ದಾಳಿಂಬೆಯ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ, ರಾಜಸ್ಥಾನ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಂಜಾಬ ಮತ್ತು ಹರಿಯಾಣಾದಲ್ಲಿ ಅಲ್ಪ ಪ್ರಮಾಣದಲ್ಲಿ ಕಾಣಬಹುದು.
ದಾಳಿಂಬೆಯ ಪ್ರಮುಖವಾದ ತಳಿಗಳೆಂದರೆ ಆಳಂದಿ, ಢೋಲ್ಕಾ, ಕಂಧಾರಿ, ಕಾಬೂಲ್, ಮುಸ್ಕಾತಿ ಕೆಂಪು, ಸ್ಪ್ಯಾನಿಷ್ ರುಬಿ, ಗಣೇಶ, ಜಿ 137. ಪಿ23, ಪಿ26, ಮೃದುಲಾ, ಅರಕ್ತಾ, ಜ್ಯೋತಿ, ರುಬಿ, ಯರಕೋಡ ಮತ್ತು ಕೋ.1. ಭಾರತವು ದಾಳಿಂಬೆಯನ್ನು ಬಹ್ರೇನ್, ಕುವೈತ್, ಓಮನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೆದರಲ್ಯಾಂಡ್ ದೇಶಗಳಿಗೆ ರಫ್ತು ಮಾಡುತ್ತದೆ.
ದಾಳಿಂಬೆ ಹಣ್ಣಿನ ರಫ್ತಿಗೆ ಇರುವ ಮಾನದಂಡಗಳು
ದಾಳಿಂಬೆ ಹಣ್ಣನ್ನು ಮಾರಾಟ ಮಾಡುವಾಗ ಬೇರೆ ಬೇರೆ ಆಮದುದಾರಿಗನುಗುಣವಾಗಿ ಗಾತ್ರ, ಬಣ್ಣ, ಪ್ಯಾಕಿಂಗಳನ್ನು ಅನುಸರಿಸಬೆಕಾಗುತ್ತದೆ. ಉದಾ: ಮಧ್ಯ ಪ್ರಾಚ್ಯ ದೇಶಗಳಿಗೆ ಹಣ್ಣಿನ ಗಾತ್ರ 300-450 ಗ್ರಾಂ ಇದ್ದು ಕೆಂಪು ಬಣ್ಣದ್ದಾಗಿರಬೇಕು. ಹಾಲೆಂಡ್ ಮತ್ತು ಇಂಗ್ಲೆಂಡ್ ದೇಶಗಳಿಗೆ ಕಳುಹಿಸಬೇಕಾದರೆ ಹಣ್ಣಿನ ಗಾತ್ರ 250-300ಗ್ರಾಂ ಇದ್ದು ಕೆಂಪು ಬಣ್ಣದ್ದಾಗಿರಬೇಕು. 5ಕೆಜಿ ಪ್ಯಾಕನಲ್ಲಿ 50ಲಿಸೆನಲ್ಲಿ ಶೀತಲಿಕರಿಸಿ ಕಾಪಾಡಿಕೊಂಡು ಹಣ್ಣನ್ನು ರಫ್ತು ಮಾಡಬೇಕಾಗುತ್ತದೆ.
