ಅಡುಗೆ ಎಣ್ಣೆಗಳಾದ ಪಾಮ್,ಶೇಂಗಾ,ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ,ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಮುರುಟು ರೋಗ,ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು.ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಿ ಹೆಚ್ಚು ಇಳುವರಿ ಪಡೆಯಬಹುದೆಂದು ಇತ್ತೀಚೆಗೆ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿತ್ತು.
ಹೌದೂ, ಬಿಸಿಲನಾಡು ರಾಯಚೂರು ಜಿಲ್ಲೆಯ ರೈತರು ಅಡುಗೆಎಣ್ಣೆ ಮತ್ತು ಮೊಟ್ಟೆ ಮಿಶ್ರಣ ಮಾಡಿ ಬಂಪರ್ ಬೆಳೆ ತೆಗೆದಿದ್ದರು. ಇದರ ಹಿಂದಿರುವ ವೈಜ್ಞಾನಿಕ ಗುಟ್ಟು ಏನೆಂಬುದನ್ನು ತಿಳಿಯಲು ಈ ಮುಂದಿನ ಮಾಹಿತಿ ಓದಿ.
ಮುಖ್ಯವಾಗಿ ನಾವು ಬಳಸುವಂತಹ ಎಣ್ಣೆ ಹಾಗೂ ಮೊಟ್ಟೆಯ ಮಿಶ್ರಣ ಸಾವಯವ ಕೃಷಿಯಲ್ಲಿ ಒಂದು ಅದ್ಭುತವಾದಂತಹ ಫಲಿತಾಂಶವನ್ನು ನಮಗೆ ನೀಡುತ್ತದೆ, ಈ ಮಿಶ್ರಣವು ಕೀಟಗಳ ನಿಯಂತ್ರಣದಲ್ಲಿ ಮುಖ್ಯಪಾತ್ರವಹಿಸುತ್ತದೆ ಹಾಗೂ ಮೊಟ್ಟೆಯಲ್ಲಿ ಇರುವಂತಹ ಅಂಶಗಳು ಬೆಳೆಗಳಿಗೆ ಬೇಕಾದಂತ ಅಲ್ಪ ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತವೆ.
ಅಡುಗೆ ಎಣ್ಣೆ ಹಿಂದಿನ ಮಹತ್ವ:
-ತೈಲಗಳು ಕೀಟಗಳು ಮತ್ತು ಹುಳಗಳನ್ನು ಕೊಲ್ಲುವ ಪ್ರಾಥಮಿಕ ವಿಧಾನವೆಂದರೆ ಉಸಿರುಗಟ್ಟಿಸುವಿಕೆಯಿಂದ. ಸ್ಪಿರಾಕಲ್ಸ್ ಎಂಬ ರಚನೆಗಳ ಮೂಲಕ ಕೀಟಗಳು ಉಸಿರಾಡುತ್ತವೆ. ತೈಲಗಳು ಸ್ಪಿರಾಕಲ್‌ಗಳನ್ನು ನಿರ್ಬಂಧಿಸುತ್ತವೆ, ಆಮ್ಲಜನಕದ ಲಭ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿವಿಧ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ.
-ಕೀಟದ ಮೊಟ್ಟೆಗಳಿಗೆ ಅನ್ವಯಿಸಿದಾಗ, ತೈಲಗಳು ಚಿಪ್ಪುಗಳನ್ನು ಭೇದಿಸಿ ಅಭಿವೃದ್ಧಿ ಹೊಂದುತ್ತಿರುವ ಭ್ರೂಣವನ್ನು ಕೊಲ್ಲುತ್ತವೆ.
-ತೈಲಗಳು ಕೆಲವು ಸಂದರ್ಭಗಳಲ್ಲಿ ನಿವಾರಕವಾಗಿ ಕಾರ್ಯನಿರ್ವಹಿಸಬಹುದು, ವಿಶೇಷವಾಗಿ ಸಸ್ಯ ಆಧಾರಿತ ಎಣ್ಣೆಗಳೊಂದಿಗೆ, ಮತ್ತು ಬೇವಿನ ಎಣ್ಣೆಯಂತಹ ಕೆಲವು ತೈಲಗಳು ಆಹಾರ ವಿರೋಧಿ ಗುಣಗಳನ್ನು ಹೊಂದಿವೆ.
ಸೂಕ್ಷ್ಮ ಶಿಲೀಂಧ್ರದಂತಹ ಕೆಲವು ಎಲೆಗಳ ರೋಗಗಳನ್ನು ನಿರ್ವಹಿಸಲು, ತೈಲಗಳು ತಡೆಗಟ್ಟುವ ಮತ್ತು ಗುಣಪಡಿಸುವ ಶಿಲೀಂಧ್ರನಾಶಕವಾಗಿ ಕಾರ್ಯನಿರ್ವಹಿಸುತ್ತವೆ, ಶಿಲೀಂಧ್ರಗಳ ಬೆಳವಣಿಗೆಯನ್ನು ನಿಯಂತ್ರಣ ಮಾಡುತ್ತದೆ ಮತ್ತು ಬೀಜಕ ಉತ್ಪಾದನೆಯನ್ನು ತಡೆಯುತ್ತದೆ
-ಅಡುಗೆ ಎಣ್ಣೆ ಬೆಳೆಗಳ ಎಲೆಯ ಮೇಲೆ ಒಂದು ಪದರವನ್ನು ರಚಿಸುತ್ತವೆ ಇದರ ಮೂಲಕ ಎಳೆಗಳ ಮೇಲೆ ಕೀಟಗಳು ತತ್ತಿ ಇಟ್ಟಾಗ ಅವು ಜರಿದು ಬೀಳುತ್ತವೆ ಅಥವಾ ಅವುಗಳು ಮರಿಯಾಗಲು ಸೂಕ್ತ ವಾತಾವರಣವಿರುವುದಿಲ್ಲ.
-ಒಂದು ವೇಳೆ ನಾವು ಎಣ್ಣೆ ಹೊಡೆಯುವ ಮುಂಚೆಯೇ ಕೀಟಗಳು ತತ್ತಿಯನ್ನು ಇಟ್ಟಿದ್ದರೆ ಎಣ್ಣೆಯು egg hatching inhibitor ಆಗಿ ಕಾರ್ಯ ನಿರ್ವಹಿಸುತ್ತದೆ.
ಮೊಟ್ಟೆಯ ಉಪಯೋಗ :
-ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಸಸ್ಯಗಳಿಗೆ, ವಿಶೇಷವಾಗಿ ತರಕಾರಿಗಳು ಮತ್ತು ಹಣ್ಣುಗಳಿಗೆ ಇದು ಪ್ರಮುಖ ಪೋಷಕಾಂಶವಾಗಿದೆ. ಮಿಶ್ರಗೊಬ್ಬರದ ಸಮಯದಲ್ಲಿ ಮೊಟ್ಟೆಗಳು ಕ್ಯಾಲ್ಸಿಯಂ ಅನ್ನು ಬೇರುಕಾಂಡಕ್ಕೆ ತೆಗೆದುಕೊಳ್ಳುತ್ತವೆ, ಇದು ಹೂವು ಅಂತ್ಯ ಕೊಳೆತದಂತಹ ಸಮಸ್ಯೆಗಳನ್ನು ಜಯಿಸುತ್ತದೆ.
-ಈ ದ್ರಾವಣವು ಬೆಳೆಗಳಿಗೆ ಪೌಷ್ಟಿಕವಾಗಿದೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