ಕೃಷಿ ಸುಧಾರೆಣೆಗೆ ಅಂಗೀಕರಿಸಲಾಗಿರುವ ಮಸೂದೆಗಳು ಐತಿಹಾಸಿಕ. ಇವುಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಮದ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದ್ದರೆ ವಿರೋಧ ಪಕ್ಷದವರು ಈ ಮಸೂದೆಗಳು ರೈತರಿಗೆ ಮಾರಕವಾಗಿವೆ ಎಂದು ಪ್ರತಿಭಟನೆ ನಡೆಸುತ್ತಿವೆ. ಹೊಸ ಮಸೂದೆಗಳು ರೈತರನ್ನು, ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳ ಸೆರೆಯಾಗುವಂತೆ ಮಾಡುತ್ತಿವೆ ಎಂದು ಆರೋಪಿಸಿ ದೆಹಲಿಯಲ್ಲಿ ದೊಡ್ಡ ಪ್ರಮಾಣದ ಹೋರಾಟವೂ ನಡೆಯುತ್ತಿದೆ.
ಕೃಷಿ ಕಾಯ್ದೆಗಳ ಸುಧಾರಣೆಯ ಅಗತ್ಯತೆ, ಮಹತ್ವ, ಕೃಷಿ ಸುಧಾರಣೆ ಪ್ರಯೋಜನಗಳು, ಈ ಕಾಯ್ದೆಗಳ ಬಗ್ಗೆ ತಪ್ಪು ಕಲ್ಪನೆ, ಈ ಕಾಯ್ದೆಗಳ ನಿಜಸ್ಥಿತಿ, ಮೊದಲು ಮತ್ತು ಕಾಯ್ದೆಗಳು ಜಾರಿಯಾದ ನಂತರ ಸೇರಿದಂತೆ ಸಮಗ್ರ ಮಾಹಿತಿ ಇಲ್ಲಿ ನೀಡಲಾಗಿದೆ.
ಈ ಕಾಯ್ಕೆಯ/ಸುಧಾರಣೆ ಅಗತ್ಯತೆ:
ಆರ್ಥಿಕ ಉದಾರೀಕರಣದ ಹೊರತಾಗಿಯೂ ಕೃಷಿ ಮತ್ತು ಇತರ ಕ್ಷೇತ್ರಗಳ ನಡುವಿನ ಅಸಮಾನತೆ ಮನಂಗಂಡು ಈ ಕಾಯ್ದೆಗಳು ರೂಪಿಸಲಾಗಿದೆ.
- ವಿಘಟಿತ (ತುಂಡು ತುಂಡಾದ) ಮಾರುಕಟ್ಟೆಗಳು ಹಾಗೂ ಮಾರುಕಟ್ಟೆಗಳ ಕೊರತೆ ಮತ್ತು ಹೆಚ್ಚಿನ ಮಾರುಕಟ್ಟೆ ಶುಲ್ಕಗಳು
- ಅಸಮರ್ಪಕ ಮೂಲಭೂತ ಸೌಕರ್ಯ ಮತ್ತು ಸಾಲದ ಸೌಲಭ್ಯಗಳು
- ಮಾಹಿತಿಯಲ್ಲಿ ಅಸಮರೂಪತೆ (ಮಾಹಿತಿ ಒಂದೇ ತೆರನಾಗಿ ಇಲ್ಲದಿರುವುದು)
- ಪರವಾನಿಗೆಯಲ್ಲಿ ನಿರ್ಭಂದ
1) ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020
ಒಂದನೇಯ ಮಸೂದೆಯ ಪ್ರಕಾರ ಲಾಭದಾಯಕ ಬೆಲೆಗಾಗಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಹಾಗೂ ಕೊಳ್ಳುವಲ್ಲಿ “ಆಯ್ಕೆಯ ಸ್ವಾತಂತ್ರ್ಯ” ಇರುತ್ತದೆ
- ಎ.ಪಿ.ಎಮ್.ಸಿ ಆವರದಣದ ಹೊರಗೆ ಸಮರ್ಥ, ಪಾರದರ್ಶಕ ಮತ್ತು ತಡೆರಹಿತ ಮುಕ್ತ ಅಂತರ ಮತ್ತು ಅಂತರ-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಮಾಡಲು ಸಹಕಾರಿಯಾಗಿದೆ.
