ಮಲೆನಾಡಿನ ಪ್ರದೇಶಗಳಲ್ಲಿ ತೆಂಗು ಅಧಿಕ ಇಳುವರಿ ನೀಡುವ ಬೆಳೆಯಾಗಿದ್ದು. ಹಲವಾರು ರೈತರು ಇದರ ಮೇಲೆ ಅವಲಂಬಿತ ಆಗಿರುತ್ತಾರೆ. ಬಹುತೇಕ ರೈತರಿಗೆ ಆಸರೆಯಾದ ಕಲ್ಪವೃಕ್ಷ ತೆಂಗಿನ ಮರಗಳಿಗೆ ಸುಳಿರೋಗ ಕಾಣಿಸಿಕೊಂಡರೆ ಮರಗಳು ಸರದಿಯಂತೆ ಸಾಯುತ್ತವೆ, ಅಷ್ಟೆ ಅಲ್ಲ, ಬದುಕಿದ್ದ ಮರಗಳಿಗೆ ಸುಳಿರೋಗ ರೋಗದ ಪರಿಣಾಮದಿಂದಾಗಿ ಇಳುವರಿಯೂ ಕುಂಠಿತವಾಗುತ್ತದೆ.
ಈ ರೋಗದಿಂದ ತೆಂಗಿನ ಗಿಡ ದಲ್ಲಿ ಸಂಪೂರ್ಣ ಕಾಯಿಗಳು ಉದುರುತ್ತವೆ ಮತ್ತು ಆಗಿರುವ ಕಾಯಿಗಳು ಕೂಡ ಸರಿಯಾಗಿ ಬೆಳೆಯುವುದಿಲ್ಲ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ. ಅದಕ್ಕೋಸ್ಕರ ಒಂದು ನುಸಿಪೀಡೆ ಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಬೇಕು ಎಂದು ಓದಿ.
ನಿರ್ವಹಣಾ ಕ್ರಮಗಳು
* ತೆಂಗಿನ ಗಿಡದಲ್ಲಿ ನುಶಿ ಭಾದೆಯನ್ನು ತಡೆದುಕೊಳ್ಳಲು ತೆಂಗಿನ ಗಿಡಗಳಿಗೆ ಪ್ರತಿಯೊಂದಕ್ಕೂ 50 ಕಿಲೋ ಗ್ರಾಂ ಸಗಣಿ ಗೊಬ್ಬರ, ಎಂ ಓ ಪಿ ( ಪೊಟ್ಯಾಶ್) 3.5 ಕಿಲೋ ಗ್ರಾಂ,ಒಂದು ಕಿಲೋ ಗ್ರಾಂ ಜಿಪ್ಸಂ,50 ಗ್ರಾಂ ಬೋರಾಕ್ಸ್,ಬೇವಿನ ಹಿಂಡಿ 5 ಕಿಲೋ ಗ್ರಾಂ,ಬೆಳೆಗಳಿಗೆ ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕ ಗೊಬ್ಬರಗಳನ್ನು ವರ್ಷದಲ್ಲಿ ಎರಡು ಬಾರಿ ಹಾಕಬೇಕು.ಗಿಡಗಳ ಸುತ್ತಲೂ ಮೂರು ಅಡಿಗಳ ಅಂತರದಲ್ಲಿ, 6 ಇಂಚು ತಗ್ಗನ್ನು ತೆಗೆದು ಹಾಕಿ ಮಣ್ಣಿನೊಂದಿಗೆ ಮಿಶ್ರ ಮಾಡಬೇಕು.
* ನುಸಿ ಬಾಧೆಯನ್ನು ನೋಡಿಕೊಂಡು ವರ್ಷದಲ್ಲಿ ಮೂರು ಬಾರಿ ಏಪ್ರಿಲ್- ಮೇ, ಅಕ್ಟೋಬರ್-ನವೆಂಬರ್, ಡಿಸೆಂಬರ್-ಜನವರಿ ಎಲ್ಲಿ ನೀರಿನಲ್ಲಿ ಕರಗುವ ಗಂಧಕ ಐದು ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಹಾಕಿ ಕಾಯಿ ಗೊಂಚಲಿಗೆ ಸಿಂಪಡಿಸಬೇಕು.ಅಥವಾ ನೀಮಾಜೋಲ್ 7.5 ಎಂ ಎಲ್, ಅಥವಾ ಇಕೋನೀಮಪ್ಲಸ್ 10ml ಪ್ರತಿ ಲೀಟರ್ ನೀರಿನಲ್ಲಿ ಹಾಕಿ ಸಿಂಪಡಿಸಬೇಕು.ಅಥವಾ ಬೇರಿನ ಮೂಲಕ ಸಹ ಕೊಡಬಹುದು, ಒಂದು ವೇಳೆ ಗಿಡಗಳು ಚಿಕ್ಕದಾಗಿದ್ದರೆ ಸಿಂಪರಣೆ ಮಾಡಬಹುದು.
* ತೆಂಗಿನ ಗಿಡದ ಕೆಳಗೆ ಬಿಳಿ ಬೇರುಗಳನ್ನು ಗುರುತಿಸಿ. ಪೆನ್ಸಿಲ್ ಗಾತ್ರದ ಬೇರುಗಳನ್ನು ತೆಗೆದು 45 ಡಿಗ್ರಿ ಯಂತೆ ಬೇರನ್ನು ಕಟ್ ಮಾಡಬೇಕು ನಂತರ ಅದಕ್ಕೆ ಕಾರ್ಬೋಸಲ್ಫಾನ್ 15ml ಮತ್ತು 15ml ನೀರು, ಒಂದು ಕಾಗದಲ್ಲಿ ತೆಗೆದುಕೊಂಡು, ಪೆನ್ಸಿಲ್ ಗಾತ್ರದ ಬೇರುಗಳಿಗೆ ಕಟ್ಟಬೇಕು, ಅದನ್ನು ಕಟ್ಟುವುದರಿಂದ, ಗಿಡಗಳು ಬೇರುಗಳ ಸಹಾಯದಿಂದ ಆ ರಾಸಾಯನಿಕವನ್ನು ಹೀರಿಕೊಳ್ಳುತ್ತವೆ. ಇದಾದ 60 ದಿನಗಳ ನಂತರ ಟಿ ಎಂ ಎ ಯು ಅಗ್ರೋ ಬಯೋಸೈಡ್ @30 ml ಪ್ರತಿ ಮರಕ್ಕೆ ಉಣಿಸಬೇಕು,ಇದರಿಂದ ನುಸಿಪೀಡೆ ಅನ್ನು ನಿರ್ವಹಣೆ ಮಾಡಬಹುದು.
* ಅತಿ ಹೆಚ್ಚು ನುಸಿಪೀಡೆ ಗೆ ಒಳಗಾದ ಕಾಯಿಗಳು ಕೇಳುವುದರಿಂದ ತೋಟದಲ್ಲಿ ರೋಗವನ್ನು ತಡೆಗಟ್ಟಬಹುದಾಗಿದೆ.
ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