Agripedia

ಮತ್ತೆ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ: ಸೋಯಾ ಅವರೆ, ಹತ್ತಿ ಬೆಳೆಗಾರರ ಆತಂಕ

22 July, 2021 9:02 PM IST By:

15 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆ, ನಾಲ್ಕು ದಿನಗಳ ಹಿಂದೆ ನಿಂತAತೆ ಕಂಡರೂ, ಒಂದು ದಿನ ಮಾತ್ರ ಬಿಡುವು ನೀಡಿ, ಮತ್ತೆ ನಿರಂತರವಾಗಿ ಸುರಿಯಲಾರಂಭಿಸಿದೆ. ಬೆಂಗಳೂರಿನಿAದ ಆರಂಭವಾಗಿ ಕಲಬುರಗಿ ಜಿಲ್ಲೆಯವರೆಗೆ, ಇತ್ತ ಬಳ್ಳಾರಿಯಿಂದ ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರ ಜಿಲ್ಲೆಗಳವರೆಗೂ ಮಳೆ ವ್ಯಾಪಿಸಿದೆ.

ಈ ನಡುವೆ ಮಳೆಯು ಒಂದು ದಿನದ ಬಿಡುವು ಕೊಟ್ಟಿದ್ದರಿಂದ ಕೊಂಚ ನಿಟ್ಟುಸಿರುವ ಬಿಟ್ಟಿದ್ದ ರೈತರು, ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಸೋಯಾ ಅವರೆ ಹಾಗೂ ಮುಂಗಾರು ಹತ್ತಿ ಬಿತ್ತನೆ ಮಾಡಿರುವ ಕೃಷಿಕರು ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆಯು ಹೀಗೆ ಬಿಟ್ಟೂ ಬಿಡದಂತೆ ಸತತವಾಗಿ ಸುರಿಯುತ್ತಿದದ್ದರೆ ಜಮೀನುಗಳಲ್ಲಿ ನೀರು ನಿಂತು, ಬೆಳೆಗಳು ಹಾಳಾಗುತ್ತವೆ. ಹತ್ತಿ ಬೆಳೆಗೆ ಅತಿಯಾದ ಮಳೆ ಮಾರಕವಾಗಿದೆ. ಅದರಲ್ಲೂ ಬೇಸಿಗೆ ಹತ್ತಿ ಬೆಳೆಯಲ್ಲಿ ನೀರು ನಿಂತರೆ, ಬೇರು ಕೊಳೆಯಲಾರಂಭಿಸಿ ಸಂಪೂರ್ಣ ಬೆಳೆಯೇ ನಾಶವಾಗಿ ಹೋಗುತ್ತದೆ. ಹೀಗಾಗಿ ಸ್ವಲ್ಪ ದಿನ ಬಿಡುವು ತೆಗೆದುಕೊಳ್ಳುವಂತೆ ರೈತರು ಮಳೆರಾಯನನ್ನು ಬೇಡಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಮಧ್ಯ ಕರ್ನಾಟಕದ ಜಿಲ್ಲೆಗಳಾಗಿರುವ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕರ್ನಾಟಕದ ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಕೆಲ ತಾಲೂಕುಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತಲೂ ಹೆಚ್ಚಾಗಿದ್ದು, ಮೆಕ್ಕೆಜೋಳ ಮತ್ತಿತರ ಬೆಳೆಗಳು ನೀರಿನಲ್ಲಿ ಮುಚ್ಚಿಕೊಂಡು ಹೋಗಿವೆ. ದಾವಣಗೆರೆ ಜಿಲ್ಲೆಯ ಹಲವೆಡೆ ಮಳೆಯಿಂದಾಗಿ ಮನೆಗಳು ಕೂಡ ಕುಸಿದು ಬಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ 40 ಲಕ್ಷ ರೂ. ಮೌಲ್ಯದ ಬೆಳೆ, ಆಸ್ತಿ ಆನಿಗೀಡಾಗಿದೆ. ಇನ್ನೊಂದೆಡೆ 23 ಎಕರೆ ಮೆಕ್ಕೆಜೋಳ ಹಾಗೂ 3 ಎಕರೆ ಹತ್ತಿ ಬೆಳೆ ಮಳೆಗೆ ಆಹುತಿಯಾಗಿದೆ.

