Agripedia

ಗೊಣ್ಣಿ ಕೀಟ ಬಾಧೆ: ಸಂಕಷ್ಟದಲ್ಲಿ ಗದಗ ರೈತರು

16 December, 2022 10:50 AM IST By: Maltesh

ಮುಂಡರಗಿ/ಡಂಬಳ: ಹಿಂಗಾರು ಹಾಗೂ ನೀರಾವರಿ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದ್ದು, ಬಿತ್ತದ ಮಕ್ಕೆಜೋಳ ಬೆಳೆಗೆ ಗೊಣ್ಣಿ ಹುಳು ಕಾಟ ಒಂದಡೆಯಾದರೆ ಕಪ್ಪತ್ತಗುಡ್ಡ ಅಂಚಿನಲ್ಲಿರುವ ಜಮೀನಿಗೆ ಕಾಡು ಹಂದಿಗಳು ಹಿಂಡು ಜಮೀನಿಗೆ ಲಗ್ಗೆಯಿಟ್ಟು ಬೆಳೆಗಳನ್ನು ಹಾಳು ಮಾಡುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

Top News |ಆಫೀಸ್‌ ಮುಂದೆ ಎತ್ತು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ‌ರೈತನಿಗೆ ಬಿತ್ತು ಭಾರೀ ದಂಡ

ಮುಂಡರಗಿ ಹಾಗೂ ಡಂಬಳ ಹೋಬಳಿಯ ರೈತರು ಖುಷ್ಕಿ ಜಮೀನಿನಲ್ಲಿ 2868 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಒಂದೂವರೆ ತಿಂಗಳ ಬೆಳೆ ಗೊಣ್ಣಿ ಕೀಟ ಬಾಧೆಗೆ ಸಿಕ್ಕು ನಲುಗಿದೆ. ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ವಿಷಕಾರಿ ಕೀಟ:

ಮೆಕ್ಕೆಜೋಳ ಬೆಳೆಯಲ್ಲಿ ಕಾಣಿಸಿಕೊಂಡಿರುವ ಗೊಣ್ಣಿ ಹುಳು ವಿಷಕಾರಿ ಕೀಟವಾಗಿದೆ. ಸಸಿ ಸುಳಿಯಲ್ಲಿ ಮೇಯುತ್ತಾ ಅಲ್ಲೇ ವಿಸರ್ಜಿಸುತ್ತಿದೆ. ಇದರಿಂದ ಬೆಳೆ ಕೊಳೆಯುತ್ತದೆ. ಸಾಲ ಸೂಲ ಮಾಡಿ ರೈತರು ಬೆಳೆದ ಮೆಕ್ಕೆಜೋಳ ಕೀಟ ಬಾಧೆಗೆ ಹಾಳಾಗುತ್ತಿದೆ. ಕ್ರಿಮಿನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ರೈತರ ಅಳಲು.

ಜಮೀನಿಲನಲ್ಲೆ ಮೊಳಕೆಯೊಡೆಯುತ್ತಿದೆ ಶೇಂಗಾ.!

ಭಾನುವಾರ ಅಕಾಲಿಕ ಸುರಿದ ಮಳೆಗೆ ಕಟಾವು ಮಾಡಿರುವ ಬಿಟ್ಟಿರುವ  ಶೇಂಗಾ ಬೆಳೆ ಜಮೀನಿನಲ್ಲೇ ಮೊಳೆಕೆಯೊಡೆಯುವ  ಸಂಭವ ನಿರ್ಮಾಣವಾಗಿದೆ. ಇದರಿಂದ ರೈತರಲ್ಲಿ ಆತಂಕ ಮೂಡಿಸಿದೆ.

Top News : ಇನ್ಮುಂದೆ 4 ಕಂತುಗಳಲ್ಲಿ ಪಿಎಂ ಕಿಸಾನ್‌ ಹಣ?

ಡಂಬಳ ವ್ಯಾಪ್ತಿಯ ಡೋಣಿ, ಹಿರೇವಡ್ಡಟ್ಟಿ, ಹಾರೋಗೇರಿ, ಮುರಡಿ, ಡೋಣಿತಾಂಡ, ಅತ್ತಿಕಟ್ಟಿ, ಚಿಕ್ಕವಡ್ಡಟ್ಟಿ ಸೇರಿದಂತೆ ಮಸಾರಿ ಭೂಮಿ ಹೊಂದಿರುವ ರೈತರು ಮುಂಗಾರು ಹಂಗಾಮಿನಲ್ಲಿ ಈ ಭಾಗದ ನೂರಾರು ರೈತರು ಶೇಂಗಾ ಬಿತ್ತನೆ ಮಾಡಿದರು, ಫಸಲು ಕೂಡಾ ಉತ್ತಮ ಬಂದಿತ್ತು. ಕಳೆದ ಒಂದು ವಾರದ ಹಿಂದೇ ಬೆಳೆಗಳನ್ನು ರೈತರು ಕಟಾವು ಮಾಡಿ ಜಮೀನಿನಲ್ಲಿ ಬಿಟ್ಟಿದ್ದಾರೆ.

ಇನ್ನೂ ಕೆಲವು ರೈತು ಬೆಳೆಗಳನ್ನು ಕೊಡಿ ಹಾಕಿದ್ದಾರೆ. ಈ ಮಳೆಗೆ ಅವುಗಳನ್ನು ಸಂರಕ್ಷಣೆ ಮಾಡಲು ಪ್ಲಾಸ್ಟಿಕ್ ತಾಡಪತ್ರಿ ಹೊದಿಕೆ ಮಾಡಲಾಗುತ್ತದೆ. ಆದರೂ ಶೇಂಗಾ ಹೊಟ್ಟು ಕೊಳೆಯುತ್ತಿದೆ ಹೀಗಾಗಿ ಕೈಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.

ಶೇಂಗಾ ಹರಗು ಸಂದರ್ಭದಲ್ಲಿ ಅದರ ಕಾಯಿಗಳು ಬಳ್ಳಿಯಿಂದ ಹರಿದು ಭೂಮಿಯಲ್ಲೇ ಉಳಿದುಕೊಂಡಿರುತ್ತವೆ. ಸಧ್ಯ ಅವುಗಳು ಈ ಮಳೆಗೆ ಮೊಳೆಕೆಯೊಡೆದು ಕೊಳೆಯಲಾರಂಭಿಸುತ್ತವೆ ಇದರಿಂದಾಗಿ ಮುಂಬರುವ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಕಾಡುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಬಿತ್ತನೆ ಖರ್ಚು ಕೂಡಾ ಹೊರೆ :

ಈ ಅಕಾಲಿಕವಾಗಿ ಸುರಿಯುತ್ತಿರುವ ಮಳೆಗೆ ಶೇಂಗಾ ಹೊಟ್ಟು ಮಳೆಗೆ ಸಿಕ್ಕು ಜಾನುವಾರು ಮೇಯಲು ಬಾರದಂತೆ ಆಗುತ್ತೆ ಎಂಬುವುದು ರೈತರ ಅಳಲು.