- ಎ.ಪಿ.ಎಮ್.ಸಿ ಗಳು ಕಾರ್ಯನಿರ್ವಹಿಸುವದನ್ನು ಮುಂದುವರೆಸುತ್ತವೆ : ಈ ಕಾಯ್ದೆ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ಮಾರ್ಗಗಳನ್ನು ಒದಗಿಸುತ್ತದೆ.
- ಕನಿಷ್ಠ ಬೆಂಬಲ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ
- ಕಾರ್ಯವಿಧಾನದ ಅಗತ್ಯತೆಯಂತೆ ಒಂದೇ ದಿನ ಅಥವಾ 3 ಕೆಲಸದ ದಿನಗಳಲ್ಲಿ ರೈತರಿಗೆ ಪಾವತಿ ಮಾಡಲಾಗುತ್ತದೆ.
- ಆನ್‍ಲೈನ್ ವ್ಯಾಪಾರವನ್ನು ಮಾಡಬಹುದು.
2) ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020
ಎರಡನೇಯ ಮಸೂದೆಯ ಪ್ರಕಾರ ರಾಷ್ಟ್ರೀಯ ಚೌಕಟ್ಟಿನ ಮೂಲಕ ರೈತರು ಕೃಷಿ ವ್ಯಾಪಾರ ಸಂಸ್ಥೆಗಳು, ಸಂಸ್ಕರಣೆಗಾರರು, ಸಗಟು ವ್ಯಾಪಾರಿಗಳು, ರಫ್ತುದಾರರು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೊತೆಗೆ ಭವಿಷ್ಯದ ಕೃಷಿ ಉತ್ಪನ್ನಗಳ ಮಾರಾಟ ನ್ಯಾಯಯುತ ಮತ್ತು ಪಾರದರ್ಶಕ, ಪರಸ್ಪರ ಒಪ್ಪಿದ ಸಂಭಾವನೆ ಬೆಲೆ ಚೌಕಟ್ಟಿನಲ್ಲಿ ನಿರ್ವಹಿಸಲು ಅನುಕೂಲ ಮಾಡಿಕೊಡುವುದು. ಕೇಂದ್ರ ಸರಕಾರದ ಮಾದರಿ ಕೃಷಿ ಒಪ್ಪಂದಗಳಿಗೆ ಮಾರ್ಗಸೂಚಿಗಳು, ಉತ್ಪನ್ನಗಳ ಬೆಲೆಯನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು.
3) ರೈತರು ಮತ್ತು ಖರೀದಾರರ ಹಕ್ಕುಗಳನ್ನು ರಕ್ಷಿಸುವುದು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಈ ಮಸೂದೆಯ ಪ್ರಕಾರ ಅಸಾಧಾರಣ ಪರಿಸ್ಥಿತಿಯಲ್ಲಿ ಮಾತ್ರ ಕಾಯ್ದೆ ಜಾರಿಗೆ ಬರುತ್ತದೆ.
ಅಸಾಧಾರಣ ಪರಿಸ್ಥಿತಿಗಳಾದ ಯುದ್ದ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಹಾಗೂ ನೈಸರ್ಗಿಕ ವಿಕೋಪಗಳು ಸಮಯದಲ್ಲಿ ಈ ಕಾಯ್ದೆಯ ಪ್ರಕಾರ ಬೆಲೆ ಏರಿಕೆಯ ಆಧಾರದ ಮೇಲೆ ಮಾತ್ರ ಸ್ಟಾಕ ಮಿತಿಗಳನ್ನು ಹೇರುವುದು ಮತ್ತು ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಶೇಕಡಾ 100 ಹೆಚ್ಚಳ ಮತ್ತು ಕೆಡದಂತಹ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಶೇಕಡಾ 50 ಹೆಚ್ಚಳ ಇದ್ದರೆ ಮಾತ್ರ ಅದನ್ನು ವಿಧಿಸಬಹುದು.
ಕೃಷಿ ಸುಧಾರಣೆಗಳ ಪ್ರಯೋಜನಗಳು
- ಏಕೀಕೃತ ಮಾರುಕಟ್ಟೆ
- ರೈತರು ತಮ್ಮ ಉತ್ಪನ್ನಗಳನ್ನು ಎ.ಪಿ.ಎಮ್.ಸಿಗಳ ಜೊತೆಗೆ ಬೇರೆ ಕಡೆ ಎಲ್ಲಿ ಉತ್ತಮ ಬೆಲೆ ದೊರೆಯುತ್ತದೆ ಅಲ್ಲಿ ಮಾರಾಟ ಮಾಡಲು ಅವಕಾಶವನ್ನು ಒದಗಿಸಲಾಗಿದೆ.
- ಎ.ಪಿ.ಎಂ.ಸಿ ಯ ಏಕಸ್ವಾಮ್ಯ ಹತೋಟಿಯ ಅಂತ್ಯ
- ಕನಿಷ್ಟ ಬೆಂಬಲ ಬೆಲೆಯು ರೈತರಿಗೆ ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುವುದು ಹಾಗೂ ಇದು ಮುಂದುವರೆಯುತ್ತದೆ.
- ರೈತರ ಹಕ್ಕುಗಳು ಕಾನೂನಿನ ಚೌಕಟ್ಟಿನ ಒಳಗೆ ರಕ್ಷಿಸಲ್ಪಡುತ್ತವೆ
- ಮಾರುಕಟ್ಟೆ ಶುಲ್ಕ, ತೆರಿಗೆ ಇತ್ಯಾದಿಗಳಲ್ಲಿ ಕಡಿತ ಮತ್ತು ಉತ್ತಮ ಬೆಲೆ ಆವಿಷ್ಕಾರ
- ರೈತನ ಹೊಲದ ಸನಿಹದಲ್ಲೇ ಮೂಲಸೌಕರ್ಯಗಳ ಅಭಿವೃದ್ಧಿ
- ಗುತ್ತಿಗೆ ಕೃಷಿ: ಬೆಲೆ ಆಶ್ವಾಸನೆಯ ಒಂದು ರೂಪ ಮತ್ತು ಆಹಾರ ಸಂಸ್ಕರಣಾ ವಲಯದೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
- ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಕೂಡ ಕೃಷಿ ಲಾಭದಾಯಕವಾಗಬಹುದು
ಕಾಯ್ದೆಯ ಮೊದಲು ಹಾಗೂ ನಂತರ ಆಗುವ ಇರುವ ವ್ಯತ್ಯಾಸ
ಸುಧಾರಣೆಗಳ ಮೊದಲು |
ಸುಧಾರಣೆಗಳ ನಂತರ |
ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಂಡಿಯಲ್ಲಿ ಮಾತ್ರ ಮಾರಾಟ ಮಾಡಬಹುದು |
ಎಪಿಎಂಸಿ ಮಂಡಿಯಲ್ಲಿ ಮಾರಾಟ ಮಾಡಲು ಅಥವಾ ಬೇರೆ ಯಾವುದೇ ಮಾರಾಟಗಾರರನ್ನು ಆಯ್ಕೆ ಮಾಡಲು ಆಯ್ಕೆಯ ಸ್ವಾತಂತ್ರ್ಯ. |
ಮಧ್ಯವರ್ತಿಗಳ ಏಕಸ್ವಾಮ್ಯ |
ಮಾರಾಟ ಮಾಡಲು ಬಹು ಆಯ್ಕೆಗಳು |
ವ್ಯಾಪಾರಿಗಳು ಬೆಲೆಗಳನ್ನು ಕೃತಕವಾಗಿ ಕಡಿಮೆ ಮಾಡಬಹುದು. |
ಸ್ಪರ್ಧಾತ್ಮಕ ಮಾರುಕಟ್ಟೆಯಿಂದ ಉತ್ತಮ ಬೆಲೆ ದೊರೆಯುವುದು |
ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ತಂದಾಗ ಯಾವ ಬೆಲೆ ನೀಡಲಾಗುತ್ತದೆಯೋ ಅದನ್ನು ಒಪ್ಪಿಕೊಳ್ಳಬೇಕು. |
ಬಾಗಿಲಲ್ಲಿಯೇ ಬೆಲೆಗೆ ಚೌಕಾಶಿ ಮಾಡಬಹುದು. |
ಉತ್ಪಾದಕರು ಮತ್ತು ಗ್ರಾಹಕರು ಭರಿಸುವ ಮಾರುಕಟ್ಟೆ ಶುಲ್ಕ, ಕಮೀಶನ್ ಮತ್ತು ಇತರೆ ಶುಲ್ಕಗಳನ್ನು ಪಾವತಿಸುವುದು. |
ಯಾವುದೇ ಶುಲ್ಕ, ಕಮೀಶನ್ನಗಳು ಇಲ್ಲ. ಉತ್ಪಾದಕರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ದೊಡ್ಡ ಉಳಿತಾಯ.
|
ಬೆಲೆ ವಿಸ್ತರಣೆ, ವಿಘಟಿತ ಅಥವಾ ತುಣುಕು ಮಾರುಕಟ್ಟೆಗಳು ಮತ್ತು ಮಧ್ಯವರ್ತಿಗಳ ಉದ್ದ ಸರಪಳಿ |
ಗ್ರಾಹಕರ ಪಾವತಿಯಲ್ಲಿ ಉತ್ಪಾದಕರ ಹೆಚ್ಚಿನ ಪಾಲು. ಸಾಗಾಣೆಯ ಖರ್ಚು ಕಡಿಮೆ. ಮಧ್ಯವರ್ತಿಗಳು ಕಡಿಮೆ ಅಥವಾ ಇಲ್ಲವೇ ಇಲ್ಲ. |
ಯುವಕರಿಗೆ ಕೃಷಿ ಸರಕುಗಳ ವ್ಯಾಪಾರ ಮಾಡಲು ಅವಕಾಶವಿಲ್ಲ |
ಗ್ರಾಮೀಣ ಯುವಕರಿಗೆ ವ್ಯಾಪಾರ |
ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ |
ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ, ಉತ್ತಮ ಬೆಲೆ ಪಡೆಯಲು ಸಾಧ್ಯ |
ಬಹಳ ರಾಜ್ಯಗಳಲ್ಲಿ ಕೇವಲ ಹಣ್ಣು ಮತ್ತು ತರಕಾರಿಗಳನ್ನು ಎಪಿಎಂಸಿ ಮಾರುಕಟ್ಟೆ ಹೊರಗಡೆ ಮಾರಾಟ ಮಾಡುವ ಸ್ವಾತಂತ್ರ್ಯ |
ಎಲ್ಲ ಕೃಷಿ ಉತ್ಪನ್ನಗಳ ಮಾರಾಟದ ಸ್ವಾತಂತ್ರ್ಯವನ್ನು ದೇಶದೆಲ್ಲಡೆ ಮಾರಾಟ ಮಾಡುವಂತೆ ವಿಸ್ತರಿಸಲಾಗಿದೆ |
ಸಣ್ಣ ಭೂ ಹಿಡುವಳಿದಾರರು ಇನ್‍ಪುಟ್ ಮತ್ತು ಔಟ್‍ಪುಟ್ ಮಾರುಕಟ್ಟೆಗಳಲ್ಲಿ ಪ್ರಮಾಣದ ಮತ್ತು ಚೌಕಾಶಿ ಮಾಡುವ ಹಕ್ಕನ್ನು ಹೊಂದಿಲ್ಲ. |
ಆಧುನಿಕ ಕೃಷಿ ಪರಿಕರಗಳ ಲಭ್ಯತೆ ಮಾಹಿತಿ, ಸೇವೆ ಮತ್ತು ಬೆಲೆ ರಕ್ಷಣೆ ಕೊಡುತ್ತದೆ. |
