Agripedia

ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಕೀಟ ಮತ್ತು ರೋಗಗಳ ನಿಯಂತ್ರಣ

03 January, 2021 4:12 PM IST By:
insect

ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಕೀಟ ಮತ್ತು ರೋಗ ಬಾಧೆಗಳನ್ನು ತಡೆಯಬಹುದು. ಆಧುನಿಕ ದಿನಗಳಲ್ಲಿ ಪ್ರತಿಯೊಂದು ಬೆಳೆಯಲ್ಲಿ ಕೀಟ ಮತ್ತು ರೋಗಗಳು ತೊಂದರೆಗಳು ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತಿದೆ.  ಇದರಿಂದಾಗಿ ರೈತರು ಸಾಕಷ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದಾನೆ.  ಆದ್ದರಿಂದ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಕೀಟನಾಶಕ ಮತ್ತು ರೋಗ ನಾಶಕಗಳನ್ನು ತಯಾರಿಸಿಕೊಳ್ಳಬಹುದು.

 ತಯಾರಿಕೆ ಮತ್ತು ಬಳಸುವ ವಿಧಾನ

ಎಲೆ ತಿನ್ನುವ ಕೀಟ ಅಥವಾ ಹುಳು

 ಮನೆಯಲ್ಲಿರುವ 50 ಗ್ರಾಂ ಅರಸಿನವನ್ನು ಒಂದು ಲೀಟರ್ ಗೋವಿನ ಗಂಜಲದಲ್ಲಿ ಎರಡು ದಿನಗಳ ಕಾಲ ನೆನೆಸಿ, ನಂತರ ಇದಕ್ಕೆ 5 ಲೀಟರ್ ನೀರನ್ನು ಬೆರೆಸಿ ಸಿಂಪಡಿಸಬೇಕು.

ಕಾಯಿಕೊರಕ ಮತ್ತು ಕಂಬಳಿ ಹುಳುಗಳು

 25 ಗ್ರಾಂ ಹಸಿಮೆಣಸಿನಕಾಯಿ ಮತ್ತು 60 ಗ್ರಾಂ ಉಪ್ಪನ್ನು ಸರಿಯಾಗಿ ರುಬ್ಬಬೇಕು. ಇದನ್ನು 12 ಗಂಟೆಗಳ ಕಾಲ ನೆನೆಸಿ ನಂತರ ಎಂಟು ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.

plant disease

ಜಾಸಿಡ್ಸ್ ಮತ್ತು ಸಸ್ಯ ಹೇನು

 ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡು ರುಬ್ಬಬೇಕು ಬಂದಿರುವ ಈ ಮಿಶ್ರಣ 1ml ನಲ್ಲಿ 100ml ನೀರನ್ನು ಬೆರೆಸಿ ಸಿಂಪಡಿಸಬೇಕು.

ಥ್ರಿಪ್ಸ್ ಮತ್ತು ಶಿಲಿಂದ್ರ ರೋಗಗಳು

 50 ಗ್ರಾಂ ಬೆಳ್ಳುಳ್ಳಿಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ ಮಿಶ್ರಣ ತಯಾರಿಸಿ. ಸೋಸಿ ಇಟ್ಟುಕೊಳ್ಳಬೇಕು,5gram ಎಕ್ಕದ ಎಲೆ, 50 ಗ್ರಾಂ ತುಳಸಿ,50 ಗ್ರಾಂ ಲಕ್ಕಿ ಹೂಗಳನ್ನು,ಸರಿಯಾಗಿ ರುಬ್ಬಿ 100ml ನೀರಿನಲ್ಲಿ ಒಂದು ದಿನ ನೆನಸಿ ನಂತರ ಈ ಎರಡು ಸೋಸಿ ಇಟ್ಟಿರುವ ಮಿಶ್ರಣಗಳನ್ನು. ಸರಿಯಾಗಿ ಮಿಶ್ರಣ ಮಾಡಿ ಅದಕ್ಕೆ 10ml ಬೇವಿನ ಎಣ್ಣೆ ಮತ್ತು 20 ಲೀಟರ್ ನೀರನ್ನು ಬೆರೆಸಿ ಸಿಂಪಡಿಸಬೇಕು.

 ಬಿಳಿ ನೊಣಗಳು ಮತ್ತು ಇನ್ನಿತರ ಕೀಟಗಳು

 100 ಗ್ರಾಂ ಹಸಿಮೆಣಸಿನಕಾಯಿ 1 ಬೆಳ್ಳುಳ್ಳಿ, 1 ಈರುಳ್ಳಿ ಸರಿಯಾಗಿ ಜಜ್ಜಿ ಒಂದು ರಾತ್ರಿ ನೀರಿನಲ್ಲಿ ನೆನೆಸಿ,  ನಂತರ ಅದನ್ನು ಸೋಸಿ 1.8 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಸೂಚನೆ:  ಇವುಗಳನ್ನು ಹೇಳಿರುವಂತೆ ಸರಿಯಾದ ಪ್ರಮಾಣದಲ್ಲಿ ಬೆಳ್ಳುಳ್ಳಿ,ಮೆಣಸಿನಕಾಯಿ,  ಅರಸಿನ, ಉಪಯೋಗಿಸಿ ಅಥವಾ ಹತ್ತಿರದ ಕೃಷಿ ತಜ್ಞರಿಗೆ ಭೇಟಿ ನೀಡಿ ಮಾಹಿತಿ ಪಡೆದು ನಂತರ ಬಳಸುವುದು ಉತ್ತಮ.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