Agripedia

ಕಾಯಿ ಕೊರಕ ಹಾಗೂ ಹಣ್ಣು ಕೊರಕಗಳ ನಿಯಂತ್ರಣಕ್ಕೆ ಬಳಸಿ ಸಾವಯುವ ಬ್ರಹ್ಮಾಸ್ತ್ರ

22 November, 2020 9:58 AM IST By:

ನಾವು ನೀಮಾಸ್ತ್ರವನ್ನು ಬಳಸುವ ಮೂಲಕ ರಸಹೀರುವ ಹಾಗೂ ಸಣ್ಣ ಕೀಟಗಳನ್ನು ನಿಯಂತ್ರಿಸಬಹುದು ಆದರೆ ಅದಕ್ಕಿಂತ ಹೆಚ್ಚು ಶಕ್ತಿಶಾಲಿಯಾದಂತಹ ಕಾಯಿಕೊರಕ ಹಾಗು ಹಣ್ಣು ಕೊರಕ ಕೀಟಗಳನ್ನು ನೀಮಾಸ್ತ್ರದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಇವುಗಳನ್ನು ನಿಯಂತ್ರಿಸಲು ನೀಮಾಸ್ತ್ರಕ್ಕಿಂತ ಹೆಚ್ಚು ಶಕ್ತಿಶಾಲಿಯಾದ ಸಾವಯುವ ಔಷಧಿ ನಮಗೆ ಬೇಕಾಗಿದೆ, ಆದರೆ ನಾನು ಅದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ.

 ನೀಮಾಸ್ತ್ರ ಕ್ಕಿಂತ ಶಕ್ತಿಶಾಲಿಯಾದ ಔಷಧಿ ಎಂದರೆ ಅದು ಬ್ರಹ್ಮಾಸ್ತ್ರ, ಬ್ರಹ್ಮಾಸ್ತ್ರದಿಂದ ನಾವು ರಸಹೀರುವ ಕೀಟಗಳು, ಸಣ್ಣ ಕೀಟಗಳು, ಕಾಯಿಕೊರಕ ಹಾಗೂ ಹಣ್ಣು ಕೊರಕ ಕೀಟಗಳನ್ನು ಕೂಡ ನಾವು ಇದರ ಮೂಲಕ ನಿಯಂತ್ರಿಸಬಹುದು, ಬ್ರಹ್ಮಾಸ್ತ್ರ ಒಂದು ಸಾವಯುವ ಕೀಟನಾಶಕವಾಗಿ ಇದ್ದು ಇದನ್ನು ಹಲವಾರು ಗಿಡದ ಎಲೆಗಳ ದಿಂದ ತಯಾರಿಸಲಾಗಿದೆ.

ಬೇಕಾದ ಸಾಮಗ್ರಿಗಳು:

 ದೇಸಿ ಹಸುವಿನ ಗಂಜಲ-20 ಲೀಟರ್

 ಬೇವಿನ ಎಲೆ-5ಕೆಜಿ

ದಾಳಿಂಬೆ -2 ಕೆಜಿ

ಪರಂಗಿ -2ಕೆಜಿ

ಸೀತಾಫಲ  -2ಕೆಜಿ 

ಹೊಂಗೆ -2ಕೆಜಿ

ಧತುರಾ -2ಕೆಜಿ

ಪೇರಲ -2ಕೆಜಿ

ಔಡಲ -2 ಕೆಜಿ

 ನೀವು ಇಷ್ಟರಲ್ಲಿ ಐದು ರೀತಿಯ ಕಹಿ ಇರುವಂತಹ ಗಿಡದ ಎಲೆಗಳನ್ನು ನಾವು ಬಳಸಬೇಕು, ಅದರಲ್ಲಿ ಬೇವಿನ ಎಲೆ ಕಡ್ಡಾಯ ಉಳಿದ ನಾಲ್ಕು ಎಲೆಗಳು ನಮಗೆ ಸಿಗುವ ಎಲೆಗಳನ್ನು ನಾವು ಬಳಸಬಹುದು.

ತಯಾರಿಕೆ ಪ್ರಕ್ರಿಯೆ:

 ಮೊದಲಿಗೆ ಐದು ತರವಾದ ಎಲೆಗಳನ್ನು ಪೇಸ್ಟನ್ನು ಮಾಡಿಕೊಳ್ಳಬೇಕ. ಒಂದು ಗಡಿಗೆಯಲ್ಲಿ 20 ಲೀಟರ್ ಗಂಜಲವನ್ನು ಹಾಕಿ ಅದಕ್ಕೆ ಎಲ್ಲಾ ಐದು ತರಹದ ಎಲೆಗಳನ್ನು ಹಾಕಿ ಚೆನ್ನಾಗಿ ಕಲಸಬೇಕು, ಇದಾದ ನಂತರ ಅದನ್ನು ಒಲೆಯ ಮೇಲೆ ಇಟ್ಟು 4 ಕುದಿ ಬರುವ ಹಾಗೆ ಕುದಿಸಬೇಕು, ನಂತರ ಇದನ್ನು ಒಲೆಯಿಂದ ಕೆಳಗಿಳಿಸಿ ಒಂದು ನೆರಳಿನ ಜಾಗದಲ್ಲಿಟ್ಟು 48 ಗಂಟೆಗಳವರೆಗೆ ಹಾಗೆ ಬಿಡಬೇಕು, ಇದರಿಂದ ಎಲ್ಲ ಎಲೆಗಳು ತಮ್ಮಲ್ಲಿರುವ ಅಂಶಗಳನ್ನು ಗಂಜಲದಲ್ಲಿ ಬಿಡುತ್ತವೆ. 48 ಗಂಟೆಗಳ ಬಳಿಕ ನಮ್ಮ ಬ್ರಹ್ಮಾಸ್ತ್ರ ತಯಾರಾಗಿದೆ.

 ಬಳಕೆ:

 ನಾವು ಪ್ರತಿ 16 ಲೀಟರ್ ಸ್ಪ್ರೇಯರ್ ಕ್ಯಾನ್ಗೆ ಅರ್ಧ ಲೀಟರ್ ಬ್ರಹ್ಮಾಸ್ತ್ರವನ್ನು ಉಪಯೋಗಿಸಬೇಕು.

 ಅಥವಾ ಎರಡುನೂರು ಲೀಟರಿಗೆ 6 ಲೀಟರ್ ಬ್ರಹ್ಮಾಸ್ತ್ರವನ್ನು ಬಳಸಬೇಕು.

 ಉಪಯೋಗಗಳು:

 ಬ್ರಹ್ಮಾಸ್ತ್ರವನ್ನು ಬಳಸುವ ಮೂಲಕ ನಾವು ರಸಹೀರುವ ಕೀಟಗಳು, ಹಾಗೂ ಕಂಬಳಿಹುಳದ ಜಾತಿಗೆ ಸೇರಿದಂತಹ ಕಾಯಿಕೊರಕ ಹಾಗೂ ಹಣ್ಣು ಕೊರಕಗಳನ್ನು ನಿಯಂತ್ರಿಸಬಹುದು.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