Agripedia

ಜೇನುಹುಳುಗಳು ಪರಾಗಸ್ಪರ್ಶದೊಂದಿಗೆ ಪೀಡೆನಾಶಕವಾಗಿಯೂ ಕೆಲಸ ಮಾಡುತ್ತದೆ ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ

04 January, 2021 11:53 AM IST By:
Honey bee

ಜೇನುಹುಳುಗಳು ಪ್ರಕೃತಿಯ ಹಾಗೂ ಕೃಷಿಯ ಒಂದು ಮುಖ್ಯವಾದ ಅಂಗಗವಾಗಿವೆ. ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಹೇಳುವಂತೆ ಯಾವಾಗ ಜೇನುಹುಳುಗಳು ಭೂಮಿಯಿಂದ ನಶಿಸುತ್ತವೆಯೋ,ಅಂದಿನಿಂದ ಕೇವಲನಾಲ್ಕು ವರ್ಷಗಳವರೆಗೆ ಮಾತ್ರ ಮಾನವನು ಬದುಕಬಲ್ಲ. ಇದು ಅವುಗಳ ಮಹತ್ವ ತಿಳಿಸುತ್ತದೆ. ಜೇನು ಹುಳುಗಳು ಕೇವಲ ಪರಾಗ ಸ್ಪರ್ಶ ಕ್ರಿಯೆಯಲ್ಲದೆ, ಪೀಡೆನಾಶಕವಾಗಿಯೂ ಕೆಲಸ ಮಾಡುತ್ತಿವೆ.

ಹೌದು ಇತ್ತೀಚೆಗೆ ಅಮೆರಿಕದ ಮಾರುಕಟ್ಟೆಯಲ್ಲಿ ಮೊದಲ ಜೇನುಹುಳು ಆಧಾರಿತ ಪೀಡೆ ನಾಶಕವನ್ನು ENVIRONMENTALPROTECTION AGENCY, US ನವರು ಬಿಡುಗಡೆಗೊಳಿಸಿದ್ದಾರೆ. ಇದು ಒಂದು ಶಿಲೀಂಧ್ರನಾಶಕವಾಗಿದ್ದು, ಮಾರುಕಟ್ಟೆಯಲ್ಲಿ ವೆಕ್ಟೋರೈಟ್ (vectorite) ಎಂಬ ಹೆಸರಿನಿಂದ ಲಭ್ಯವಿದೆ. ಇದರಲ್ಲಿ , Clonostachysrosea( CR – 7 ) ಎಂಬ ಶಿಲೀಂಧ್ರದ ಬೀಜಕಗಳಿದ್ದು (SPORES) ಇದು ಬೆಳೆಗಳನ್ನು ಭಾದಿಸುವ ಹಲವಾರು ರೋಗಗಳಾದ ಕೊಳೆರೋಗ , ಬೂದುರೋಗ, ಮುಂತಾದವುಗಳನ್ನು ತಡೆಗಟ್ಟುತ್ತದೆ .ಇದು ಅಲ್ಲಿನ ವಾಣಿಜ್ಯಬೆಳೆಗಳಾದ ಸ್ಟ್ರಾಬೆರಿ, ಬಾದಾಮಿ, ಟೊಮೆಟೊಬೆಳೆಗಳಲ್ಲಿ ಉಪಯೋಗಕ್ಕೆ ಅಂಗೀಕಾರಗೊಂಡಿದೆ.ರೈತರು ತಮ್ಮಬೆಳೆಗಳ ಇಳುವರಿಯನ್ನು ದ್ವಿಗುಣ ಗೊಳಿಸಲು ಜೇನುಹುಳು ಹಾಗೂ ಭ್ರಮರ ( ಗುಂಗಿ ಹುಳು) ಮುಂತಾದವುಗಳನ್ನು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಕಾರ್ಯವೈಖರಿಯ ವಿಧಾನ :

ಜೇನುನೊಣಗಳುತಮ್ಮ ಚಟುವಟಿಕೆಯನ್ನು ಪ್ರಾರಂಭಿಸುವಮೊದಲು, ಅವುಗಳಪೆಟ್ಟಿಗೆಗಳ ಅಥವಾಅವುಗಳು ಹಾದು ಹೋಗುವ ಮಾರ್ಗದಲ್ಲಿ vectorite ( CR- 7) ಹೊಂದಿರುವ ಪುಡಿಯನ್ನುಇಟ್ಟಿರುತ್ತಾರೆ, ಹುಳುಗಳು ಆಪೆಟ್ಟಿಗೆಯ ಮುಖಾಂತರ ಹಾದು ಹೋದಂತೆ ಶಿಲೀಂಧ್ರನಾಶಕವು ಅವುಗಳ ದೇಹದ ಭಾಗಗಳಿಗೆ ಅಂಟಿಕೊಳ್ಳುತ್ತದೆ.

