Agripedia

ಬೆಂಕಿ ರೋಗ ನಿರೋಧಕ ಶಕ್ತಿ ಇರುವ ಕೆಂಪಕ್ಕಿ ಭತ್ತದ ತಳಿ ಅಭಿವೃದ್ಧಿ!

20 November, 2022 12:32 PM IST By: Hitesh
Development of red rice varieties with fire resistance!

ಭತ್ತದ ತಳಿಗಳಿಗೆ ಬೆಂಕಿರೋಗ ಅತಿಯಾಗಿ ಕಾಡುತ್ತದೆ. ಈ ರೋಗ ರೈತರ ಶ್ರಮ ಮತ್ತು ಆದಾಯ ಎರಡನ್ನೂ ಮಣ್ಣುಪಾಲು ಮಾಡುತ್ತದೆ. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಹುದೊಡ್ಡ ಬದಲಾವಣೆ ಆಗುತ್ತಿದೆ.

ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಆರು ತಿಂಗಳಲ್ಲಿ ಶಿಫಾರಸ್ಸು ಸಾಧ್ಯತೆ!

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬೆಂಕಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಸಹ್ಯಾದ್ರಿ ಕೆಂಪು ಮುಕ್ತಿ ಹೆಸರಿನ ಕೆಂಪಕ್ಕಿಯ ಭತ್ತದ ತಳಿಯನ್ನು ಅಭಿವೃದ್ಧಿಪಡಿಸುವ ಮೂಲಕ ಭತ್ತ ಬೆಳೆಯುವ ರೈತರಿಗೆ ಹೊಸ ಭರವಸೆಯನ್ನು ಮೂಡಿಸಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೇರಳ ಮೂಲದ ಜ್ಯೋತಿ ಎಂಬ ತಳಿಯ ಕೆಂಪಕ್ಕಿ ಭತ್ತವನ್ನು ಬೆಳೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಳ್ಳುವ ಆತಂಕ ಪ್ರಾರಂಭವಾಗಿದೆ.  

ಇದೀಗ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭತ್ತದ ತಳಿಯಲ್ಲಿ ಕಂಡು ಬರುವ ಬೆಂಕಿರೋಗ ತಡೆಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು,

ಭತ್ತ ತಳಿ ಸಂಶೋಧನಾ ವಿಭಾಗದ ಡೀನ್ ಡಾ.ಬಿ.ಎಂ. ದುಷ್ಯಂತ್‌ಕುಮಾರ್ ನೇತೃತ್ವದ ತಂಡವು ಹೊಸ ಮಾದರಿಯ ತಳಿ ಅಭಿವೃದ್ಧಿಪಡಿಸಿದೆ.

ರೈತರ ಮಕ್ಕಳಿಗೆ ಸಿಹಿಸುದ್ದಿ: ಶಿಕ್ಷಣದಲ್ಲಿ ಶೇ.10% ಮೀಸಲಾತಿ; 430 ಸೀಟು ಲಭ್ಯ- ಬಿ.ಸಿ ಪಾಟೀಲ್‌!

ಸಹ್ಯಾದ್ರಿ ಕೆಂಪಕ್ಕಿ

ಈಗಾಗಲೇ ದೇಶದ ವಿವಿಧ ಭಾಗಗಳ 60 ಕಡೆ ಕ್ಷೇತ್ರ ಪ್ರಯೋಗ ನಡೆದಿದೆ. ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ತಳಿಯ ಭತ್ತವನ್ನು ವಲಯ,

ರಾಷ್ಟ್ರೀಯ ಮಟ್ಟದಲ್ಲಿ ‍ಪ್ರಾಯೋಗಿಕ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಈ ಪ್ರಯೋಗದಲ್ಲಿ  ಹೆಕ್ಟೇರ್‌ಗೆ 60 ಕ್ವಿಂಟಲ್‌ಇಳುವರಿ ಸಹ ಬಂದಿದ್ದು, ಉಳಿದ ತಳಿಗಳಿಗಿಂತ ಶೇ 21.30ರಷ್ಟು ಹೆಚ್ಚು ಇಳುವರಿ ದೊರೆತಿದೆ ಎನ್ನಲಾಗಿದೆ.  

ಭಾರತೀಯ ಭತ್ತ ತಳಿ ಸಂಶೋಧನಾ ಸಂಸ್ಥೆ ನಡೆಸಿದ ಇಳುವರಿ ಪರೀಕ್ಷೆಯಲ್ಲಿ ಸಹ್ಯಾದ್ರಿ ಕೆಂಪು ಮುಕ್ತಿ ತಳಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ.

69 ವಿವಿಧ ತಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೇಂದ್ರೀಯ ತಳಿ ಬಿಡುಗಡೆ ಸಮಿತಿ (ಸಿವಿಆರ್‌ಸಿ) ಕೂಡ ರಾಜ್ಯದ ತಳಿಗೆ ಬೆಳೆಯಲು ಶಿಫಾರಸ್ಸು ಮಾಡಿ ಅಧಿಸೂಚನೆ ಹೊರಡಿಸಿದೆ.

ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ತಳಿಯು ಜ್ಯೋತಿ ಭತ್ತಕ್ಕೆ ಪರ್ಯಾಯವಾಗಿದ್ದು, ಬೆಂಕಿ ರೋಗಕ್ಕೆ ಬಹಳಷ್ಟು ಪ್ರತಿರೋಧವನ್ನು ಹೊಂದಿದೆ.  

2021–22ರಲ್ಲಿ ರಾಜ್ಯದಲ್ಲಿ 5 ಸಾವಿರ ಎಕರೆಯಲ್ಲಿ ಸಹ್ಯಾದ್ರಿ ಕೆಂಪು ಮುಕ್ತಿ ತಳಿಯ ಭತ್ತ ಬೆಳೆಯಲಾಗಿದೆ.

ಹೆಕ್ಟೇರ್‌ಗೆ 7 ಸಾವಿರದಿಂದ 7,500 ಕೆ.ಜಿ ಹೆಚ್ಚು ಇಳುವರಿ ಬಂದಿದೆ. ಈ ತಳಿಯ ಭತ್ತದ ಸಸಿ 10 ದಿನ ನೀರಿನಲ್ಲಿದ್ದರೂ ತಾಳಿಕೆಯ ಶಕ್ತಿ ಹೊಂದಿದೆ ಎಂದು ದುಷ್ಯಂತ್‌ಕುಮಾರ್ ತಿಳಿಸಿದ್ದಾರೆ

ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ!