Agripedia

ಕೊಬ್ಬರಿಗೆ 1,300 ಬೆಂಬಲ ಬೆಲೆ: ಸಚಿವ ಮಾಧುಸ್ವಾಮಿ

14 June, 2020 4:25 PM IST By:

ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಕೊಬ್ಬರಿ ದರ ಕುಸಿದಿದ್ದು, ತೆಂಗು ಬೆಳೆಗಾರರು ಸಂಕಷ್ಟಕ್ಕೆ ಕೊನೆಗೂ ಸರ್ಕಾರ ನೆರವಿಗೆ ಬಂದಿದೆ.

ಕೊಬ್ಬರಿಗೆ ಬೆಂಬಲ ಬೆಲೆ ಶೀಘ್ರ ನಿಗಧಿಪಡಿಸದಿದ್ದರೆ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು  ಎಂದು ವಿರೋಧ ಪಕ್ಷ ಹಾಗೂ ರೈತರು ಸರ್ಕಾರಕ್ಕೆ ಆಗ್ರಹಿ,ಸಿದದ್ಗರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್ಗೆ 14 ರಿಂದ 18 ಸಾವಿರ ರುಪಾಯಿ ಇತ್ತು. ಈಗ 9 ಸಾವಿರ ರುಪಾಯಿಗೆ ಇಳಿದಿದ್ದರಿಂದ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಲಾಕ್ಡೌನ್ ಸಂದರ್ಭದಲ್ಲಿ ರೈತನ ಬದುಕು ಕಷ್ಟಕರವಾಗಿದೆ ಎಂದು ಸರ್ಕಾರದ ಮೇಲೆ ಒತ್ತಡಹೇರಲಾಗಿತ್ತು.

ರಾಜ್ಯದಲ್ಲಿ ಕೊಬ್ಬರಿ ಬೆಲೆ ಕುಸಿದಿದ್ದರಿಂದ ಕ್ವಿಂಟಲ್‌ಗೆ 1,300 ಬೆಂಬಲ ಬೆಲೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ತಿಳಿಸಿದರು.

ಅವರು ತಾಲ್ಲೂಕಿನ ಕಡಬ ಹೋಬಳಿಯ ಮಾರಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಹೇಳಿದರು.

ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೊಬ್ಬರಿಗೆ ಬೇಡಿಕೆ ಇಲ್ಲದಿರುವುದರಿಂದ ಕ್ವಿಂಟಲ್‌ಗೆ 16,000ರಿಂದ 18,000 ಇದ್ದ ದರ ಈಗ  9,000ಕ್ಕೆ ಕುಸಿದಿದೆ. ಕ್ವಿoಟಲ್‌ಗೆ 1,300 ಬೆಂಬಲ ಬೆಲೆ ಸೇರಿ 10,300ಕ್ಕೆ ನಾಫೆಡ್ ಮೂಲಕ ಖರೀದಿಸಲಾಗುವುದು ಎಂದು ಹೇಳಿದರು.