Agripedia

ತೊಗರಿ ಹೂವು ಉದರುವಿಕೆ ತಡೆಯಲು ರೈತರಿಗೆ ಕೃಷಿ ತಜ್ಞರ ಸಲಹೆ

28 October, 2020 6:56 PM IST By:

ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ತೊಗರಿ ಹೊಲಗಳಲ್ಲಿ ನೀರು ನಿಂತು ಆತಂಕ ಸೃಷ್ಟಿಸಿದ್ದು, ಕಲಬುರಗಿ ಜಿಲ್ಲೆಯ ತೊಗರಿ ಬೆಳೆದ ರೈತರು ಮುಂಜಾವಿನ ಮಂಜುನಿಂದಾಗಿ ತೊಗರಿ ಹೂವು, ಮೊಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದರದಂತೆ ಜಾಗೃತೆವಹಿಸಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಸದ್ಯ ತೊಗರಿ ಬೆಳೆಯು ಮೊಗ್ಗು ಹಾಗೂ ಹೂವಾಡುವ ಹಂತದಲ್ಲಿದ್ದು, ಮುಂಜಾವಿನ ಮಂಜಿನ ವಾತಾವರಣದಿಂದಾಗಿ ಎಲೆ ದೇಟು ಹಾಗೂ ಹೂವಿನ ಮೇಲೆ ಸಣ್ಣ ದುಂಡಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಇದರಿಂದ ಮೊಗ್ಗು ಮತ್ತು ಹೂವು ಉದುರುವಿಕೆ ಅಲ್ಲಲ್ಲಿ ಸ್ಥಳೀಯವಾಗಿ ಕಂಡು ಬರುತ್ತಿದೆ. ವಾತಾವರಣದ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಿಸ್‍ಗಿಂತ ಕಡಿಮೆ ಇದ್ದು. ಮೋಡ ಕವಿದ ವಾತಾವರಣ ಮತ್ತು ಇವುಗಳಿಗೆ ಪೂರಕವಾಗಿ ತುಂತುರು ಮಳೆ ಮುಂಜಾವಿನ ಮಂಜುವಿನಿಂದ ರೋಗದ ಭಾದೆ ಉಲ್ಬಣವಾಗಿ ಹರುಡುತ್ತದೆ.

ಈ ತರಹದ ರೋಗದ ಚಿಹ್ನೆಗಳು ಕಂಡು ಬಂದಾಗ ತೊಗರಿ ಬೆಳೆದ ರೈತರು ಪ್ರತಿ ಲೀಟರ್ ನೀರಿನಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಬೆರೆಸಿ ಸಿಂಪಡಿಸಿಬೇಕು. ತೊಗರಿಯಲ್ಲಿ ಹೂ ಉದುರುವಿಕೆ ನಿಲ್ಲಿಸಲು ರೈತರು ಪ್ರತಿ ಎಕರೆಗೆ ಪಲ್ಸಮ್ಯಾಜಿಕ್ 2 ಕೆ.ಜಿ.ಯನ್ನು 200  ಲೀ. ನೀರಿನ ಬ್ಯಾರಲ್‍ನಲ್ಲಿ ಕಲಿಸಿ ಸಿಂಪಡಿಸಬೇಕು.

      ಭೂಮಿಯ ತೇವಾಂಶ ರೋಗದ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಚಳಿಯ ಅಂಶ ಹೆಚ್ಚಾದಲ್ಲಿ ಮಾತ್ರ ಹೊಸ ಮೊಗ್ಗು ಮತ್ತು ಹೂಗಳು ಹುಟ್ಟುವ ಪ್ರಕ್ರಿಯೆ ಉತ್ತಮವಾಗಬಹುದೆಂದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.