ಗುತ್ತಿಗೆ ಕೃಷಿಯು ಕೆಲವೇ ಪ್ರದೇಶದಲ್ಲಿ ಜಾರಿಯಲ್ಲಿದೆ ಮತ್ತು ಅಧಿಕಾರಿಗಳ ನಿಯಂತ್ರಣಕ್ಕೆ ಸೀಮಿತವಾಗಿದೆ |
ರೈತರ ಉತ್ಪಾದಕರ ಕಂಪನಿಗಳು ಸಣ್ಣ ರೈತರಿಗೆ ದರ ಚೌಕಾಸಿ ಮಾಡಲು ಹಾಗೂ ಉತ್ತಮ ಬೆಲೆ ಒದಗಿಸಲು ಸಹಾಯವಾಗುತ್ತವೆ. |
ರೈತರು ಮೌಲ್ಯ ಸರಪಳಿಗಳ ಭಾಗವಾಗಿಲ್ಲ |
ಮೌಲ್ಯ ಸರಪಳಿಯಲ್ಲಿ ರೈತ ಪಾಲುದಾರನಾಗಬಹುದು |
ಮಧ್ಯವರ್ತಿಗಳು ಮತ್ತು ಕಳಪೆ ಸಾಗಾಣೆಯಿಂದ ರಫ್ತಿನಲ್ಲಿ ಸ್ಪರ್ಧಾತ್ಮಕತೆ ಇಲ್ಲದಾಗಿದೆ |
ರಫ್ತು ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ.
|
ತಪ್ಪು ಕಲ್ಪನೆ ಮತ್ತು ನಿಜಸ್ಥಿತಿ
ತಪ್ಪು ಕಲ್ಪನೆ |
ನಿಜಸ್ಥಿತಿ |
ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗುವುದಿಲ್ಲ |
ರೈತರು ಖರೀದಾರರನ್ನು ಆಯ್ಕೆ ಮಾಡಬಹುದು ಮತ್ತು ಬೆಲೆಯನ್ನು ನಿರ್ಧರಿಸಬಹುದು |
ರೈತರಿಗೆ ವಿವಾದ ಬಗೆಹರಿಸಲು ಅವಕಾಶವಿಲ್ಲ |
ಸ್ಥಳೀಯ ಎಸ್‍ಡಿಎಂಗಳ (ಜಿಲ್ಲಾಧಿಕಾರಿಗಳು) ಮಟ್ಟದಲ್ಲಿ ಕನಿಷ್ಠ ವೆಚ್ಚದೊಂದಿಗೆ ಸಮಯಕ್ಕೆ ಅನುಗುಣವಾಗಿ ವಿವಾದ ಪರಿಹಾರವನ್ನು ಕಾಯಿದೆ ಉತ್ತೇಜಿಸುತ್ತದೆ |
ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗುವುದಿಲ್ಲ |
ಖರೀದಿದಾರರು ಅವತ್ತಿನ ದಿನವೇ ಅಥವಾ ಒಪ್ಪಂದದ ಪ್ರಕಾರ 3 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕು |
ರೈತ ಸಂಸ್ಥೆಗಳಿಗೆ ಲಾಭವಾಗುವುದಿಲ್ಲ |
ಎಲ್ಲ ರೈತ ಸಂಸ್ಥೆಗಳನ್ನು “ರೈತರು” ಎಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ರೈತರಂತೆಯೇ ಎಲ್ಲ ಲಾಭಗಳು ದೊರೆಯುತ್ತವೆ.
