Agripedia

ಹೈಡ್ರೋಪೋನಿಕ್ಸ್ ವಿಧಾನದಿಂದ ಮಿತವಾಗಿ ನೀರು ಬಳಸಿ ತರಕಾರಿ ಬೆಳೆಯುವುದು

21 January, 2021 6:31 AM IST By:
Hydrponics

ಇತ್ತೀಚಿನ ದಿನಗಳ ಕೃಷಿಯಲ್ಲಿ ನೀರಿನ ಬಳಕೆ ಹೆಚ್ಚುತ್ತಿದ್ದು, ಇದರ ಜೊತೆಗೆ ಅತಿಯಾದ ಬೋರವೆಲ್ ಕೊರೆತದಿಂದ ಅಂತರ್ಜಲಮಟ್ಟ ಸಹ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದರ ಪರಿಣಾಮ ಬೆಳೆಗಳಿಗೆ ಸರಿಯಾದ ಪ್ರಮಾಣ ನೀರು ಸಿಗದೇ ರೈತರು ಕಂಗಾಲಾಗುತ್ತಿದ್ದಾರೆ. ಇದಕ್ಕಾಗಿಯೇ ಹೈಡ್ರೋಪೊನಿಕ್ಸ್ ಎಂಬ ತಂತ್ರಜ್ಞಾನ ಬಂದಿದೆ

ಈ ಒಂದು ವಿಧಾನದಲ್ಲಿ ಬೆಳೆಗಳನ್ನು ಮಣ್ಣಿಲ್ಲದೆ , ಮಿತವಾದ ನೀರನ್ನು ಬಳಸಿಕೊಂಡು ಬೆಳೆಯಬಹುದು. ಅನೇಕ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯನ್ನು ಕೈಗೊಂಡಿರುವ ರೈತರು ಸಹ ಈ ಒಂದು ವಿಧಾನ ಬಳಸಿಕೊಂಡು ರಾಸುಗಳಿಗೆಬೇಕಾದ ಮೇವನ್ನು ಉತ್ಪಾದಿಸುತ್ತಿರುವುದು ಇದರ ಜನಪ್ರಿಯತೆ ತಿಳಿಸುತ್ತದೆ. ಹಾಗೂ ನಗರದ ಜನರು ತಮ್ಮ ತಾರಸಿನಲ್ಲಿ / ಮನೆಯಲ್ಲಿ ತಮಗೆ ಅಗತ್ಯವಾದ ತರಕಾರಿ/ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.ಈ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರಿನ IIHR ಸಂಸ್ಥೆಯು ದ್ರವ ರೂಪದ ಗೊಬ್ಬರವನ್ನು ತಯಾರಿಸಿದೆ.ಅದೇ ಅರ್ಕಾಸಸ್ಯಪೋಷಕ ರಸ.

ಏನಿದು ಅರ್ಕಾಸಸ್ಯ ಪೋಷಕ ರಸ :

ಈ ಒಂದು ದ್ರಾವಣ ರೂಪದ ಗೊಬ್ಬರವು, ( ದ್ರಾವಣ A ಮತ್ತು ದ್ರಾವಣ B ಎಂಬ ಏರಡು ದ್ರಾವಣದಲ್ಲಿ) ಎಲ್ಲಾ ಸೂಕ್ಷ್ಮಪೋಷಕಾಂಶಗಳು ( ಕಬ್ಬಿಣ, ಮ್ಯಾಂಗನೀಸ್, ತಾಮ್ರ , ಜಿಂಕ್ , ಬೋರಾನ್ ) ಹಾಗೂ ಸ್ಥೂಲ ಪೋಷಕಾಂಶಗಳು ( ನೈಟ್ರೋಜನ್, ಪಾಸ್ಪರಸ್) ಮುಂತಾದವುಗಳನ್ನು ಒಳಗೊಂಡಿದ್ದು, ಸಸ್ಯದ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.

ಈ ಒಂದು ದ್ರವ ರೂಪದ ಗೊಬ್ಬರವನ್ನು ತರಕಾರಿ ಬೆಳೆಗಳಾದ ಕ್ಯಾಬೇಜ್, ಟೊಮೆಟೊ, ಮೆಣಸಿನಕಾಯಿ, ಸೌತೆಕಾಯಿ, ಹೀರೆಕಾಯಿ, ಅವರೆ, ಅಲಸಂಧಿ, ಡೋಲಿಕೋಸ್ ಬೀನ್ಸ್, ಬಟಾಟೆ ( peas) ಹಾಗೂ ರಾಜಗಿರಿ ( Amaranthus) , ಕೊತ್ತಂಬರಿ, ಮತ್ತು ಪಾಲಕ್ ಸೊಪ್ಪುಗಳಲ್ಲೂ ಸಹ ಬಳಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿಭೇಟಿ ನೀಡಿ : https://www.iihr.res.in/arka-sasya-poshak-ras-liquid-nutrient-formulation-soilless-vegetable-production

ಲೇಖನ:ಆತ್ಮಾನಂದ ಹೈಗರ