಣದ ತಿಳಿ ನೀರನ್ನು ಮೂರನೇ ಪಾತ್ರೆಯಲ್ಲಿ ಒಂದೇ ಸಮಯಕ್ಕೆ ಸುರಿಯಬೇಕು.ನಂತರ ಅದು ಶೇಕಡಾ ಒಂದರಷ್ಟು ಬೋರ್ಡೋ ಮಿಶ್ರಣ ತಯಾರಿಕೆ ಆಗುತ್ತದೆ. ಅದು ಒಟ್ಟು 100 ಲೀಟರ್ ಆಗಿರುತ್ತದೆ.

ನಂತರ ಈ ಮಿಶ್ರಣವು ನಮಗೆ ಸರಿಯಾಗಿ ಆಗಿದೆಯೋ ಅಥವಾ ಇಲ್ಲವೇ ಎಂಬುದನ್ನು ಗಮನಿಸಿಕೊಳ್ಳಬೇಕು ಹೇಗೆಂದರೆ! ಒಂದು ಬ್ಲೇಡ್ ಅಥವಾ ಒಂದು ಸ್ವಚ್ಛವಾದ ಚಾಕುವನ್ನು ತೆಗೆದುಕೊಳ್ಳಿ ಅದನ್ನು ಆ ಮಿಶ್ರಣದಲ್ಲಿ ಮೊಳಗಿಸಿ ಅದು ಕೆಂಪು ಬಣ್ಣ ಕಂಡುಬಂದರೆ. ಅದಕ್ಕೆ ಇನ್ನಷ್ಟು ಸುಣ್ಣ ವನ್ನು ಹಾಕಿರಿ,ಅಥವಾ ಅದು ತಿಳಿನೀಲಿ ಬಣ್ಣದ ಆಗಿದ್ದರೆ, ಅದು ಬೋರ್ಡೋ ಮಿಶ್ರಣ ಸರಿಯಾಗಿದೆ ಎಂದರ್ಥ. ಇದಕ್ಕೆ ಪ್ಲಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸುವುದು ಒಳ್ಳೆಯದು.

ಉಪಯೋಗಗಳು

* ಹಲವಾರು ಬೆಳೆಗಳಲ್ಲಿ ಬೂದಿ ರೋಗ ನಿಯಂತ್ರಣ ಮಾಡುತ್ತದೆ. ಉದಾಹರಣೆಗೆ - ದ್ರಾಕ್ಷಿಯಲ್ಲಿ ಬರುವ ಬೂದಿ ರೋಗದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

* ಡೌನೀ  ಮಿಲ್ಡ್ ವ  ಅಥವಾ ಬಯಲು ಮೇಲಿನ ಸಿಲಿಂದ್ರ ಸಹ ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು.

* ಆಲೂಗಡ್ಡೆಯಲ್ಲಿ ಎಲೆಚುಕ್ಕೆ ರೋಗ ಸಹ ನಿಯಂತ್ರಣ ಮಾಡಬಹುದು.

* ಪೀಚ್ ಹಣ್ಣಿನ ಗಿಡದಲ್ಲಿ ಮುಟುರು ರೋಗವನ್ನು ಸಹ ಇದರಿಂದ ನಿಯಂತ್ರಣ ಮಾಡಬಹುದು.

* ಸೇಬು ಗಿಡದಲ್ಲಿ ಹುರುಪು ರೋಗ ಅಥವಾ ಸೇಬಿನ ಹಣ್ಣಿನ ಮೇಲೆ ಕಾಡಿಗೆ ರೋಗ ವನ್ನು ಸಹ ಇದರಿಂದ ನಿಯಂತ್ರಣ ಮಾಡಬಹುದು.

ಸೂಚನೆಗಳು:

 ಇದರಲ್ಲಿ ಮೈಲುತುತ್ತ ಅಂದರೆ ಕಾಪರ್ ಸಲ್ಫೇಟ್ ಮತ್ತು ಬೋರ್ಡೋ ಮಿಕ್ಸರ್ ಮನೆಯಲ್ಲಿ ತಯಾರಿಸಿ ಉಪಯೋಗಿಸುವುದಕ್ಕಿಂತ ಮುಂಚೆ ತಮ್ಮ ಹತ್ತಿರದ ಕೃಷಿ ತಜ್ಞರಿಗೆ ಕೇಳಿ ನಂತರ ಬಳಸುವುದು ಉತ್ತಮ.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