|
ಕನಿಷ್ಠ ಬೆಂಬಲ ಬೆಲೆ ಮುಂದುವರೆಯುವದಿಲ್ಲ |
ಕನಿಷ್ಠ ಬೆಂಬಲ ಬೆಲೆ ಮೊದಲಿನಂತೆಯೇ ಮುಂದುವರೆಯುತ್ತದೆ. |
ಎಫ್‍ಸಿಐ ರೈತರಿಂದ ಖರೀದಿ ಮಾಡುವುದನ್ನು ನಿಲ್ಲಿಸುತ್ತದೆ |
ಎಫ್‍ಸಿಐ ಮತ್ತು ಇತರೆ ಸರಕಾರಿ ಎಜೆನ್ಸಿಗಳು ರೈತರಿಂದ ಖರೀದಿಮಾಡುವುದನ್ನು ಮುಂದುವರೆಸುತ್ತವೆ. |
ಎಪಿಎಂಸಿ ಹೊರಗೆ ಮಾರಾಟ ಮಾಡಲು ರೈತರಿಗೆ ಪರವಾನಿಗೆ ಬೇಕು |
ನೋಂದಣಿ / ವಹಿವಾಟು ಶುಲ್ಕವಿಲ್ಲದೆ ರೈತರು ಎಪಿಎಂಸಿ ಹೊರಗೆ ಉತ್ತಮ ಬೆಲೆ ನೀಡುವ ಖರೀದಿದಾರರಿಗೆ ಮಾರಾಟ ಮಾಡಬಹುದು |
ಎಪಿಎಂಸಿ ಮಾರುಕಟ್ಟೆಗಳು ಇನ್ನು ಮುಂದೆ ಮುಚ್ಚುತ್ತವೆ. |
ಎಪಿಎಂಸಿ ಮಾರುಕಟ್ಟೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ. |
ಕಾಯ್ದೆಯು ರಾಜ್ಯ ಎಪಿಎಂಸಿಗಳ ಹಕ್ಕುಗಳನ್ನು ಆಕ್ರಮಿಸುತ್ತದೆ. |
ಕಾಯ್ದೆಯು ಎಪಿಎಂಸಿಯನ್ನು ದುರ್ಬಲಗೊಳಿಸುವುದಿಲ್ಲ. ಇದು ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. |
ರೈತರ ಪಾವತಿಯನ್ನು ಕಾಯ್ದೆಯು ರಕ್ಷಿಸುವುದಿಲ್ಲ |
ರೈತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕಾಯ್ದೆ ಸಾಕಷ್ಟು ಮಾರ್ಗಸೂಚಿಗಳನ್ನು ಒದಗಿಸುತ್ತದೆ |
ಕಾರ್ಪೊರೇಟ್ ಸಂಸ್ಥೆಗಳಿಂದ ಕೃಷಿ ಭೂಮಿ ಸ್ವಾಧೀನಕ್ಕೆ ಈ ಕಾಯ್ದೆಯು ಕಾರಣವಾಗುತ್ತದೆ |
ಕಾಯ್ದೆಯು ರೈತರ ಭೂಮಿಯನ್ನು ವರ್ಗಾಯಿಸಲು ಪ್ರತಿಬಂಧಿಸುತ್ತದೆ. |
ಸಮಾಲೋಚನೆ ಪ್ರಕ್ರಿಯೆ
ಕೃಷಿ ವಿಷಯಗಳ ಕುರಿತು ಪಾಲುದಾರರ ಸಮಾಲೋಚನೆಗಳು ಕಳೆದ ಎರಡು ದಶಕಗಳಿಂದ ವಿವಿಧ ಸರಕಾರಗಳಿಂದ ನಡೆದಿದೆ.
