Agripedia

ಕರ್ನಾಟಕ ಕೃಷಿ ಪ್ರವಾಸೋದ್ಯಮ: ಇದರ ಅಗತ್ಯತೆ ಏನು? ಇದರಿಂದ ರೈತರಿಗಾಗುವ ಲಾಭವೇನು? ಇಲ್ಲಿದೆ ವಿವರ

19 June, 2023 12:44 PM IST By: Kalmesh T
Agritourism in Karnataka: What is the benefit for farmers? Here is the detail

Agritourism in Karnataka: ಕೃಷಿ ಪ್ರವಾಸೋದ್ಯಮ ಎಂದರೇನು? ಇದರ ಅಗತ್ಯವೇನು? ಇದರಿಂದ ರೈತರಿಗೆ ಹೇಗೆಲ್ಲ ಲಾಭವಾಗುತ್ತದೆ ಎನ್ನುವ ಕುರಿತು ಇಲ್ಲಿದೆ ವಿವರವಾದ ಮಾಹಿತಿ.

ಕೃಷಿ ಪ್ರವಾಸೋದ್ಯಮ ಎಂದರೇನು | What Is AgriTourism 

ನಮ್ಮ ಕೃಷಿ,ಆಹಾರ,ಗ್ರಾಮೀಣ ಸಂಸ್ಕೃತಿ ಮತ್ತು ಕಲೆಯನ್ನು ಪರಿಚಯಿಸಲು ಪ್ರವಾಸಿಗರನ್ನು ಕೃಷಿ ಭೂಮಿಗೆ ಕರೆತರುವುದು ಮತ್ತು ಅವರಿಗೆ ಕೃಷಿ ಆಧಾರಿತ ಚಟುವಟಿಕೆಗಳನ್ನು ತೋರಿಸುವುದು ಮತ್ತು ಅದರಲ್ಲಿ ಭಾಗವಹಿಸಲು ಅವಕಾಶ ನೀಡುವುದು.

ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರ ಮಾರಾಟ ಮಾಡುವುದು, ಆತಿಥ್ಯ ಮತ್ತು ಮನೋರಂಜನೆ ಇವುಗಳನ್ನು ಬೆಸೆದು ರೂಪಿಸಲಾಗುವ ಯೋಜನೆಯನ್ನು ಕೃಷಿ ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ.

ಕೃಷಿ ಪ್ರವಾಸೋದ್ಯಮದ ಅಗತ್ಯವೇನು? | What is the need for agritourism?

* ಕೃಷಿ ಕುಟುಂಬದ ಒಟ್ಟಾರೆ ಆದಾಯದಲ್ಲಿ ಶೇ 35% ಬೆಳೆ ಬೆಳೆಯುವುದರ ಮೂಲಕ ಮತ್ತು 15% ಪಶುಸಂಗೋಪನೆ ಮೂಲಕ,ಹೀಗೆ ಒಟ್ಟು ಶೇ 50% ಆದಾಯ ಕೃಷಿ ಮೂಲದಿಂದ ಮತ್ತು ಉಳಿದ ಶೇ 50% ಕೂಲಿ, ಪಿಂಚಣಿ ಮತ್ತು ಇತರೆ ಮೂಲಗಳ ಮೇಲೆ ಅವಲಂಭಿತವಾಗಿದೆ.

* ಈಗಾಗಲೇ ಗರಿಷ್ಠ ಮಟ್ಟದ ಉತ್ಪಾದನೆ ಮತ್ತು ಮುಕ್ತ ಮಾರುಕಟ್ಟೆ ನೀತಿಯಿಂದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತಿಲ್ಲ ಮತ್ತು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾಗುತ್ತಿದೆ.ಬೆಲೆ ಮತ್ತು ಬೆಳೆ ನಷ್ಟ ಕೃಷಿಕರನ್ನು ಆರ್ಥಿಕವಾಗಿ ಸೋಲುವಂತೆ ಮಾಡಿದೆ.