ದಾವಣಗೆರೆ, ಹಾವೇರಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೀದರ್, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ಸೋಯಾ ಅವರೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹಾಗೂ ಈ ಪೈಕಿ ಬಹುತೇಕ ಜಿಲ್ಲೆಗಳಲ್ಲಿ ಹತ್ತಿ ಕೂಡ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ, ಹದಿನೈದು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಎರಡೂ ಬೆಳೆಗಳು ಹಾಳಾಗುವ ಹಂತ ತಲುಪಿವೆ. ಹೀಗಾಗಿ ಮಳೆಯ ಪರಿಣಾಮದಿಂದ ಸೋಯಾ ಮತ್ತು ಹತ್ತಿ ಬೆಳೆಗಳನ್ನು ರಕ್ಷಿಸುವ ವಿಧಾನಗಳ ಕುರಿತು ನಿವೃತ್ತ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಆರ್.ಜಿ.ಗೊಲ್ಲರ್ ಅವರು ರೈತರಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

ಸೋಯಾ ಅವರೆ ಪೋಷಣೆಗೆ ಸಲಹೆ

* ಮಳೆಯಿಂದಾಗಿ ನಂಜು ರೋಗ ಬಾಧಿತ ಸಸ್ಯಗಳನ್ನು ಕಿತ್ತು ಸಂಗ್ರಹಿಸಿ ನಾಶಪಡಿಸಬೇಕು.

* ಮುಂಚಿತವಾಗಿ ಬಿತ್ತನೆ ಮಾಡಿರುವ ಬೆಳೆಯಲ್ಲಿ, ಪ್ರತಿ ಲೀಟರ್ ನೀರಿಗೆ 1 ಎಂ.ಎಲ್ ಹೆಕ್ಸಾಕೊನಾಜೋಲ್ ಅಥವಾ ಲೀಟರ್ ನೀರಿಗೆ 2 ಗ್ರಾಂ.ನಷ್ಟು ಕಾರ್ಬೆಂಡೆಜಿA ಅನ್ನು ಶಿಲೀಂದ್ರ ನಾಶಕದೊಡನೆ ಮಿಶ್ರಣ ಮಾಡಿ ಬೆಳೆಗೆ ಸಿಂಪರಿಸಬೇಕು.

* ಸೋಯಾ ಬೆಳೆಗೆ 19:19:19, 13:0:45 (ಅಥವಾ 0:52:34) ಲಘು ಪೋಷಕಾಂಶಗಳ ಮಿಶ್ರಣ ನೀಡಬೇಕು.

* ಬೆಳೆಯ ಬೆಳವಣಿಗೆ ಉತ್ತಮವಾಗಿದ್ದರೆ ಸಾರಜನಕಯುಕ್ತ ಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಮಾಡಬೇಕು.

* ಕಳೆಗಳ ನಿರ್ವಹಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕಳೆ ನಾಶಕ ಸಿಂಪಡಣೆ ಬದಲು, ಕಿರುಗುಂಟೆ ಅಥವಾ ಕೈ ನೇಗಿಲು ಹೊಡೆಯುವುದು ಸೂಕ್ತ.

* ಹೇನು, ಸೀರು, ಇತರೆ ರಸ ಹೀರುವ ಕೀಟಗಳ ಬಾಧೆ ಹತೋಟಿಗೆ ಪ್ರತಿ ಲೀಟರ್ ನೀರಿಗೆ 1 ಎಂ.ಎಲ್ ಅಜಾಡಿರಕ್ಟಿನ್ 10000 ಪಿಪಿಎಂ ದ್ರಾವಣ ಬೆರೆಸಿ ಬೆಳೆಗೆ ಸಿಂಪಡಿಸಿ.