- ಶ್ರೀ ಶಂಕರಲಾಲ್ ಗುರು ನೇತೃತ್ವದ ತಜ್ಞರ ಸಮಿತಿ (2000) ಅಗತ್ಯ ಸರಕುಗಳ ಕಾಯಿದೆ, 1955, ನೇರ ಮಾರುಕಟ್ಟೆ ಪ್ರೋತ್ಸಾಹ ಮತ್ತು ಖಾಸಗಿ ವಲಯವು ಮಾರುಕಟ್ಟೆ ವಿಸ್ತರಣಾ ಸೇವೆಗಳಲ್ಲಿ ಪಾಲ್ಗೊಳ್ಳುವಿಕೆಯನ್ನು ಶಿಫಾರಸ್ಸು ಮಾಡಿದೆ.
- ಅಂತರ್-ಮಂತ್ರಾಲಯ ಕಾರ್ಯಪಡೆ (2002) ಮಾರುಕಟ್ಟೆ ವ್ಯವಸ್ಥೆಯನ್ನು ಪುನುರುಜ್ಜೀವನಗೊಳಿಸುವುದು, ಎಪಿಎಂಸಿ ಕಾಯ್ದೆಯಲ್ಲಿನ ಸುಧಾರಣೆಗಳನ್ನು ತರಲು ಮತ್ತು ಗುತ್ತಿಗೆ ಕೃಷಿಯನ್ನು ಉತ್ತೇಜಿಸುವದನ್ನು ಶಿಫಾರಸ್ಸು ಮಾಡಿದೆ.
- ಕೃಷಿ ಮಾರುಕಟ್ಟೆ ಕುರಿತು ಮಾದರಿ ಎಪಿಎಂಸಿ ಕಾಯ್ದೆ 2003 ನ್ನು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ರೂಪಿಸಲಾಗಿದೆ. ಮಾದರಿ ಎಪಿಎಂಸಿ ನಿಯಮಗಳನ್ನು 2007 ರಲ್ಲಿ ರೂಪಿಸಲಾಯಿತು
ಮಾದರಿ ಎಪಿಎಂಸಿ ಕಾಯ್ದೆ 2003 ನ್ನು 18 ರಾಜ್ಯಗಳು ಅಂಗೀಕರಿಸಿವೆ
ಶ್ರೀ ಎಂ.ಎಸ್.ಸ್ವಾಮಿನಾಥನ್ (2006) ನೇತೃತ್ವದಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಏಕೀಕೃತ ಮಾರುಕಟ್ಟೆಯನ್ನು ಪ್ರೋತ್ಸಾಹಿಸಲು ಶಿಫಾರಸ್ಸು ಮಾಡಿದೆ.
- ವ್ಯಾಪಕವಾದ ಸಮಾಲೋಚನೆಗಾಗಿ ರಾಜ್ಯ ಸರಕಾರದ ಕೃಷಿ ಮಾರುಕಟ್ಟೆ ಉಸ್ತುವಾರಿ ಸಚಿವರ ಸಮಿತಿಯನ್ನು ರಚಿಸಲಾಯಿತು (2010)
- ತುಂಡು ತುಂಡಾದ ಮಾರುಕಟ್ಟೆಗಳನ್ನು ತೆಗೆದುಹಾಕುವುದು ಮತ್ತು ಕೃಷಿ ಉತ್ಪಾದನೆ ಮಾರಾಟಕ್ಕಾಗಿ ರಾಷ್ಟ್ರೀಯ ಮಾರುಕಟ್ಟೆಯನ್ನು ಸ್ಥಾಪಿಸುವುದು.
5 ರಾಜ್ಯಗಳು ಅಳವಡಿಸಿಕೊಂಡಿವೆ.
