Agripedia

ಪಪ್ಪಾಯ ಬೆಳೆಸಿ 10 ಲಕ್ಷ ಗಳಿಸಿ! 350 ಕ್ವಿಂಟಾಲ್‌ವರೆಗೆ ಉತ್ಪಾದನೆ, ವರ್ಷವಿಡೀ ಬೇಸಾಯ.

21 March, 2022 11:19 AM IST By: Kalmesh T
Cultivate Papaya and earn 10 Lakhs! Production up to 350 quintals, year round farming.

ಈಗ ರೈತರ ಗಮನವು ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚು ಹಾಗೂ ಉತ್ತಮ ಆದಾಯ ಗಳಿಸಬಲ್ಲ ಬೆಳೆಗಳ ಮೇಲಿದೆ. ಪಪ್ಪಾಯ ಬೆಳೆಯನ್ನು ಹಣ್ಣಾಗುವ ಮೊದಲು ಹಾಗೂ ಮಾಗಿದ ನಂತರ ಬಳಸಬಹುದು. ಪಪ್ಪಾಯವನ್ನು MArch ಮತ್ತು April ತಿಂಗಳಿನಲ್ಲಿ ಮಾತ್ರ ನೆಡಲಾಗುತ್ತದೆ. ಈಗ ಗ್ರಾಮೀಣ ಭಾಗದ ರೈತರು ಪಪ್ಪಾಯಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ವರ್ಷವಿಡಿ ಮಾಡಬಹುದಾದ  ಬೇಸಾಯ

ಪಪ್ಪಾಯಿ ಕೃಷಿಯ ಅತ್ಯುತ್ತಮ ವಿಷಯವೆಂದರೆ ಅದನ್ನು ನೀವು ವರ್ಷವಿಡೀ ಬೆಳೆಸಬಹುದು.  ಮಾರುಕಟ್ಟೆಯಲ್ಲಿ 12 ತಿಂಗಳ ಉತ್ಪಾದನೆಯನ್ನು ನೀಡುವ ಹಲವಾರು ಪ್ರಭೇದಗಳಿವೆ. ಪಪ್ಪಾಯಿಗಳಲ್ಲಿ, ಮುಖ್ಯವಾಗಿ September ಮತ್ತು March - April ನಲ್ಲಿ ಬಿತ್ತಲಾಗುತ್ತದೆ. ಈ ಕಾರಣದಿಂದಾಗಿ ನೀವು ವರ್ಷವಿಡೀ ಈ ಬೆಳೆಯನ್ನು ಬೆಳೆಯಬಹುದು.

ಪಪ್ಪಾಯಿ ಗಿಡಗಳನ್ನು ನೆಡುವುದು ಹೇಗೆ?

ಪಪ್ಪಾಯ ಮರಗಳನ್ನು ಸಣ್ಣ ಗುಂಡಿಗಳನ್ನು ಮಾಡುವ ಮೂಲಕ ನೆಡಲಾಗುತ್ತದೆ. ಬೀಜಗಳನ್ನು ಬಿತ್ತಿದ 10 ರಿಂದ 12 ದಿನಗಳ ನಂತರ ಅವು ಮೊಳಕೆಯೊಡೆಯುತ್ತವೆ. ಪಪ್ಪಾಯಿ ಮರಕ್ಕೆ ಹೆಚ್ಚು ನೀರು ಮತ್ತು ಸೂರ್ಯನ ಬೆಳಕು ಬೇಕು. ಆದ್ದರಿಂದ, ನೀರು ಮತ್ತು ಸೂರ್ಯನ ಬೆಳಕು ಎರಡನ್ನೂ ಸುಲಭವಾಗಿ ಸಿಗುವ ಪ್ರದೇಶದಲ್ಲಿ ಅದನ್ನು ನೆಡಬೇಕು. ಇದಕ್ಕಾಗಿ ಗರಿಷ್ಠ ತಾಪಮಾನವು 38 ಡಿಗ್ರಿಯಿಂದ 44 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಈ ಬೆಳೆ ಶಾಖ ಮತ್ತು ಹಿಮದಿಂದ ಹಾನಿಗೊಳಗಾಗುತ್ತದೆ.

ದೇಶದ ಹಲವು ರಾಜ್ಯಗಳಲ್ಲಿ ಪಪ್ಪಾಯ

ದೇಶದ ಹಲವು ರಾಜ್ಯಗಳಲ್ಲಿ ಪಪ್ಪಾಯಿಯನ್ನು ಬೆಳೆಯಲಾಗುತ್ತದೆ. ಬಿಹಾರ, ಅಸ್ಸಾಂ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಹರಿಯಾಣ, ದೆಹಲಿ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮುಂತಾದ ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತದೆ.