* 25-35 ದಿನಗಳ ಹಂತದ ಬೆಳೆಗೆ ಅಗತ್ಯ ಪ್ರಮಾಣದ ಜಿಪ್ಸಂ, ಜಿಂಕ್ ಸಲ್ಫೇಟ್, ಬೋರಾನ್ ಕೊಡಬೇಕು. ಲದ್ದಿ ಹುಳು ಹತೋಟಿಗೆ ನುಮೋರಿಯ (ಮೆಟಾರೈಜಿಯಂ) ರಿಲೈ ಜೈವಿಕ ಶಿಲೀಂದ್ರ ನಾಶಕ ಬಳಸಿ.

ಮುಂಗಾರು ಹತ್ತಿ ಬೆಳೆ

* ದಿಂಡು ಅಥವಾ ಬದು ಏರಿಸುವ ಮೂಲಕ ಮಳೆ ನೀರು ಹೊಲದೊಳಗೆ ಹೋಗದಂತೆ ತಡೆದು ಅತೀ ತೇವದ ಬಾಧೆಯಿಂದ ಬೆಳೆ ರಕ್ಷಿಸಬೇಕು. ನೀರು ನುಗ್ಗಿದ್ದರೆ ಬದು ಒಡೆದು ನೀರು ಹೊರಗೆ ಹಾಕಬೇಕು.

* ಬುಡ ಕೊಳೆ ರೋಗದ ಲಕ್ಷಣಗಳು ಕಂಡುಬAದಲ್ಲಿ, ಸೂಕ್ತ ಪ್ರಮಾಣದ ಕಾರ್ಬೆಂಡೆಜಿA ದ್ರಾವಣವನ್ನು ಬೆಳೆಯ ಬುಡಕ್ಕೆ ಸಿಂಪಡಿಸುವುದು.

* ಹೆಕ್ಸಾಕೊನಾಜೋಲ್ ಅನ್ನು ಶಿಲೀಂದ್ರ ನಾಶಕದೊಡನೆ ಬೆರೆಸಿ ಸಿಂಪಡಿಸುವುದರಿAದ ಹೂವು ಕೊಳೆ ರೋಗ ಬಾಧೆ ತಡೆಯಬಹುದು.

* ಪ್ರತಿ ಎರಡು ವಾರಗಳಿಗೆ ಒಮ್ಮೆ 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ, ಪೋಷಕಾಂಶಗಳನ್ನು ಸಿಂಪಡಿಸಬೇಕು.

* ಬೆಳೆಯು 50 ದಿನ ತಲುಪುವ ಹಂತದೊಳಗೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸಬೇಕು.

* ಜಿಪ್ಸಂ (100-200 ಕೆಜಿ), ಜಿಂಕ್ (5 ಕೆಜಿ), ಬೋರಾನ್ (1 ಕೆಜಿ) ಮತ್ತು ಮೆಗ್ನೇಶಿಯಂ (5 ಕೆಜಿ) (ಕೆಜಿ/ಎಕರೆ) ಒದಗಿಸಿ.

* ಕಾಯಿಕೊರಕದ ಹತೋಟಿಗೆ ಇಮಾಮೆಕ್ಟಿನ್ ಬೆಂಜೋಯೇಟ್, ಕ್ಲೋರಂಟ್ರಿನಿಲಿಪೋಲ್, ಸ್ಟೆöÊನೋಸ್ಯಾಡ್, ಸ್ಟೆನ್ ಟೋರಂ ಇವುಗಳಲ್ಲಿ ಒಂದನ್ನು (ಪ್ರತಿ ಬಾರಿ ಬದಲಿಸಿ) ಬಳಸಬೇಕು.

* ಜೈವಿಕ ಪೀಡೆನಾಶಕ ಮೆಟಾರೈಜಿಯಂ ರಿಲೈ ಅನ್ನು ತಂಪು ವಾತಾವರಣದಲ್ಲಿ ಬಳಸುವ ಮೂಲಕ ಕೀಟ ಹತೋಟಿ ಮಾಡಬಹುದು.