ಕಲಬುರಗಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ಕಳೆದ 8-10 ದಿನಗಳಿಂದ ಮಳೆ ಬೀಳುತ್ತಿರುವದರಿಂದ ವಿಶೇಷವಾಗಿ ಜೇವರ್ಗಿ ತಾಲೂಕಿನ ಹತ್ತಿ ಬೆಳೆಯಲ್ಲಿ ಸಹಸ್ರಪದಿಗಳ ಉಪದ್ರವ ಕಂಡು ಬಂದಿರುತ್ತದೆ. ಸಹಸ್ರಪದಿಗಳು ಅಪಾಯಕಾರಿ ಕೀಟಗಳಲ್ಲದಿದ್ದರು ಸಣ್ಣ ಪ್ರಮಾಣದ ಹಾನಿಯಾಗಬಹುದಾಗಿದೆ. ಸಾಮಾನ್ಯವಾಗಿ ಸತತ ಮಳೆ, ತಂಪು ವಾತಾವರಣ, ಹಿಂದಿನ ಬೆಳೆ ಅವಶೇಷಗಳು ಹೊಲದಲ್ಲಿಯೆ ಉಳಿದುಕೊಂಡು ಅರ್ಧಕೊಳತೆ ಸ್ಥತಿಯಲ್ಲಿರುವ ಪ್ರದೇಶದಲ್ಲಿ ಗುಂಪು ಗುಂಪಾಗಿ ಕಾಣಿಸಿಕೊಳ್ಳತ್ತದೆ ಇವು ಬಹಳ ವಿರಳವಾಗಿ ಕಾಣಿಸಿಕೊಳ್ಳುವುದು.
ಸಹಸ್ರಪದಿಗಳು ಸಾಮಾನ್ಯವಾಗಿ ಗಂಡು ಹೆಣ್ಣು ವಸಂತ ಖುತುವಿನಲ್ಲಿ ಸಂಪರ್ಕಗೊಂಡು ಗುಂಪು ಗುಂಪಾಗಿ ಮಣ್ಣಿಲ್ಲಿ ತತ್ತಿಗಳನಿಟ್ಟು ಚಳಿಗಾಲಕ್ಕಿಂತ ಮೊದಲು ತತ್ತಿಗಳಿಂದ ಮರಿಗಳು ಬರುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ಚುರುಕಾಗಿರುತ್ತವೆ. ಇವುಗಳು ಹತ್ತಿ ಬೆಳೆಯಲ್ಲಿ ಚಿಗುರೆಲೆಗಳನ್ನು ಅಲ್ಲಲ್ಲಿ ತಿಂದು ಎಲೆಗಳಲ್ಲಿ ತೂತುಗಳು ಕಾಣಿಸಿಕೊಂಡು ಹಾನಿಗೊಳಿಸುವುದಲ್ಲದೆ ಮೆದುವಾದ ಕಾಯಿಗಳನ್ನು ಸಹ ಹಾಳು ಮಾಡಬಲ್ಲವು. ಒಮ್ಮೊಮ್ಮ ಚಿಕ್ಕ ಸಸಿಗಳ ಬೇರುಗಳನ್ನು ಕಡಿದು, ಸಸಿಗಳ ಸಾವಿನ ಸಂಖ್ಯೆಗೆ ಕಾರಣವಾಗಬಹುದು. ಅವುಗಳ ಸಂಖ್ಯೆ ಮತ್ತು ಅವುಗಳಿಗೆ ಲಭ್ಯವಾಗುವ ಕೊಳೆತ ಬೆಳೆ ಅವಶೇಷಗಳನ್ನು ಆಧರಿಸಿ ಚಿಕ್ಕ ಮತ್ತು ಮೆದುವಾದ ಬೆಳೆ ಸಸ್ಯಗಳನ್ನು, ನಂತರದಲ್ಲಿ ಬೆಳವಣಿಗೆ ಹಂತದ ಸಸಿಗಳನು, ಮೆದುವಾದ ಕಾಯಿಗಳನ್ನು ಹಾನಿ ಮಾಡಬಲ್ಲವು. ಈ ವರೆಗೆ ಈ ಹುಳುವಿನಿಂದ ಹಾನಿ ಆರ್ಥಿಕ ನಷ್ಟವಾದ ಉದಾಹರಣೆ ಇರುವುದಿಲ್ಲ.