ಹೀಗೆ ಅಂಟಿಕೊಂಡನಂತರ ಅವುಗಳು ಹೂವಿಗೆ ಭೇಟಿ ನೀಡಿ ಮಕರಂದ ಹೀರುವ ಸಮಯದಲ್ಲಿ ಈ ಒಂದು ಶಿಲೀಂಧ್ರವು ಹೂವಿಗೆ ಅಂಟಿಕೊಂಡು ನೈಸರ್ಗಿಕವಾಗಿ ಬೆಳೆಯನ್ನು ರೋಗಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಮೊಜೆಂಟಿ ಜೇನು ಸಾಕಾಣಿಕೆ ಮಾಡಿ ಇಳುವರಿಯೂ ಹೆಚ್ಚಿಸಿಕೊಂಡಿದ್ದಾರೆ ವೆಂಕಟಕೃಷ್ಣ ಭಟ್

ಹಾಗೂ ಜೇನುಹುಳುಗಳು ಯಾವಾಗಲೂ ಹೊಸದಾಗಿ ಅರಳಿದ ಹೂವುಗಳ ಕಡೆಗೆ ಆಕರ್ಷಿತವಾಗುತ್ತವೆ. ಇದರಿಂದ ಶಿಲೀಂಧ್ರನಾಶಕವು ವ್ಯರ್ಥವಾಗದಂತೆ ಮತ್ತು ಅದರ ಸಾಮರ್ಥ್ಯಹೆಚ್ಚುತ್ತದೆ.

ಯಾವುದೇ ಒಂದು ಕೀಟ/ಶಿಲೀಂಧ್ರನಾಶಕವು ಸರಿಯಾಗಿ ಕೆಲಸ ಮಾಡಬೇಕಾದರೆ ಅದು ಸರಿಯಾದಜಾಗಕ್ಕೆ ಸರಿಯಾದ ಪ್ರಮಾಣದಲ್ಲಿ ಬಳಸಬೇಕು ಅದು ಇದರಿಂದ ಸಾಧ್ಯವಿದೆ.[ Victorite] ನ ಸರಿಯಾದ ಪ್ರಮಾಣ 4.6 ಪೌಂಡನಸ್ಟುಹಾಗೂ ಜೇನುಹುಳುಗಳು ಪ್ರತಿ ಗಿಡಕ್ಕೆ 4.5 ಪೌಂಡ್ನಸ್ಟು ತಲುಪಿಸುತ್ತವೆ ಎನ್ನುತ್ತಾರೆ, ವಿಜ್ಞಾನಿಲಬ್ಬೇ.

ಹಾಗೂ ಇದರಿಂದ ಜೇನು ಹುಳುಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಮತ್ತು ಇದರಿಂದ ಶಿಲೀಂಧ್ರ/ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಮನುಷ್ಯರ ಮೇಲಾಗುವ ದುಷ್ಪರಿಣಾಮಗಳನ್ನು ತಗ್ಗಿಸಬಹುದು ಎನ್ನುತ್ತಾರೆ ಸಂಶೋಧಕರು .

 ಈ ವಿಧಾನದಲ್ಲಿ ರೋಗವು ಬೆಳೆಗಳ ಹೂಬಿಡುವ ಸಮಯದ ನಂತರ ಭಾದಿಸಿದರೆ ಇದು ಅನುಪಯುಕ್ತವಾಗುತ್ತದೆ.ಹಾಗೂ ಇದೊಂದು ಜೈವಿಕಶಿಲೀಂಧ್ರ ನಾಶಕ ಆಗಿರುವುದರಿಂದ ಅವುಗಳು ಕೆಲವು ಪರಿಸರ/ವಾತಾವರಣದಲ್ಲಿ ಮಾತ್ರ ಪರಿಣಾಮಕಾರಿಯಾಗಿರುವುದರಿಂದ ರೋಗವನ್ನುನಿಯಂತ್ರಿಸುವಲ್ಲಿ ವಿಫಲವಾಗುತ್ತದೆ.ಏನೇ ಆಗಲಿ ಹೀಗೆ ಹಲವು ತಂತ್ರಜ್ಞಾನಗಳು ಭವಿಷ್ಯದಲ್ಲಿ ದೊರೆತ್ತದೆ ಆದರೆ ಕೃಷಿರಂಗದಲ್ಲಿ ಕ್ರಾಂತಿಯನ್ನುಂಟು ಮಾಡಬಲ್ಲದು.

ಲೇಖನ: ಆತ್ಮಾನಂದ ಹೈಗರ್