- ಕೃಷಿ ಸುಗ್ರೀವಾಜ್ಞೆ (ಜೂನ್ 2020) ಗಳನ್ನು ಪ್ರಕಟಣೆ ಮಾಡುವುದಕ್ಕಿಂತ ಮೊದಲು ರಾಜ್ಯಗಳೊಡನೆ ಸತತವಾಗಿ ಸಮಾಲೋಚನೆ ಮಾಡಲಾಗಿದೆ.
- ಕೃಷಿ ಸಮುದಯಾದಲ್ಲಿ, ಎಫ.ಪಿ.ಒ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಒಂದು ರಾಷ್ಟ್ರ, ಒಂದು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಮಾಲೋಚನೆ ಪ್ರಕ್ರಿಯೆ - ನಡೆದು ಬಂದ ಹಾದಿ
ವರ್ಷ ಕ್ರಮಗಳು
2001 ತಜ್ಞರ ಸಮಿತಿ ವರದಿ: ಕೃಷಿ ಸಚಿವಾಲಯ
2002 ಕೃಷಿ ಮಾರುಕಟ್ಟೆ ಸುಧಾರಣೆಗಳ ಕುರಿತು ಅಂತರ- ಮಂತ್ರಾಲಯಗಳ ಕಾರ್ಯಪಡೆಯ ವರದಿ
2003 ಮಾದರಿ ಎಪಿಎಂಸಿ ಕಾಯ್ದೆ 2003 ನ್ನು ರಾಜ್ಯಗಳಿಗೆ ಸುತ್ತೋಲೆ ಮುಖಾಂತರ ಕೊಡಲಾಯಿತು
2004-2006 ರೈತರ ರಾಷ್ಟ್ರೀಯ ಆಯೋಗ
2007 ಮಾದರಿ ಎಪಿಎಂಸಿ ನಿಯಮಗಳು, 2007 ನ್ನು ಪ್ರಕಟಿಸಲಾಯಿತು
2005 ಇ-ನಾಮ್ ಪ್ರಾರಂಭಿಸಲಾಯಿತು
2013 ಸುಧಾರಣೆಗಳನ್ನು ಉತ್ತೇಜಿಸಲು ಕೃಷಿ ಮಾರುಕಟ್ಟೆ ಉಸ್ತುವಾರಿ ವಹಿಸಿದಂತಹ ರಾಜ್ಯ ಸಚಿವರ ಸಮಿತಿ ವರದಿ
2016 ಕೃಷಿ ಅಭಿವೃದ್ಧಿಗಾಗಿ ನೀತಿ ಆಯೋಗದ ಕಾರ್ಯಪಡೆ
2017 ರೈತರ ಆದಾಯ ದ್ವಿಗುಣಗೊಳಿಸುವ ಸಮಿತಿ ವರದಿ, ಮಾದರಿ ಎಪಿಎಲ್‍ಎಂ ಕಾಯ್ದೆ, 2017
2018 ಮಾದರಿ ಗುತ್ತಿಗೆ ಕೃಷಿ ಕಾಯ್ದೆ, 2018, ಕಾರ್ಯಾಚರಣೆಯ ಮಾರ್ಗಸೂಚಿಗಳು
2019 ಮುಖ್ಯಮಂತ್ರಿಗಳ ಉನ್ನತ ಅಧಿಕಾರ ಸಮಿತಿ
2020 ಕೃಷಿ ಮಾರುಕಟ್ಟೆ ಸುಧಾರಣೆಗೆ ಸಂಸತ್ತಿನಲ್ಲಿ ಐತಿಹಾಸಿಕ 3 ಮಸೂದೆಗಳನ್ನು ಪರಿಚಯಿಸಲಾಯಿತು
ಮಾಹಿತಿ: ಕೃಷಿ ವಿಜ್ಞಾನ ಕೇಂದ್ರ, ಇಂಡಿ