ದಾಳಿಂಬೆ ಬೆಳೆಯ ಅಂತರಾಷ್ಟ್ರೀಯ ರಫ್ತು ಗುಣಮಟ್ಟಗಳು
ತಳಿಗಳು |
ಮಧ್ಯಪೂರ್ವ |
ನೆದರ್‍ಲ್ಯಾಂಡ್ |
ಯುಕೆ/ಜರ್ಮನಿ |
ಗಣೇಶ |
ತೂಕ300-450ಗ್ರಾಂ |
250-300 ಗ್ರಾಂ |
250-300 ಗ್ರಾಂ |
|
ಬಣ್ಣ: ಕೆಂಪು |
ಬಣ್ಣ: ಕೆಂಪು |
ಬಣ್ಣ: ಕೆಂಪು |
ಭಗವಾ/ಆರಕ್ತಾ/ಮೃದುಲಾ |
ತೂಕ:200-250 |
ತೂಕ:200-250 |
ತೂಕ:200-250 |
|
ಬಣ್ಣ:ಕಡು ಕೆಂಪು |
ಬಣ್ಣ:ಕಡು ಕೆಂಪು |
ಬಣ್ಣ:ಕಡು ಕೆಂಪು |
ಪ್ಯಾಕಿಂಗ್ |
5 ಕೆಜಿ |
5 ಕೆಜಿ |
5 ಕೆಜಿ |
ಸಂಗ್ರಹಣಾ ಉಷ್ಣಾಂಶ |
5° |
5° |
5° |
ಸಾಗಾಣಿಕೆ |
ಸಮುದ್ರ ಮಾರ್ಗ |
ಸಮುದ್ರ ಮಾರ್ಗ |
ಸಮುದ್ರ ಮಾರ್ಗ |
ದಾಳಿಂಬೆ ಹಣ್ಣು ರಫ್ತು ಮಡುವಾಗ ಇರುವ ತೊಡಕುಗಳು:
ಗುಣಮಟ್ಟದಲ್ಲಿ ಅಸ್ಥಿರತೆ, ಸಣ್ಣ ಹಿಡುವಳಿದಾರರು ಎಸ್‍ಪಿಎಸ್ ಪ್ರಮಾಣ ಪತ್ರ ಪಡೆಯುವಲ್ಲಿ ಅಡಚಣೆಗಳೂ ಶೀತಲಿಕರಣದಲ್ಲಿ ವಿಳಂಬ ಮತ್ತು ಹೆಚ್ಚು ಖರ್ಚು, ಈ ಮಾದರಿಯ ಪೆಟ್ಟಿಗೆಗಳು ಸಮಯಕ್ಕೆ ಸರಿಯಾಗಿ ಸಿಗದೆ ಇರುವದು, ಹಾಳಾದ ರಸ್ತೆ ಮತ್ತು ಇದರಿಂದ ಕಂಟೇನರ್ ಸಾಗಾಣಿಕೆ ತೊಡಕು ಹೀಗೆ ದಾಳಿಂಬೆ ರಫ್ತು ಮಾಡುವಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲದರ ಜೊತೆಗೆ ದಾಳಿಂಬೆ ತೋಟದಲ್ಲಿ ಶೇ20ರಷ್ಟು ಮಾತ್ರ ರಫ್ತಿಗೆ ಸೂಕ್ತವಾಗಿರುವುದು ಮತ್ತೊಂದು ತೊಂದರೆಯಾಗಿದೆ.
ಭಾರತದಲ್ಲಿ ದಾಳಿಂಬೆ ಹಣ್ಣು ಎಲ್ಲಾ ಕಾಲದಲ್ಲಿಯೂ ದೊರೆಯುವದರಿಂದ ಅಂತರ್ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಒಳ್ಳೆಯ ಅವಕಾಶವಿದೆ. ಗಣೇಶ, ಅರಕ್ತ, ಮೃದುಲಾ, ರುಬಿ ಮತ್ತು ಭಗವಾ ತಳಿಗಳ ಹಣ್ಣುಗಳು ಗುಣಮಟ್ಟದಲ್ಲಿ ಉತ್ತಮವಾಗಿರುವದರಿಂದ ಅಂತರ್ದೇಶಿಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಅರಬ್ ದೇಶಗಳ ಒಕ್ಕೂಟ (ಯುಎಸ್), ಸೌದಿ ಅರೇಬಿಯಾ, ಬಾಂಗ್ಲಾದೇಶ, ಬಹ್ರೇನ್, ಕಥಾರ್ ಮತ್ತು ಕುವೈತ್ ದೇಶಗಳು ಈಗಾಗಲೇ ಭಾರತದ ದಾಳಿಂಬೆಯನ್ನು ಆಮದು ಮಾಡಿಕೊಳ್ಳುತ್ತವೆ. ಹೀಗಾಗಿ ದೇಶದಲ್ಲಿರುವ ವಿವಿಧ ತೋಟಗಾರಿಕಾ ಸಂಸ್ಥೆಗಳಿಂದ ರೈತರು ಸೌಲಭ್ಯಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಬೆಳೆ ಬೆಳೆದು ನಿಯಂತ್ರಿತ ಮಾರುಟ್ಟೆಗಳ ಮೂಲP Àಮಾರಾಟ ಮಾಡಿ ರೈತರು ಅಧಿಕ ಲಾಭ ಗಳಿಸಲಿ ಎಂಬುದು ನಮ್ಮ ಆಶಯ.
ಲೇಖಕರು: ಶಗುಪ್ತಾ ಅ ಶೇಖ