Agripedia

ಕೆಂಪುಮೂತಿ ಹುಳದ ಕಾಟಕ್ಕೆ ಸಾಯುತ್ತಿವೆ ತೆಂಗಿನ ಮರಗಳು..! ಆತಂಕದಲ್ಲಿ ಬೆಳೆಗಾರರು..!

14 February, 2021 4:01 PM IST By:
coconut

ಕರಾವಳಿ ಪ್ರದೇಶದ ತೆಂಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಂಪು ಮೂತಿ ಹುಳು (ರೆಡ್‌ ಪಾಮ್‌ ವೀವಿಲ್‌) ಬಾಧೆ ಈಗ ಚಿತ್ರದುರ್ಗ ಜಿಲ್ಲೆಯಲ್ಲೂ ಶುರು ವಾಗಿದೆ.ಚಿತ್ರದುರ್ಗ  ಜಿಲ್ಲೆಯಲ್ಲಿ ಇದೇ ಮೊದಲು ತೆಂಗು ಬೆಳೆಗೆ ಕೆಂಪು ಮೂತಿ ಹುಳು(ರೆಡ್‌ ಪಾಮ್‌ ವೀವಿಲ್‌)ಕಾಟ ಶುರುವಾಗಿದೆ. ಘಟ್ಟ ಪ್ರದೇಶಗಳ ತೆಂಗಿನ ಮರಗಳಲ್ಲಿಕಂಡು ಬರುವ ಈ ಹುಳು ಬಯಲು ಸೀಮೆಗೆ ಲಗ್ಗೆ ಇಟ್ಟಿರುವುದು ತೆಂಗು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಮಧ್ಯವಯಸ್ಕ ತೆಂಗಿನ ಮರಗಳಿಗೆ ಹೊಕ್ಕುವ ಈ ಹುಳ ಕ್ರಮೇಣ ಕಾಂಡ ಕೊರೆಯುತ್ತಾ ಇಡೀ ಮರ ಒಣಗಿಸಿ ಬಿಡುತ್ತದೆ. ವಿಶೇಷವೆಂದರೆ, ಈ ಹುಳು ತೆಂಗಿನ ಗಿಡಗಳನ್ನು ಮಾತ್ರ ನಾಶ ಮಾಡುತ್ತದೆ. ಈ ಹುಳು ಗಿಡಕ್ಕೆ ಹೊಕ್ಕಿರುವುದನ್ನು ಸಕಾಲದಲ್ಲಿ ಪತ್ತೆ ಹಚ್ಚಿ, ನಾಶ ಪಡಿಸದಿದ್ದಲ್ಲಿ ಇಡೀ ತೆಂಗಿನ ಗಿಡ ಬಿದ್ದು ಹೋಗುತ್ತದೆ. ಬೆಳೆಗಾರರು ಸಕಾಲಕ್ಕೆ ಎಚ್ಚೆತ್ತುಕೊಳ್ಳದಿದ್ದರೆ ತೋಟ ವೇ ಕೈತಪ್ಪುವ ಭೀತಿ ಎದುರಾಗಿದೆ. ತೋಟಗಾರಿಕೆ ಇಲಾಖೆ ಇದಕ್ಕೆ ಪರಿಹಾರೋಪಾಯ ಸೂಚಿಸಿದೆ.

ತೆಂಗಿನ ಗರಿಗೆ ಪೆಟ್ಟುಬಿದ್ದ ಜಾಗಕ್ಕೆ ವಕ್ಕರಿಸುವ ಕೆಂಪು ಮೂತಿ ಹುಳು ನಿಧಾನವಾಗಿ ಅದರ ರಸ ಹೀರುತ್ತಾ, ಕೊರೆಯುತ್ತಾ ಹೋಗುತ್ತದೆ. ಅದು ಕೇವಲ ಗರಿಯ ಹಂತಕ್ಕೆ ನಿಲ್ಲದೆ, ಕಾಂಡಕ್ಕೂ ಪ್ರವೇಶಿಸಿ, ಇಡೀ ಕಾಂಡದಲ್ಲಿರುವ ರಸ ಹೀರುತ್ತ ತೆಂಗಿನ ಗಿಡವನ್ನು ನಿಸ್ಸಾರಗೊಳಿಸಿ, ಒಣಗುವಂತೆ ಮಾಡುತ್ತದೆ

ಪರಿಹಾರ ಏನು?: 

ಕೆಂಪು ಮೂತಿ ಹುಳು ನಿಗ್ರಹಕ್ಕೆ ಅಂತರ ಬೇಸಾಯ ಮಾಡುವಾಗ ಎಚ್ಚರಿಕೆ ವಹಿಸುವುದು ಸುಲಭದ ಮಾರ್ಗ. ಬೇಸಾಯ ಮಾಡುವಾಗ ತೆಂಗಿನ ಗಿಡಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಕೃಷಿ ಬೆಳೆ ಇಡುವಾಗ ಗಿಡಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು. ಕೆಂಪು ಮೂತಿ ಹುಳು ಪತ್ತೆಯಾದಲ್ಲಿಅದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ನಿಗ್ರಹಿಸಬೇಕು.