* ಹಳ್ಳಿಗಳಲ್ಲಿ ಕೃಷಿ ಆದಾಯ ಹೊರತುಪಡಿಸಿ ಇತರೆ ಆದಾಯ ಮೂಲಗಳಿಲ್ಲದೆ ಇರುವುದರಿಂದ ಹಳ್ಳಿಯ ನಿವಾಸಿಗಳು ಜೀವನ ನಿರ್ವಹಣೆಗೋಸ್ಕರ ಅನಿವಾರ್ಯವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

* ಕೃಷಿ,ಕೃಷಿ ಭೂಮಿ,ಹಳ್ಳಿಗಳಲ್ಲಿ ಕೃಷಿಕರನ್ನು ಉಳಿಸಲು ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಕೃಷಿಯೊಂದಿಗೆ ಬೆಸೆದು ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ,ಕೃಷಿಕರಿಗೆ ಉದ್ಯೋಗವಾಕಶವನ್ನು ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಆದಾಯ ಪಡೆಯಲು ಕೃಷಿ ಪ್ರವಾಸೋದ್ಯಮ ನೆರವು ನೀಡುತ್ತದೆ.

* ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಸಬಲೀಕರಣದ ಪರಿಕಲ್ಪನೆಯ ಈ ಯೋಜನೆ ಕೃಷಿಕರಿಗೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಆದಾಯ ನೀಡುವುದರ ಜೊತಗೆ ಅವರ ಜೀವನ ಮಟ್ಟವನ್ನು ಸುಧಾರಿಸುತ್ತದೆ.

* ಗ್ರಾಮೀಣ ಯುವಕರು ಮತ್ತು ಮಹಿಳೆಯರಿಗೆ ಹಳ್ಳಿಗಳಲ್ಲಿ ಉದ್ಯೋಗವಕಾಶ ಸೃಷ್ಟಿಸಲು ಮತ್ತು ಕೃಷಿ ಆದಾಯದ ಜೊತೆಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸುವ ಮೂಲಕ ಹಳ್ಳಿಗಳಿಂದ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದರ ಜೊತೆಗೆ ಕೃಷಿ ಮತ್ತು ಗ್ರಾಮೀಣ ಪ್ರದೇಶಗಳನ್ನು ಉಳಿಸಬೇಕಿದೆ,ಕೃಷಿ ಕೆಲಸವನ್ನು ಗೌರವ ಮತ್ತು ಘನತೆಯ ವೃತ್ತಿಯನ್ನಾಗಿ ಮಾಡಬೇಕಿದೆ.

* ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಕೃಷಿ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿರುವ ಮಾದರಿಯಲ್ಲಿ ಕರ್ನಾಟಕದಲ್ಲಿ ಕೃಷಿ ಪ್ರವಾಸೋದ್ಯಮ ನೀತಿ ಜಾರಿ ಮಾಡಬೇಕಿದೆ.ಮಹಾರಾಷ್ಟ್ರ ರೈತರು ಯಶಸ್ವಿಯಾಗಿ ಕೃಷಿ ಪ್ರವಾಸೋದ್ಯಮ ಕೇಂದ್ರ ನೆಡೆಸುತ್ತಿದ್ದಾರೆ ಮತ್ತು ಆದಾಯ ಗಳಿಸುತ್ತಿದ್ದಾರೆ.

* ಕೃಷಿ ಪ್ರವಾಸೋದ್ಯಮ ಸಂಬಂಧ ಮಾಹಿತಿ ನೀಡಲು ಪುಸ್ತಕ ಹೊರತರಲಾಗುತ್ತಿದೆ ಮತ್ತು ಕೃಷಿ ಪ್ರವಾಸೋದ್ಯ ನೀತಿ ಜಾರಿ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.ಈ ವಿಚಾರವಾಗಿ ತಿಳಿದವರು ಮತ್ತು ಆಸಕ್ತರು ತಮ್ಮ ಅಗತ್ಯ ಸಲಹೆ,ಸಹಕಾರ ನೀಡಲು ಕೆಳಗೆ ನೀಡಿರುವ ನನ್ನ ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಲು ಕೋರಲಾಗಿದೆ.

ಲೇಖನ: ಪ್ರಶಾಂತ್ ಜಯರಾಮ್, ಮೊಬೈಲ್ :9342434530

Photo Courtesy : Pexels