Agripedia

ಮೀನು ಟಾನಿಕ್ ಉತ್ತಮ ಪೌಷ್ಠಿಕಾಂಶ ನೀಡುವ ಗೊಬ್ಬರ

19 December, 2020 7:10 AM IST By:

ಮೀನು ಮನುಷ್ಯನಿಗಷ್ಟೇ ಆಹಾರವಲ್ಲ, ಬೆಳೆಯುವ ಬೆಳೆಗಳಿಗೂ ಉತ್ತಮ ಪೌಷ್ಠಿಕಾಂಶ ನೀಡುವ ಗೊಬ್ಬರ.ಮೀನಿನ ತ್ಯಾಜ್ಯದಿಂದ ಕಡಿಮೆ ಖರ್ಚಿನಲ್ಲಿ ಬೆಳೆ ಪ್ರಚೋದಕ ತಯಾರಿಸಿಕೊಳ್ಳಬಹುದು. ಮೀನಿನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ದುರ್ವಾಸನೆಗೆಕಾರಣವಾಗುವ ಬದಲು ಈ ರೀತಿ ಸದುಪಯೋಗ ಪಡೆಸಿಕೊಳ್ಳಬಹುದು.

ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

* 1 ಕೆಜಿ ಮೀನು

 *1 ಕೆಜಿ ಕಪ್ಪು ಬೆಲ್ಲ

ತಯಾರಿಸುವ ವಿಧಾನ:

 ಮೊದಲಿಗೆ 1ಕೆಜಿ ಮೀನು ತೆಗೆದುಕೊಂಡು ನಾವು ಸಣ್ಣ,ಚಿಕ್ಕ, ಚಿಕ್ಕ ತುಂಡುಗಳಾಗಿ ಮಾಡಬೇಕು. ನಂತರ ಆ ಮೀನಿನ ತುಂಡುಗಳನ್ನು  1ಕೆಜಿ ನಾಟಿ ಬೆಲ್ಲದೊಂದಿಗೆ ಸೇರಿಸಬೇಕು. ನಾಟಿ ಬೆಲ್ಲ ಎಂದರೆ ಕಪ್ಪು ಬೆಲ್ಲ ಎಂದರ್ಥ, ನಂತರ ಇವುಗಳ ಮಿಶ್ರಣವನ್ನು ಮೂರು ವಾರಗಳ ಕಾಲ ಡಬ್ಬಿಯಲ್ಲಿ ಹಾಕಿ ತೆಗೆದಿಡಬೇಕು. ನಂತರ ನಮಗೆ ಸಿಗುವುದೇ ನೀನು ಟಾನಿಕ್.

ಇದನ್ನೂ ಓದಿ:ಮನೆಯಲ್ಲಿರುವ ಹುಳಿಮಜ್ಜಿಗೆಯಿಂದಲೇ ಬೆಳೆಗಳ ರೋಗ ನಿಯಂತ್ರಣ

ಉಪಯೋಗಗಳು:

* ಈ ಮೀನು ಟಾನಿಕ್ ಒಂದು ಲೀಟರ್ ಮಿಶ್ರಣವನ್ನು 10 ಲೀಟರ್ ನೀರಿನಲ್ಲಿ ಹಾಕಿ ಸಿಂಪರಣೆ ಮಾಡಬಹುದು.

* ಇದು ಕೂಡ ಒಂದು ಸಸ್ಯ ಪ್ರಚೋದಕವಾಗಿಯೂ ಕೆಲಸ ಮಾಡುತ್ತದೆ.

* ಇದು ಒಂದು ಹೂ ಉದುರುವಿಕೆ ನಿಯಂತ್ರಿಸುತ್ತದೆ.

* ಬೆಳೆಗಳಿಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.

 ಸೂಚನೆ: ಮೀನು ಟಾನಿಕ್ ಮತ್ತು ಅಮೃತಪಾನ ಉಪಯೋಗಿಸುವ ಕ್ಕಿಂತ ಮೊದಲು ತಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದ ಭೇಟಿ ನೀಡಿ ಕೃಷಿ ತಜ್ಞರನ್ನು ಕೇಳಿ ನಂತರ ಇವುಗಳನ್ನು ಬಳಸುವುದು ಉತ್ತಮ.

 ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