ಅಂತಾರಾಷ್ಟ್ರೀಯ ಗುಣಮಟ್ಟದ ಬ್ಯಾಡಗಿ ಮೆಣಸಿನಕಾಯಿಗ ದಿನೇ ದಿನೇ ಬೇಡಿಕೆ ಹೆಚ್ಚುತ್ತಲೇ ಇದೆ. ಒಂದು ಕ್ವಿಟಂಲ್ ಮೆಣಸಿನಕಾಯಿಗೆ ಬೆಲೆ 50 ಸಾವಿರ ರೂಪಾಯಿ ಅಂದರೆ ನಂಬಲಕ್ಕಾಗುವುದಿಲ್ಲ.
Swiggy: ಸ್ವಿಗ್ಗಿಯಲ್ಲಿ ₹ 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ..!
ಆದರೂ ಇದು ಸತ್ಯ. ಬ್ಯಾಡಗಿ ಮೆಣಸಿನ ಕಾಯಿಗೆ ಮಾರುಕಟ್ಟೆಯಲ್ಲಿ ಚಿನ್ನದ ದರವನ್ನು ಮೀರಿಸಿ ಕ್ವಿಂಟಾಲ್‌ಗೆ 51,315 ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ
ಪ್ರತಿ ಎಕರೆಗೆ ಅಂದಾಜು 1 ಲಕ್ಷ ರೂಪಾಯಿವರೆಗೆ ಲಾಭ ರೈತರ ಕೈಸೇರ್ತಿದೆ. ಅದರಲ್ಲೂ ಬ್ಯಾಡಗಿ ಮೆಣಸಿನಕಾಯಿಗೆ ಇದೀಗ ಬಂಗಾರದ ಬೆಲೆ ಬರುತ್ತಿದೆ. ಒಂದು ಕ್ವಿಂಟಲ್ ಮೆಣಸಿನಕಾಯಿ ದರ ಸುಮಾರು 1 ತೊಲ ಬಂಗಾರದ ದರಕ್ಕೆ ಸರಿಸಮ ಅನ್ನೋಮಟ್ಟಿಗೆ ಬೆರೆ ಏರಿಕೆಯಾಗಿದೆ.
ಬ್ಯಾಡಗಿ ಮಾರುಕಟ್ಟೆಯಲ್ಲಿ ಇತೀಹಾಸದಲ್ಲೇ ಇದು 2ನೇ ಅತ್ಯದಿಕ ಬೆಲೆಯಾಗಿದೆ. ಮೆಣಸಿನಕಾಯಿ ಗುಣಮಟ್ಟ ಆಧರಿಸಿ ಮಾರುಕಟ್ಟೆಯಲ್ಲಿ ದರ ನಿಗದಿ ಮಾಡಲಾಗುತ್ತದೆ. ಲಕ್ಷಾಂತರ ಮೆಣಸಿನಕಾಯಿ ಚೀಲಗಳಲ್ಲಿ ಒಂದರಿಂದ ಎರಡು ಅಥವಾ ನಾಲ್ಕು ಚೀಲ ಮೆಣಸಿನಕಾಯಿಗಳಿಗೆ ಈ ರೀತಿ ದರ ದೊರೆಯುತ್ತದೆ.
ನೈಸರ್ಗಿಕ ಬಣ್ಣ ತಯಾರಿಕೆಗೆ ಬಳಕೆ
ಅಷ್ಟಕ್ಕೂ ಸಾವಯವ ಬಣ್ಣ ತಯಾರಿಕೆಗೆ ಬ್ಯಾಡಗಿ ಮೆಣಸು ಹೆಚ್ಚು ಬಳಕೆಯಾಗುತ್ತದೆ. ಇದರಲ್ಲಿರುವ ‘ಪ್ಯಾಫ್ರಿಕ’ ಅಂಶ ಸಾವಯವ ಬಣ್ಣದ ತಯಾರಿಗೆ ಸೂಕ್ತವಾದ ಹಿನ್ನೆಲೆಯಲ್ಲಿ, ಮೆಣಸಿನಲ್ಲಿ ರುಚಿ, ಘಾಟು, ಖಾರ ನೀಡುವ ‘ಒಲಿಯೊರೆಸಿನ್’ ಕೂಡ ಅಧಿಕವಾಗಿದ್ದು, ಇದನ್ನು ಬೇರ್ಪಡಿಸಿ, ಸಿದ್ಧ ಆಹಾರ ಉತ್ಪನ್ನಗಳು, ಪಾನೀಯ, ಸಾಸ್, ಔಷಧ ತಯಾರಿಗೆ ಬಳಸಲಾಗುತ್ತದೆ.
ವಿಶ್ವದ ಅತಿದೊಡ್ಡ ಸಿಲಿಂಡರಾಕಾರದ ಅಕ್ವೇರಿಯಂ ಸ್ಫೋಟ: 1,500ಕ್ಕೂ ಹೆಚ್ಚು ಮೀನುಗಳ ಸಾವು
ಎಣ್ಣೆ, ನೈಲ್‌ಪಾಲಿಶ್ ಹಾಗೂ ಲಿಪ್‌ಸ್ಟಿಕ್ ತಯಾರಿಸುವುದಕ್ಕೂ ಹೆಚ್ಚಾಗಿ ಬಳಸಬೇಕಿರುವ ಕಾರಣ ಆ ಕಂಪನಿಗಳೂ ಬ್ಯಾಡಗಿ ಮೆಣಸಿನ ಕಾಯಿಯನ್ನು ಹೆಚ್ಚಾಗಿ ಖರೀದಿಸುತ್ತವೆ.
ಬೇಡಿಕೆ ಎಲ್ಲಿಂದ?
ಅಮೆರಿಕ, ಜರ್ಮನ್, ಜಪಾನ್, ಮಧ್ಯ ಏಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಕೊರಿಯ ಹಾಗೂ ಇನ್ನಿತರ ರಾಷ್ಟ್ರ.