Agripedia

ಚಳಿಗಾಲದಲ್ಲಿ ಬಾಳೆ ಅಂಜೂರ ಬೆಳೆಗೆ ತಗಲುವ ರೋಗ ನಿರ್ವಹಣಾ ಕ್ರಮಗಳು

07 January, 2021 7:08 PM IST By:
Banana

ಬಾಳೆ ಹಾಗೂ ಅಂಜೂರ ಬೆಳೆಗಳನ್ನು ಬೆಳೆದ ರೈತರು ಚಳಿಗಾಲದಲ್ಲಿ ಈ ಕೆಳಕಂಡಂತೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಬಾಳೆಬೆಳೆ:

ಬಾಳೆ ಬೆಳೆಯಲ್ಲಿ ಹೊಸದಾಗಿ ನಾಟಿ ಮಾಡಿದ ಸುಮಾರು 2 ರಿಂದ ನಾಲ್ಕು ತಿಂಗಳ ಬಾಳೆ ಸಸಿಗಳು ಚಳಿಗಾಲದಲ್ಲಿ ಸರಿಯಾಗಿ ಬೆಳವಣಿಗೆಯಾಗದೇ ಮೇಲ್ಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ರೋಗಗ್ರಸ್ತದಂತೆ ಕಾಣುತ್ತವೆ. ಇದರ ನಿರ್ವಹಣೆಗಾಗಿ ರೈತರು 15 ಲೀಟರ್ ನೀರಿನಲ್ಲಿ 75 ಗ್ರಾಂ ಬನಾನಾ ಸ್ಪೆಶಲ್, 1 ಪಾಕೇಟ್ ಶಾಂಪೂ ಮತ್ತು 1 ನಿಂಬೆ ಹಣ್ಣಿನ ರಸವನ್ನು ಬೆರೆಯಿಸಿ ಚನ್ನಾಗಿ ಕಲಸಿ ಪ್ರತಿ 20 ದಿವಸಕ್ಕೆ ಒಮ್ಮೆ 2 ರಿಂದ 3 ಸಲ ಬಾಳೆ ಸಸಿಗಳ ಎಲೆಗಳ ಮೇಲೆ, ಬುಡದಲ್ಲಿ ಸಿಂಪರಣೆ ಮಾಡಬೇಕು.

ಅಂಜೂರ:

ಅಂಜೂರನಲ್ಲಿ ತುಕ್ಕುರೋಗ ಕಂಡುಬಂದಿದ್ದು, ಮೊದಲು ಎಲೆಗಳ ತಳಭಾಗದಲ್ಲಿ ಕಂದು ಚುಕ್ಕೆಗಳು ಕಂಡುಬಂದು ಆಮೇಲೆ ಎಲೆಗಳ ಮೇಲ್ಬಾಗಕ್ಕೂ ಹರಡಿ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಇದಲ್ಲದೇ ಕಾಯಿಗಳ ಗಾತ್ರ ಚಿಕ್ಕದಾಗಿ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರÀ ಹತೋಟಿಗಾಗಿ ರೈತರು ಮ್ಯಾಂಕೊಜೆಬ್ (2 ಗ್ರಾಂ.) ಅಥವಾ ಟ್ರೈಡೆಮಿಫಾನ್ (1 ಗ್ರಾಂ.) ಅಥವಾ ಹೆಕ್ಸಾಕೋನೊಜೋಲ್ (1ಮೀ.ಲಿ.) ಪ್ರತಿ ಲೀಟರ್ ನೀರಿನಲ್ಲಿ ಬೆರೆಯಿಸಿ ಸಿಂಪರಣೆ ಮಾಡಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞರಾದ ಮಂಜುನಾಥ ಪಾಟೀಲ ಇವರ ಮೊಬೈಲ್ ನಂಖ್ಯೆ 7259984026ಗೆ ಸಂಪರ್ಕಿಸಲು ಕೋರಲಾಗಿದೆ.