ಬೇಗ ಫಲ ನೀಡುವ ಬೆಳೆ ಪಪ್ಪಾಯ

ಪಪ್ಪಾಯಿ ಮರಗಳು ಬೇಗನೆ ಫಲ ನೀಡಲು ಪ್ರಾರಂಭಿಸುತ್ತವೆ. ಹಾಗಾಗಿ ಹೆಚ್ಚು ಫಲವತ್ತಾದ ಭೂಮಿಯ ಅಗತ್ಯವಿದೆ. ಮನೆಯಲ್ಲಿ ತಯಾರಿಸಿದ ಗೊಬ್ಬರವು ಇದಕ್ಕೆ ಸೂಕ್ತವಾಗಿರುತ್ತದೆ. ಇಷ್ಟು ಪ್ರಮಾಣದ ಗೊಬ್ಬರವನ್ನು ಹೆಚ್ಚು ಕೊಡಬೇಕಾಗಿಲ್ಲ. ಸಗಣಿ ಇದಕ್ಕೆ ಹೆಚ್ಚು ಉಪಯುಕ್ತವೆಂದು ಪರಿಗಣಿಸಲಾಗಿದೆ.

ಯಾವಾಗ ಕಟಾವು ಮಾಡಬೇಕು?

ಪಪ್ಪಾಯಿ ಬೆಳೆ ಕಟಾವಿಗೂ ಒಂದು ಸಮಯವಿದೆ. ನೀವು ಬಲಿತ ಪಪ್ಪಾಯಿಯನ್ನು ಕೀಳಲು ಬಯಸಿದರೆ, ಹಸಿರು ಬಣ್ಣಕ್ಕೆ ತಿರುಗಿದ ನಂತರ ದೊಡ್ಡ ಗಾತ್ರದಲ್ಲಿ ಬೆಳೆದ ನಂತರ ನೀವು ಅದನ್ನು ಕೀಳಬಹುದು. ನೀವು ಹಣ್ಣಾಗಲು ಕಾಯುತ್ತಿದ್ದರೆ, ಹಸಿರು ಪಪ್ಪಾಯಿ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ, ಅದನ್ನು ತೆಗೆಯಬೇಕು.

ಉತ್ಪಾದನೆ ಎಷ್ಟು?

ಪಪ್ಪಾಯಿ ಮರದಿಂದ ಕನಿಷ್ಠ 50 ಕೆ.ಜಿ. ಹಣ್ಣುಗಳು ಸಿಗುತ್ತವೆ. ಪಪ್ಪಾಯಿಯ ಗಾತ್ರ ಕನಿಷ್ಠ 2 ಕೆ.ಜಿ. ಇರುತ್ತದೆ. ಪ್ರತಿ ಹೆಕ್ಟೇರಿಗೆ ರಾಷ್ಟ್ರೀಯ ಮಟ್ಟದ ಉತ್ಪಾದಕತೆಯನ್ವಯ 317 ಕ್ವಿಂಟಾಲ್‌ನಷ್ಟು ಪಪ್ಪಾಯ ಸಿಗುತ್ತದೆ ಎನ್ನಲಾಗಿದೆ. ಒಂದು ಎಕರೆ ಜಮೀನಿನಲ್ಲಿ ಸುಮಾರು 2,000 ಸಸಿಗಳನ್ನು ನೆಡಬಹುದು.

ಈ ಬೆಳೆಯಿಂದ ಎಷ್ಟು ಗಳಿಕೆ?

ಮಾರುಕಟ್ಟೆಯಲ್ಲಿ ಪಪ್ಪಾಯಿಯ ಬೆಲೆ ಉತ್ತಮವಾಗಿದ್ದರೆ ಒಂದು ಎಕರೆ ಜಮೀನಿನಲ್ಲಿ ರೈತ ಕನಿಷ್ಠ 5 ರಿಂದ 10 ಲಕ್ಷ ರೂಪಾಯಿ ಗಳಿಸಬಹುದು ಎಂದು ಪಪ್ಪಾಯಿ ಕೃಷಿಯ ಬಗ್ಗೆ ಹೇಳಲಾಗುತ್ತದೆ. ಪಪ್ಪಾಯಿ ಕೃಷಿಗೆ ತಗಲುವ ವೆಚ್ಚ ಕಡಿಮೆ ಎಂಬುವುದು ಉಲ್ಲೇಖನೀಯ. ಮರಕ್ಕೆ ಯಾವುದೇ ರೀತಿಯ ರೋಗ ತಗುಲಿದರಷ್ಟೇ ಅದಕ್ಕೆ ಕೀಟನಾಶಕವನ್ನು ಬಳಸಲಾಗುತ್ತದೆ.