ನಿಯಂತ್ರಣಾ ಕ್ರಮಗಳು:
ಬಿತ್ತುವ ಪೂರ್ವದಲ್ಲಿ ಮಾಗಿ ಉಳುಮೆ ಮಾಡಿ ತತ್ತಿಗಳ/ಮರಿಗಳ ನಾಶಗೊಳಿಸುವಿಕೆ , ಬಿತ್ತನೆ ಅವಧಿಯನ್ನು ಸ್ಪಲ್ಪ ಹಿಂದೆ ಮುಂದುಡುವುದು, ಬಿತ್ತನೆ ಬೀಜ ಪ್ರಮಾಣವನ್ನು ಹೆಚ್ಚುಸುವುದು, ಆರ್ಗನೊ ಫಸ್ಫೇಟ್ ಮತು ಫೈರಾಥ್ರೈಡಗಳನ್ನು ಬಳಸಿ ನಿಯಂತ್ರಿಸಬಹುದಾಗಿದೆ 0.5 ಮಿ.ಲಿ. ಒಂದು ಲೀಟರ್ ನೀರಿಗೆ ಆದರೆ ಅವುಗಳು ನಿಶಾಚರ ಸೇರಿದ್ದರಿಂದ ಅವುಗಳ ಮೈಮೇಲೆ ಸಿಂಪರಣೆ ಕಷ್ಟಸಾಧ್ಯವಿರುತ್ತದೆ. ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಬಿತ್ತನೆ ಬೀಜಗಳ ಹಾವಳಿ ತಡೆಯುವಂತೆ ಸರ್ಕಾರಕ್ಕ ಮನವಿ ಮಾಡಿದ ಬೀಜೋತ್ಪಾದನೆ ಕಂಪನಿಗಳು
ದೇಶದಲ್ಲಿ ಹರ್ಬಿಸೈಡ್ ಟಾಲರೆಂಟ್ ಬಿಟಿ (ಎಚ್‌ಟಿ-ಬಿಟಿ) ಹತ್ತಿ ಬೀಜಗಳನ್ನು ಅಕ್ರಮವಾಗಿ ಬಿತ್ತಿ ಹತ್ತಿ ಬೆಳೆ ಬೆಳೆಯುವ ಪ್ರದೇಶ ಪ್ರಸಕ್ತ ವರ್ಷ ಹೆಚ್ಚಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ಬೀಜ ಉತ್ಪಾದನಾ ಉದ್ಯಮಗಳ ಒಕ್ಕೂಟ (ಎಫ್‌ಎಸ್‌ಐಐ) ಮತ್ತು ಭಾರತೀಯ ರಾಷ್ಟಿಯ ಬೀಜ ಸಂಘಟನೆ (ಎನ್‌ಎಸ್‌ಎಐ), ಈ ಅಕ್ರಮ ಹತ್ತಿ ಬೆಳೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿವೆ.
ಈ ಕುರಿತಂತೆ ಕೇಂದ್ರ ಕೃಷಿ ಸಚಿವಾಲಯ, ಪರಿಸರ ಸಚಿವಾಲಯ ಹಾಗೂ ಬೀಜ ನಿಗಮಕ್ಕೆ ಮನವಿ ಸಲ್ಲಿಸಿರುವ ಎರಡೂ ಸಂಘಟನೆಗಳು, ಒಂದೊಮ್ಮೆ ಈ ಅನಧಿಕೃತ ಎಚ್‌ಟಿ-ಬಿಟಿ ಹತ್ತಿ ಬೀಜಗಳ ಹಾವಳಿಯನ್ನು ತಡೆಯದಿದ್ದರೆ ಇದರಿಂದ ದೇಶದ ಬೀಜ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಜೊತೆಗೆ, ಇದರಿಂದ ರೈತರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿವೆ.
ಹತ್ತಿಯನ್ನು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿನ ಬಹುತೇಕ ಕೃಷಿಕರು ತಮಗೆ ಅರಿವಿಲ್ಲದಂತೆ ಅಕ್ರಮ ಎಚ್‌ಟಿ ಬಿಟಿ ಹತ್ತಿ ಬೀಜಗಳನ್ನು ಖರೀದಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದ ಅಕ್ರಮ ಬೀಜಗಳು ಮಾರಾಟವಾಗುತ್ತಿರುವ ಕಾರಣ ಸಕ್ರಮ ಅಥವಾ ಸರ್ಕಾರದಿಂದ ಕಾನೂನು ರೀತಿ ಅನುಮತಿ ಪಡೆದು ಬೀಜ ಉತ್ಪಾದಿಸುತ್ತಿರುವ ಕಂಪನಿಗಳ ಬಿಜೋತ್ಪನ್ನಗಳು ಮಾರಾಟವಾಗುತ್ತಿಲ್ಲ. ಪ್ರಸಕ್ತ ವರ್ಷವಂತೂ ಸಂಘಟನೆಯಲ್ಲಿ ನೋಂದಣಿ ಮಾಡಿಕೊಂಡ ಸಂಸ್ಥೆಗಳ ಅರ್ಧದಷ್ಟು ಹತ್ತಿ ಬೀಜಗಳು ಮಾರಾಟವಾಗದೇ ಉಳಿದಿವೆ. ಅಕ್ರಮ ಎಚ್‌ಟಿ-ಬಿಟಿ ಹತ್ತಿ ಬೆಳೆಯುವ ಪ್ರದೇಶದಲ್ಲಿ ಹೆಚ್ಚಳ ಆಗಿರುವುದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಅಲ್ಲದೆ, ಕೃಷಿಕರು ಹಾಗೂ ನ್ಯಾಯಯುತವಾಗಿ ವ್ಯವಹಾರ ನಡೆಸುತ್ತಿರುವ ಬೀಜ ಕಂಪನಿಗಳಿಗೆ ಇದರಿಂದ ಭಾರೀ ಅನ್ಯಾಯವಾಗುತ್ತಿದೆ ಎಂದು ಹೇಳುವ ಮೂಲಕ ಸಂಘಟನೆಗಳು ಸರ್ಕಾರದ ಗಮನ ಸೆಳೆದಿವೆ.